- 12ನೇ ವರ್ಷಾಚರಣೆ ಅಂಗವಾಗಿ ವಿಶೇಷ ಅಫರ್, ವಿವಿಧ ಗಿಫ್ಟ್
- ಗ್ರಾಹಕರಿಗೆ 10 ಲಕ್ಷ ರೂ.,ಮೌಲ್ಯದ ಚಿನ್ನಾಭರಣ ಉಡುಗೊರೆ
- ತೀರ್ಥಹಳ್ಳಿಯ ಶೋ ರೂಂನಲ್ಲಿ “ಸರಳ ಕಾರ್ಯಕ್ರಮದ ರಂಗು”
ತೀರ್ಥಹಳ್ಳಿ: ಮಲೆನಾಡಿನ ಹೆಸರಾಂತ ಚಿನ್ನದ ಮಳಿಗೆ ನ್ಯಾಷನಲ್ ಗೋಲ್ಡ್ ಅಂಡ್ ಡೈಮಂಡ್ಸ್ ತನ್ನ 12ನೇ ವರ್ಷದ ವರ್ಷಾಚರಣೆ ಹಾಗೂ ವಿಜಯ ದಶಮಿ, ದಸರಾ ಅಂಗವಾಗಿ ಗ್ರಾಹಕರಿಗೆ 10 ಲಕ್ಷ ಮೌಲ್ಯದ ಚಿನ್ನಾಭರಣ ಉಡುಗೊರೆ ಮತ್ತು ಗೃಹೋಪಯೋಗಿ ವಸ್ತುಗಳ ಗಿಫ್ಟ್ ನೀಡುತ್ತಿದೆ.
ಪ್ರತಿ ತಿಂಗಳು 25ರಂದು ತಿಂಗಳ ಬಂಪರ್ ಡ್ರಾ ನಡೆಯಲಿದ್ದು, ಒಂದು ಲಕ್ಷ, 50 ಸಾವಿರ, 25 ಸಾವಿರ ಮೌಲ್ಯದ ಚಿನ್ನಾಭರಣ ಸಿಗಲಿದೆ. ಡಿಸೆಂಬರ್ 25ರ ವಾರ್ಷಿಕ ಬಂಪರ್ ಡ್ರಾನಲ್ಲಿ 3 ಲಕ್ಷ ಮೌಲ್ಯದ ಚಿನ್ನಾಭರಣ ಸಿಗಲಿದೆ. ಮೊದಲ ಬಹುಮಾನ 1.5 ಲಕ್ಷದ ಚಿನ್ನಾಭರಣ, ದ್ವಿತೀಯ 75 ಸಾವಿರ ಮೌಲ್ಯದ ಚಿನ್ನಾಭರಣ, ತೃತೀಯ 50 ಸಾವಿರದ ಚಿನ್ನಾಭರಣ, 25 ಸಾವಿರ ಮೌಲ್ಯದ ಚಿನ್ನಾಭರಣದ ಸಮಾಧಾನಕರ ಬಹುಮಾನ ಕೂಡ ಇರಲಿದೆ.
ಪ್ರತಿ ಖರೀದಿಗೂ ಆಕರ್ಷಕ ಗೃಹೋಪಯೋಗಿ ವಸ್ತು ಉಚಿತವಾಗಿ ಸಿಗಲಿದೆ. ಪ್ರತಿ 5000 ರೂ.ಖರೀದಿಗೆ ಉಚಿತ ಕೂಪನ್ ಸಿಗಲಿದೆ. ಚಿನ್ನದ ನಾಣ್ಯ, ಗಟ್ಟಿ ಖರೀದಿಗೆ ಈ ನಿಯಮ ಅನ್ವಯಿಸುವುದಿಲ್ಲ. 12ನೇವಾರ್ಷಿಕೋತ್ಸವದ ಅಂಗವಾಗಿ ಡಿಸೆಂಬರ್ 25ರಂದು ಬಂಪರ್ ಬಹುಮಾನದ ಡ್ರಾ ಮಾಡಲಾಗುವುದು.
ವಾರ್ಷಿಕೋತ್ಸವದ ಸಂಭ್ರಮ!: ತೀರ್ಥಹಳ್ಳಿಯ ಆಜಾದ್ ರಸ್ತೆಯಲ್ಲಿರುವ ಮಳಿಗೆಯಲ್ಲಿ ಅ.18ರಂದು ಶೋ ರೂಂನ 12ನೇ ವರ್ಷದ ವರ್ಷಾಚರಣೆ ಕಾರ್ಯಕ್ರಮ ನಡೆಯಿತು. ಈ ವೇಳೆ ಸಂಸ್ಥೆಯ ಮುಖ್ಯಸ್ಥ ಇಬ್ರಾಹಿಂ ಷರೀಫ್ ಬಂಪರ್ ಬಹುಮಾನ ಡ್ರಾ ಉದ್ಘಾಟಿಸಿದರು. ವಾರ್ಷಿಕ ಡ್ರಾವನ್ನು ಸಂಸ್ಥೆಯ ಪಾಲುದಾರರಾದ ಅಬ್ದುಲ್ ರೆಹಮಾನ್ ಉದ್ಘಾಟಿಸಿದರು. ಉಚಿತ ಆಕರ್ಷಕ ಗೃಹೋಪಯೋಗಿ ಉಪಕರಣ ಯೋಜನೆಗೆ ಪಾಲುದಾರರಾದ ಅಬ್ದುಲ್ ಕಲಾಂ ಚಾಲನೆ ನೀಡಿದರು. ಪಾಲುದಾರರಾದ ಯೂಸಫ್ ಹೈದರ್, ಸುಲೇಮಾನ್, ಕಬೀರ್, ಶಾಹಿಲ್, ಸಲ್ಮಾನ್, ಹಿತೈಶಿಗಳಾದ ಪ್ರಶಾಂತ್ ಹೆಗ್ಗಾರ್, ಕಾರ್ತಿಕ ಇದ್ದರು. ಗುಣಮಟ್ಟ ಮತ್ತು ಸೇವೆಯಲ್ಲಿ ನ್ಯಾಷನಲ್ ಗೋಲ್ಡ್ ಅಂಡ್ ಡೈಮಂಡ್ಸ್ ಮಲೆನಾಡಿನಲ್ಲೇ ಗ್ರಾಹಕರ ಮೆಚ್ಚಿನ ಸಂಸ್ಥೆಯಾಗಿದೆ.
ವಾರ್ಷಿಕ ಸಮಾರಂಭದಲ್ಲಿ ಮಲ್ಲಕ್ಕಿ ರಾಘವೇಂದ್ರ, ಫೈರೋಜ್, ರಾಮಚಂದ್ರ, ನಕುಲ್ ಅವರಿಗೆ ಉಡುಗೊರೆ ನೀಡಲಾಯಿತು. ಪ್ರತಿ 10,000 ರೂ.ಮೇಲಿನ ಖರೀದಿಗೆ ಗೃಹೋಪಯೋಗಿ ವಸ್ತು ಉಚಿತವಾಗಿ ಸಿಗಲಿದೆ. ಹಬ್ಬ, ಮದುವೆ, ಇತರೆ ಸಮಾರಂಭಗಳಿಗೆ ಈ ಕೊಡುಗೆಗಳ ಅನುಕೂಲವಾಗಲಿದೆ ಎಂದು ಸಂಸ್ಥೆ ತಿಳಿಸಿದೆ.