- ಕರೋನಾ ನಡುವೆ ಜನತೆಗೆ ವರುಣಾಘಾತ
- ಕೊಚ್ಚಿ ಹೋದ ಜನರ ಬದುಕು
- ತರಕಾರಿ, ಬೆಳೆ, ಮನೆ ಮಠ ಆಸ್ತಿ ಹಾನಿ
ಬೆಂಗಳೂರು: ಕರೋನಾ ರಾಕ್ಷಸನ ಹೊಡೆತಕ್ಕೆ ಸಿಲುಕಿ ಕಂಗಾಲಾಗಿದ್ದ ಜನ ಈ ಬಾರಿ ಮಳೆ ಹೊಡೆತದಿಂದ ತೊಂದರೆಗೆ ಈಡಾಗಿದ್ದಾರೆ.
ರಾಜ್ಯದಲ್ಲಿ ಕಳೆದ ಒಂದು ವಾರದಿಂದ 11 ಜಿಲ್ಲೆಗಳಲ್ಲಿ ಅಕಾಲಿಕ ಹಿಂಗಾರು ಮಳೆ ಅಬ್ಬರಿಸುತ್ತಿದೆ. ಅದರಲ್ಲೂ ಉತ್ತರ ಕರ್ನಾಟಕ, ಮಧ್ಯ ಕರ್ನಾಟಕದಲ್ಲಿ ಅಪಾರ ಬೆಳೆ, ಮನೆ ನಾಶವಾಗಿದ್ದು, 5ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.
ರಾಜಧಾನಿ ಬೆಂಗಳೂರು, ಮೈಸೂರು, ಮಂಡ್ಯ ಸೇರಿ ಎಲ್ಲೆಡೆ ಭಾರಿ ಮಳೆಯಾಗಿದೆ. ಇನ್ನೂ ಮುಂದಿನ 3 ದಿನ ಭಾರೀ ಮಳೆ ಸೂಚನೆ ಇದೆ. ಈ ನಡುವೆ ಮಳೆ ಹಾನಿಯಿಂದ ತರಕಾರಿ, ಅಗತ್ಯ ದಿನಸಿ, ಆಹಾರ ಬೆಳೆ ನಾಶವಾಗಿದೆ. ಇದೀಗ ಕರೋನಾ ಬರೆಗೆ ಮತ್ತಷ್ಟು ತುಪ್ಪ ಸುರಿದಂತಾಗಿದೆ. ಜಲಾಶಯ ಭರ್ತಿ ಹಿನ್ನೆಲೆ ಹಳ್ಳಕ್ಕೆ ಭಾರೀ ಪ್ರಮಾಣದ ನೀರು ಹರಿಸಲಾಗಿದೆ. ಉತ್ತರ ಕರ್ನಾಟಕದಲ್ಲಿ ಬದುಕು ಅಕ್ಷರಶಃ ಬೀದಿಗೆ ಬಿದ್ದಿದೆ. ಜಿಲ್ಲೆಗಳಲ್ಲಿ ಮಳೆ ಅಬ್ಬರಿಸಿಸುತ್ತಿದೆ. ಜನತೆ ಎಚ್ಚರವಾಗಿರಬೇಕು. ಸರ್ಕಾರ ಕಷ್ಟದಲ್ಲಿರುವವರ ದನಿಯಾಗಬೇಕು.