- 750ರತ್ತ ಕರೋನಾ ಕೇಸ್
- ದಿನ 10ಕ್ಕೂ ಹೆಚ್ಚು ಕೇಸ್
- ಕರೋನಾ ನೆಪ: ಜನರ ಕೆಲಸಕ್ಕೆ ತೊಂದರೆ!?
ತೀರ್ಥಹಳ್ಳಿ: ಕರೋನಾ ಆರ್ಭಟ ದಿನೇ ದಿನೇ ತೀರ್ಥಹಳ್ಳಿಯಲ್ಲಿ ಹೆಚ್ಚುತ್ತಿದೆ.
ತೀರ್ಥಹಳ್ಳಿ ತಾಲೂಕಿನಲ್ಲಿ ಶುಕ್ರವಾರ 12 ಕರೋನಾ ಪ್ರಕರಣಗಳು ದಾಖಲಾಗಿವೆ.
ತೀರ್ಥಹಳ್ಳಿ ತಾಲೂಕಲ್ಲಿ ಈವರೆಗೆ 750ರತ್ತ ಕರೋನಾ ಪ್ರಕರಣ ಬಂದಿದೆ.
ತೀರ್ಥಹಳ್ಳಿ ತಾಲೂಕಲ್ಲಿ ಎಲ್ಲೆಲ್ಲಿ..? :
ಕೋಣಂದೂರು -1, ಶಂಕರಹಳ್ಳಿ- 1,ಕೈಮರ -1, ಕೋಡ್ಲು -1
ಮುಂಡುಗಿನಮನೆ -1
ಮಠದ ಗದ್ದೆ -1
ಮೇಲಿನ ಕುರುವಳ್ಳಿ -1
ಪಿಡಬ್ಲೂಡಿ ಕ್ವಾರ್ಟಸ್ -1
ಸೊಪ್ಪುಗುಡ್ಡೆ-1
ಬಿ.ಅಗ್ರಹಾರ-1
ಜಂಬವಳ್ಳಿ -1
ಯಡವತ್ತಿ-1ಯಲ್ಲಿ ಕೇಸ್ ದಾಖಲಾಗಿದೆ.
ಪ್ರತಿ ಹಳ್ಳಿಯಲ್ಲಿ ಕರೋನಾ ಪರೀಕ್ಷೆ ನಡೆಯುತ್ತಿದೆ. ಪರೀಕ್ಷೆ ಮಾಡಿಸಲು ತೀರ್ಥಹಳ್ಳಿ ತಾಲೂಕು ಮತ್ತು ಪಟ್ಟಣ ಆಡಳಿತ ಮನವಿ ಮಾಡಿದೆ.
ಕರೋನಾ ಕಳ್ಳತನ!: ಕರೋನಾದಿಂದ ಒಂದು ಕಡೆ ಕಳ್ಳರು ವಾಹನ, ಮನೆ, ಮೊಬೈಲ್ ಕಳ್ಳತನಕ್ಕೆ ಮುಂದಾದರೆ ಇನ್ನೊಂದು ಕಡೆ ಆಸ್ಪತ್ರೆಗಳು ಕರೋನಾ ಹೆಸರಲ್ಲಿ ಸುಲಿಗೆ ಮಾಡುತ್ತಿವೆ ಎಂಬ ದೂರು ಕೇಳಿ ಬಂದಿದೆ.
ಸರ್ಕಾರಿ ಅಧಿಕಾರಿಗಳು, ನೌಕರರು ಕರೋನಾ ನೆಪ ಹೇಳಿಕೊಂಡು ಜನರ ಕೆಲಸ ತಡ ಮಾಡುತ್ತಿದ್ದಾರೆ. ಈ ಬಗ್ಗೆ ತಾಲೂಕು ಆಡಳಿತ ಗಮನಿಸಬೇಕು.
ಮಾಸ್ಕ್, ಅಂತರ ಕಾಪಾಡಿ ಜನತೆ ಕೂಡ ಕರೋನಾ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಬೇಕು.
ರಾಜ್ಯದ ಎಲ್ಲಾ ಸುದ್ದಿಗಳಿಗಾಗಿ “NAMMUR EXPRESS” ಫೇಸ್ಬುಕ್ ಮತ್ತು ಯೂಟ್ಯೂಬ್ ಲೈಕ್ ಮಾಡಿ, ಸಬ್ಸ್ಕ್ರೈಬ್ ಆಗಿರಿ.ವಾಟ್ಸಾಪ್ನಲ್ಲಿ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು, ಊರು, ತಾಲೂಕು ವಾಟ್ಸಾಪ್ ಮಾಡಿರಿ
ಶೀಘ್ರದಲ್ಲಿ ಪತ್ರಿಕೆ, ಚಾನೆಲ್, ವೆಬ್, ಆಪ್, ನ್ಯೂಸ್ ನೆಟ್ವರ್ಕ್ ಶುರುವಾಗಲಿದೆ. ನಿಮ್ಮ ಎಲ್ಲಾ ಸ್ನೇಹಿತರು, ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು..!.