- ಮನೆ ಬಿಡಿಸಲು ಬಂದ ಅರಣ್ಯ ಅಧಿಕಾರಿಗೆ ಥಳಿತ
- ಮೂಡಿಗೆರೆಯಲ್ಲಿ ತಾರಕಕ್ಕೇರಿದ ಅರಣ್ಯ-ಮಾನವ ಸಂಘರ್ಷ
ಚಿಕ್ಕಮಗಳೂರು: ಮಲೆನಾಡಿನಲ್ಲಿ ರೈತ ಹೋರಾಟ ಹೆಚ್ಚಾಗುತ್ತಿದೆ. ಅರಣ್ಯ ಇಲಾಖೆ ಮತ್ತು ರೈತರ ನಡುವಿನ ಸಂಘರ್ಷ ಈಗ ಅಹಿಂಸಾರೂಪ ತಾಳುತ್ತಿದೆ. ಅರಣ್ಯ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಗುಡಿಸಲು ನಿರ್ಮಾಣ ಮಾಡಿದ್ದಾರೆಂದು ಅರಣ್ಯ ಇಲಾಖೆಯ ಸಿಬ್ಬಂದಿಗಳು ಗುಡಿಸಲು ತೆರವಿಗೆ ಮುಂದಾಗಿದ್ದ ವೇಳೆ ಇಲಾಖೆಯ ಸಿಬ್ಬಂದಿಗಳ ಮೇಲೆ ಕುಟುಂಬಸ್ಥರು ದೊಣ್ಣೆಯಿಂದ ಹಲ್ಲೆ ಮಾಡಿದ ಘಟನೆ ಮೂಡಿಗೆರೆ ತಾಲೂಕಿನ ಕೂವೆ ಗ್ರಾಮದಲ್ಲಿ ನಡೆದಿದೆ. ಈ ವೀಡಿಯೋ ವೈರಲ್ ಆಗಿದೆ.
ಅರಣ್ಯ ಇಲಾಖೆಯವರು ಗುಡಿಸಲು ತೆರವಿಗೆ ಮುಂದಾಗಿದ್ದಾರೆ. ಆ ಜಾಗ ಅರಣ್ಯ ವ್ಯಾಪ್ತಿಗೆ ಸೇರಿದೆ ಅನ್ನೋ ವಾದ ಅರಣ್ಯ ಇಲಾಖೆಯದಾದರೆ, ಕುಟುಂಬಸ್ಥರು ಅದು ತಮಗೆ ಸೇರಿದ್ದೆಂದು ವಾದಿಸುತ್ತಿದ್ದಾರೆ. ಬಾಳೂರು ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಪೆÇಲೀಸರು ಕ್ರಮ ಕೈಗೊಂಡಿದ್ದಾರೆ.
ಒಟ್ಟಿನಲ್ಲಿ ಸರ್ಕಾರ ಮತ್ತು ಜನರ ಬದುಕಿನ ಹೋರಾಟ ತಾರಕಕ್ಕೇರುವ ಸಾಧ್ಯತೆ ಇದೆ. ಇತ್ತ ಕಸ್ತೂರಿ ರಂಗನ್ ವರದಿ, ಜೈವಿಕ ಅರಣ್ಯ ಯೋಜನೆಗಳು ಮತ್ತಷ್ಟು ಕಂಗೆಡಿಸಿವೆ.