- ಆಯುಧ ಪೂಜೆ ಮಾಡಿ ಪೂಜಿಸಿದ ಜನ
- ದೇವಾಲಯದಲ್ಲಿ ಪೂಜೆ: ಸರಳ ಮೆರವಣಿಗೆ
- ಹುಲಿವೇಷ ಮಾತ್ರ ರಂಗು: ಕರೋನಾ ಗುಂಗು
ತೀರ್ಥಹಳ್ಳಿ: ಕರೋನಾ ಹಿನ್ನೆಲೆ ಈ ಸಲ ದಸರಾ ಹಬ್ಬ ಸಂಭ್ರಮ ಕಳೆದುಕೊಂಡಿದೆ. ಎಲ್ಲೆಡೆ ಸರಳ ದಸರಾ ಆಚರಣೆ ಮಾಡಲಾಗುತ್ತದೆ. ಈ ನಡುವೆ ತೀರ್ಥಹಳ್ಳಿ ರಾಮೇಶ್ವರ ದೇವಸ್ಥಾನದಲ್ಲಿ ಈ ಸಲ ಬೆಳಿಗ್ಗೆ 8 ಗಂಟೆಗೆ ಚಂಡಿಕಾ ಹೋಮ, ಪ್ರಾರ್ಥನೆ, ದೇವಸ್ಥಾನದಲ್ಲಿ ಪಂಚಾಮೃತ, ರಾಮೇಶ್ವರನಿಗೆ ರುದ್ರಾಭಿಷೇಕ ನಡೆಯಲಿದೆ.
12 ಗಂಟೆಗೆ ಮಹಾ ಮಂಗಳಾರತಿ, ಚಂಡಿಕಾಹೋಮದ ಪೂರ್ಣಾಹುತಿ, ಸಂಜೆ 4 ಗಂಟೆಗೆ ದೇಗುಲದಿಂದ ಪಲ್ಲಕ್ಕಿ ಉತ್ಸವ, ಹುಲಿವೇಷ, ಚಂಡೆ ವಾದ್ಯದ ಮೆರವಣಿಗೆಯೊಂದಿಗೆ ಸಂಜೆ 6ಕ್ಕೆ ಕುಶಾವತಿ ತಲುಪಲಿದೆ. ಈ ಅಲ್ಲಿ ಪೂಜೆ ಬಳಿಕ ಬನ್ನಿ ಮುಡಿಯಲಾಗುತ್ತದೆ.
ಆಯುಧ ಪೂಜೆ ಸಂಭ್ರಮ: ತೀರ್ಥಹಳ್ಳಿಯ ಪಟ್ಟಣ ಸೇರಿ ಹಳ್ಳಿ ಹಳ್ಳಿಗಳಲ್ಲಿ ಆಯುಧ ಪೂಜೆಯನ್ನು ಸಂಭ್ರಮ ಸಡಗರದಿಂದ ಸರಳವಾಗಿ ಆಚರಣೆ ಮಾಡಲಾಯಿತು. ಪ್ರತಿಯೊಂದು ಆಟೋ, ಬಸ್, ಕಾರು ನಿಲ್ದಾಣಗಳಲ್ಲಿ ಪೂಜೆ ನಡೆಯಿತು. ಅಲಂಕಾರ, ದೀಪಾಲಂಕಾರದ ಮೂಲಕ ಸಿಟಿ ರಂಗೇರಿತ್ತು. ಧರ್ಮಸ್ಥಳ ಸಂಘದ ಕಚೇರಿ ಸೇರಿ ಎಲ್ಲಾ ಕಚೇರಿಗಳಲ್ಲಿ ಆಯುಧ ಪೂಜೆ ಮಾಡಲಾಯಿತು.