- ಮುಂಜಾನೆಯಿಂದ ಸಂಜೆವರೆಗೆ ದಸರಾ ರಂಗು
- ಕುಶಾವತಿಯಲ್ಲಿ ಬನ್ನಿ ಮುಡಿದು ಪೂಜೆ
- ಹುಲಿವೇಷ, ಟ್ಯಾಬ್ಲೋ, ಚಂಡೆ ಆಕರ್ಷಣೆ!
ತೀರ್ಥಹಳ್ಳಿ: ದಸರಾ ಅಂಗವಾಗಿ ತೀರ್ಥಹಳ್ಳಿಯಲ್ಲಿ ಸರಳ ಹಾಗೂ ಸಂಭ್ರಮದ ದಸರಾ ಆಚರಣೆ ಮಾಡಲಾಯಿತು. ಸಾವಿರಾರು ಜನ ಈ ದಸರಾದಲ್ಲಿ ಭಾಗವಹಿಸಿದರು.
ಮುಂಜಾನೆಯಿಂದಲೇ ರಾಮೇಶ್ವರ ದೇಗುಲದಲ್ಲಿ ಹೋಮ, ಹವನ ನೆರವೇರಿದ್ದು, ಭಕ್ತರು ಪೂಜೆ ಸಲ್ಲಿಸಿದರು. ಮಧ್ಯಾಹ್ನ ಚಂಡಿಕಾ ಹೋಮದಲ್ಲಿ ಶಾಸಕ ಆರಗ ಜ್ಞಾನೇಂದ್ರ, ತಹಶೀಲ್ದಾರ್ ಡಾ.ಶ್ರೀಪಾದ್, ಸೊಪ್ಪುಗುಡ್ಡೆ ರಾಘವೇಂದ್ರ, ಲಯನ್ಸ್ ಪಾಂಡುರಂಗಪ್ಪ, ವಿಶ್ವನಾಥ ಶೆಟ್ಟಿ ಸೇರಿದಂತೆ ದೇವಸ್ಥಾನ ಸಮಿತಿ ಸದಸ್ಯರು ಇದ್ದರು.
ದೇವಾಲಯದಿಂದ 4 ಗಂಟೆಗೆ ಪಲ್ಲಕ್ಕಿ ಮೆರವಣಿಗೆ ಚಂಡೆ ಮತ್ತು ಕಲಾ ತಂಡಗಳೊಂದಿಗೆ ಪಟ್ಟಣದಲ್ಲಿ ಸಾಗಿತು. ಹುಲಿವೇಷ ಗಮನ ಸೆಳೆಯಿತು. ಜೊತೆಗೆ ಎಲ್ಲಾ ನಾಯಕರು ದಸರಾದಲ್ಲಿ ಭಾಗಿಯಾದರು. ಸಂಜೆ ಮೆರವಣಿಗೆಗೆ ಮಳೆಯ ಸಿಂಚನವಾಯಿತು. ತೀರ್ಥಹಳ್ಳಿ ಪಟ್ಟಣದ ಎರಡು ರಸ್ತೆಗಳ ಪಕ್ಕದಲ್ಲಿ ಜನ ನಿಂತು ದೇವರ ಪಲ್ಲಕ್ಕಿ ಉತ್ಸವ ವೀಕ್ಷಿಸಿ ಭಕ್ತಿಪರವಶರಾದರು.
ಕುಶಾವತಿಯಲ್ಲಿ ಬನ್ನಿ ಮುಡಿಯುವ ಪೂಜೆ ಮತ್ತು ದೇವರ ಪೂಜೆ ನಡೆಯಿತು. ಸಾವಿರಾರು ಜನ ಭಾಗವಹಿಸಿ ಬನ್ನಿ ಕೊಟ್ಟು ಪ್ರೀತಿ ವಿಶ್ವಾಸ ಪರಸ್ಪರ ಹಂಚಿಕೊಂಡರು. ಎಲ್ಲಾ ವರ್ಷಕ್ಕಿಂತ ಅತೀ ಕಡಿಮೆ ಜನ ಭಾಗವಹಿಸಿದ್ದರು. ಹಳ್ಳಿಗಳಿಂದ ಭಕ್ತರ ಸಂಖ್ಯೆ ಕಡಿಮೆಯಾಗಿತ್ತು. ಹುಲಿ ಕುಣಿತ ಎಲ್ಲರ ಗಮನ ಸೆಳೆಯಿತು. ಮಾರಿಕಾಂಬಾ ದೇವಸ್ಥಾನ, ಕಲ್ಲಾರೆ ಗಣಪತಿ ದೇವಾಲಯದಲ್ಲೂ ದಸರಾ ಪೂಜೆ ನಡೆಯಿತು.
ತೀರ್ಥಹಳ್ಳಿ ಕುಶಾವತಿಯಲ್ಲಿ ನಾಗರಾಜ್ ಮತ್ತು ತಪಸ್ವಿ ಗೌಡ ಮಾಲಿಕತ್ವದ ಶ್ರೀ ಚಾಮುಂಡೇಶ್ವರಿ ಸೌಂಡ್ಸ್(ಎಸ್ಸಿಎಸ್) ತೀರ್ಥಹಳ್ಳಿ ಇವರು ಅಲಂಕಾರ ಮಾಡಿದ್ದರು. ಸನ್ನಿಧಿ ಟೆಕೋರೇಟರ್ಸ್ ದೇವರ ಮೂರ್ತಿ ಸ್ಥಬ್ಧ ಚಿತ್ರ ಮಾಡಿದ್ದರು.
ಹಳ್ಳಿಗಳಲ್ಲಿ ದಸರಾ!: ಹುಂಚ, ಕಮ್ಮರಡಿ, ಕೋಣಂದೂರು, ಬೊಮ್ಮಲಾಪುರ, ಬಿದಗರಗೋಡು, ಕೊಪ್ಪ ಸೇರಿದಂತೆ ಎಲ್ಲೆಡೆ ದೇವಾಲಯಗಳಲ್ಲಿ ದಸರಾ ನಡೆಯಿತು.
1 Comment
ಸುಂದರ ಅಚ್ಚುಕಟ್ಟಾದ ಸ್ಥಳೀಯ ಸುದ್ದಿ …