ಕೊಪ್ಪದಲ್ಲಿ ಉದ್ಯೋಗ ಮೇಳ: 20ಕ್ಕೂ ಹೆಚ್ಚು ಕಂಪನಿಗಳು ಹಾಜರ್!
– ಉದ್ಯಮಗಳಿಗೆ ಸರ್ಕಾರದ ನೆರವು ನೀಡಬೇಕು: ಶಾಸಕ ಟಿ. ಡಿ. ರಾಜೇಗೌಡ
– ಅತ್ಯುತ್ತಮ ಆಯೋಜನೆ ಮಾಡಿದ್ದ ಕೊಪ್ಪ ಸರ್ಕಾರಿ ಡಿಗ್ರಿ ಕಾಲೇಜು
NAMMUR EXPRESS NEWS
ಕೊಪ್ಪ: ಕೊಪ್ಪದ ಬಾಳಗಡಿ ಸರ್ಕಾರಿ ಡಿಗ್ರಿ ಕಾಲೇಜಲ್ಲಿ ಉದ್ಯೋಗ ಮೇಳ ನಡೆದಿದ್ದು, 20ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿದ್ದು ನೂರಾರು ಮಂದಿಗೆ ಉದ್ಯೋಗ ಸಿಕ್ಕಿದೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಎಂ.ಕಾಂ ಸ್ನಾತಕೋತ್ತರ ಅಧ್ಯಯನ ಕೇಂದ್ರ, ಕೊಪ್ಪ, ಚಿಕ್ಕಮಗಳೂರು ಜಿಲ್ಲೆ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ಚಿಕ್ಕಮಗಳೂರು ಜಿಲ್ಲೆ, ನಿರ್ಮಾಣ ಸಂಸ್ಥೆ, ಬೆಂಗಳೂರು ಇವರ ಸಹಯೋಗದೊಂದಿಗೆ ತಾಲ್ಲೂಕು ಮಟ್ಟದ ಬೃಹತ್ ಉದ್ಯೋಗ ಮೇಳ ನಡೆಯಿತು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೊಪ್ಪದಲ್ಲಿ ನಡೆದ ಉದ್ಯೋಗ ಮೇಳದ ಉದ್ಘಾಟನೆಯನ್ನು ಶೃಂಗೇರಿ ಶಾಸಕರಾದ ಟಿಡಿ ರಾಜೇಗೌಡ ನಡೆಸಿದರು.
ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ. ಮಹೇಂದ್ರ ಕಿರಿಟಿ, ಸಹಾಯಕ ಕಾರ್ಯ ಪಾಲಕ ಶ್ರೀಕುಮಾರ್ ಎಚ್ಎಸ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಜಯಂತಿ ಹಾಗೂ ಜಯಂತಿ ಬಾಯಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೊಪ್ಪ ಪ್ರಾಂಶುಪಾಲರಾದ ಡಾ. ಅನಂತ ಎಸ್, ಜಿಲ್ಲಾ ಉದ್ಯೋಗ ಅಧಿಕಾರಿಗಳಾದ ಮಂಜುನಾಥ ಕೆ. ಡಿ, ಪ್ಲೇಸ್ಮೆಂಟ್ ಮ್ಯಾನೇಜರ್ ನಾಗರಾಜ, ಪ್ಲೇಸ್ಮೆಂಟ್ ಸೆಲ್ ಅಧಿಕಾರಿಗಳಾದ ಸತೀಶ್ ಎಸ್ ಡಿ, ಐ ಕ್ಯೂ ಎ ಸಿ ಸಂಚಾಲಕರಾದ ಡಾ. ನಿರಂಜನ ಸೇರಿದಂತೆ ಹಲವರು ಇದ್ದರು.
ಸಂಜೆವರೆಗೂ ಇಂಟರ್ವ್ಯೂ!
ಬೆಂಗಳೂರು, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯ 27ಕ್ಕೂ ಹೆಚ್ಚು ಕಂಪನಿಗಳು ಆಗಮಿಸಿ ಸಂದರ್ಶನ ನಡೆಸಿ ತಮ್ಮ ಕಂಪನಿಗೆ ಬೇಕಾದ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡರು.
ಖುಷಿಯಿಂದ ಭಾಗವಹಿಸಿದ್ದ ಆಕಾಂಕ್ಷಿಗಳು
ಕೊಪ್ಪ, ಎನ್. ಆರ್.ಪುರ, ಶೃಂಗೇರಿ, ತೀರ್ಥಹಳ್ಳಿ, ಬಾಳೆಹೊನ್ನೂರು, ಕಳಸ ಸೇರಿದಂತೆ ಮಲೆನಾಡಿನ ಬಹುತೇಕ ಕಾಲೇಜುಗಳ ಸುಮಾರು 1000 ಮಂದಿ ಅಂತಿಮ ವರ್ಷದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಇದನ್ನೂ ಓದಿ : ಕರಾವಳಿಯಲ್ಲಿ ಕೊರಗಜ್ಜನ ಪವಾಡ.!
HOW TO APPLY : NEET-UG COUNSELLING 2023