ಶೃಂಗೇರಿ, ಕಿಗ್ಗದಲ್ಲಿ ವಿಶೇಷ ರಾಮನ ಜಪ!
– ಶಾರದಾ ಪೀಠದಲ್ಲಿ ರಾಮಮಂದಿರ ಮಾದರಿ ಕಲಾಕೃತಿ
– ಕೊಪ್ಪ ರಾಮ ಮಂದಿರ ಸೇರಿ ಎಲ್ಲೆಡೆ ಕಾರ್ಯಕ್ರಮ
NAMMUR EXPRESS NEWS
ಶೃಂಗೇರಿ/ಕೊಪ್ಪ/ಎನ್. ಆರ್. ಪುರ: ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯ ಎಲ್ಲಾ ತಾಲೂಕಲ್ಲಿ ರಾಮನ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಬೆಳಿಗ್ಗೆಯಿಂದ ರಾತ್ರಿವರೆಗೆ ವಿವಿಧ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಶೃಂಗೇರಿ ಶಾರದಾ ಪೀಠದಲ್ಲಿ ರಾಮಮಂದಿರ ಮಾದರಿ ಕಲಾಕೃತಿಯನ್ನು ಪ್ರದರ್ಶನಕ್ಕೆ ಇಡಲಾಗಿದೆ. ಶೃಂಗೇರಿಯಲ್ಲಿ ಆದಿಶಂಕರರು ಸ್ಥಾಪಿಸಿರುವ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದ ಆವರಣದಲ್ಲಿ ರಾಮಮಂದಿರ ಮಾದರಿ ಕಲಾಕೃತಿಯನ್ನು ಪ್ರದರ್ಶನಕ್ಕೆ ಇಡಲಾಗಿದ್ದು ಇದು ಎಲ್ಲರ ಆಕರ್ಷಣೆಗೆ ಕಾರಣವಾಗಿದೆ. ರಾಮಮಂದಿರದ ಭವ್ಯತೆ ಈ ಮಾದರಿಯಲ್ಲೂ ಕಣ್ಣಿಗೆ ಕಟ್ಟಿದಂತಿದೆ. ವಿನಯ್ ರಾವ್ ಅವರು ನಿರ್ಮಿಸಿದ ಕಲಾಕೃತಿಯಾಗಿದ್ದು, ಇದು ಅವರ 55ನೇ ಪ್ರದರ್ಶನವಾಗಿದೆ. 55ನೇ ಪ್ರದರ್ಶನವು ಶ್ರೀಮಠದ ಚಂದ್ರಶೇಖರ ಭಾರತೀ ಸಭಾಂಗಣದಲ್ಲಿ ಇಡಲಾಗಿದ್ದು, ದಿನಾಂಕ 25.01.2024ರವರೆಗೆ ಪ್ರದರ್ಶನಕ್ಕೆ ಅವಕಾಶವಿದೆ.
ಕಿಗ್ಗಾದಲ್ಲಿ ರಾಮ ನಾಮ ಜಪ…!
ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ಶೃಂಗೇರಿಯ ಕಿಗ್ಗಾದಲ್ಲಿ ರಾಮನ ಜಪ ಮೊಳಗಿದೆ. ಋಷ್ಯ ಶೃಂಗ ದೇವಾಲಯದಲ್ಲಿ ವಿಶೇಷ ಪೂಜೆ, ಜಪ ನಡೆದಿದೆ.
ಜಿಲ್ಲೆಯ ಎಲ್ಲೆಡೆ ರಾಮನ ಪೂಜೆ
ಕೊಪ್ಪ ತಾಲೂಕಿನ ರಾಮ ಮಂದಿರ, ಹರಿಹರಪುರ, ಎನ್ ಆರ್ ಪುರ, ಬಾಳೆಹೊನ್ನೂರು, ಜಯಪುರ, ಕಳಸ ಸೇರಿ ಎಲ್ಲಾ ಕಡೆ ವಿಶೇಷ ಪೂಜೆ ನಡೆದಿದೆ.