- ಕೊಲೆ ಮಾಡಿದ್ದಕ್ಕೆ ಪ್ರತಿಕಾರವಾಗಿ ಈ ಕೊಲೆ…!
ಮಂಗಳೂರು: ಮಂಗಳೂರಿನ ಬಿ.ಸಿ.ರೋಡ್ನ ಫ್ಲ್ಯಾಟ್ ಒಂದರಲ್ಲಿ ನಟ ಸುರೇಂದ್ರ ಬಂಟ್ವಾಳ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೆÇಲೀಸರು ಭಾನುವಾರ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಪೆÇಲೀಸ್ ಮೂಲಗಳ ಪ್ರಕಾರ ಬಂಟ್ವಾಳ ಸತೀಶ ಕುಲಾಲ್ ಹಾಗೂ ಕಿನ್ನಿಗೋಳಿಯ ಗಿರೀಶ್ ಎಂಬ ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧಿತರು ಕೇರಳದಿಂದ ಬಂಟ್ವಾಳಕ್ಕೆ ಬರುತ್ತಿರುವ ಮಾಹಿತಿ ಪಡೆದ ಪೆÇಲೀಸರು ಮುಡಿಪು ಬಳಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಆರೋಪಿಗಳಿಬ್ಬರು ಕಾಸರಗೋಡು ಕಡೆಯಿಂದ ಬಾಡಿಗೆ ವಾಹನದಲ್ಲಿ ಬಂಟ್ವಾಳ ಕಡೆ ಶನಿವಾರ ರಾತ್ರಿ ಬರುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕಾರನ್ನು ತಡೆದು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ.
3 ದಿನಗಳ ಹಿಂದೆ ಬಂಟ್ವಾಳದ ಅಪಾರ್ಟಮೆಂಟ್ನಲ್ಲಿ ಸುರೇಂದ್ರ ಬಂಟ್ವಾಳ ಕೊಲೆಯಾಗಿತ್ತು. ನಂತರ ಸುರೇಂದ್ರ ಬಂಟ್ವಾಳನ ಆಪ್ತ ಎನ್ನಲಾದ ಸತೀಶ್ ಎಂಬಾತ ಅಡಿಯೊ ಕಳುಹಿಸಿದ್ದು, ಸುರೇಂದ್ರ ಬಂಟ್ವಾಳ ಕೊಲೆ ಮಾಡಿರುವುದು ನಾನೇ. ಇದು ಉಡುಪಿಯ ಕಿಶನ್ ಹೆಗ್ಡೆ ಕೊಲೆಗೆ ಪ್ರತೀಕಾರ ಎಂದು ತಿಳಿಸಿದ್ದ. ಆದಾದ ನಾಲ್ಕು ದಿನದ ಬಳಿಕ ಕೊಲೆ ಆರೋಪಿಗಳಿಬ್ಬರನ್ನು ಪೆÇಲೀಸರು ಬಂಧಿಸಿದ್ದಾರೆ.
ಯಾರು ಈ ನಟ?: ಸುವರ್ಣದೀರ್ಘ ಸಂಧಿ ಸೇರಿದಂತೆ ಕೆಲ ತುಳು ಚಿತ್ರಗಳಲ್ಲಿ ಅಭಿನಯಿಸಿರುವ ತುಳು ಚಿತ್ರ ನಟ, ರೌಡಿಶೀಟರ್ ಸುರೇಂದ್ರ ಬಂಟ್ವಾಳ್ ಅವರನ್ನು ಹಾಡುಹಗಲೇ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.
2018ರಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಬಂಟ್ವಾಳ ಪೇಟೆಯಲ್ಲಿ ನಡೆದ ತಲವಾರು ದಾಳಿ ಪ್ರಕರಣದಲ್ಲಿ ಸುರೇಂದ್ರ ಬಂಟ್ವಾಳ್ ಹೆಸರು ಕೇಳಿಬಂದಿತ್ತು. ಬಳಿಕ ಅವರನ್ನು ಕಾಸರಗೋಡಿನ ಕುಂಬ್ಳೆ ಬಳಿ ಪೆÇಲೀಸರು ಬಂಧಿಸಿ ಕರೆತಂದಿದ್ದರು.ಬಲಪಂಥೀಯ ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದ ಸುರೇಂದ್ರ ರೌಡಿಶೀಟರ್ ಆಗಿದ್ದು ಬಳಿಕ ಕಾಂಗ್ರೆಸ್ ಸೇರಿದ್ದರು. ಅವರು ಚಾಲಿಪೆÇೀಲಿಲು ತುಳು ಸಿನಿಮಾದಲ್ಲಿ ನಟಿಸಿದ್ದರು.