- ತೀರ್ಥಹಳ್ಳಿ ರಾಮೇಶ್ವರ ದೇಗುಲ ಆವರಣ ಸ್ವಚ್ಛ
- ಹಳ್ಳಿ ಹಳ್ಳಿಯೂ ಆಗಲಿ ಸ್ವಚ್ಛ..!
ತೀರ್ಥಹಳ್ಳಿ: ಸಮಾಜ ಸೇವೆ, ಅಭಿವೃದ್ಧಿ ಯೋಜನೆಯಲ್ಲಿ ದೇಶದಲ್ಲೇ ಸದಾ ಮುಂದಿರುವ ಧರ್ಮಸ್ಥಳ ಯೋಜನೆ ಇದೀಗ ಎಲ್ಲೆಡೆ ಸ್ವಚ್ಛತೆಯತ್ತ ಹೆಜ್ಜೆ ಇಟ್ಟಿದೆ.
ಕರೋನಾ ಕಾರಣದಿಂದ ದೇಗುಲಗಳು, ಸರ್ಕಾರಿ ಜಾಗಗಳು ಕಳೆದ 6 ತಿಂಗಳಿಂದ ಹಾಳು ಬಿದ್ದಂತಿವೆ. ಈ ಹಿನ್ನೆಲೆಯಲ್ಲಿ ತೀರ್ಥಹಳ್ಳಿ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ತೀರ್ಥಹಳ್ಳಿ ಘಟಕದ ವತಿಯಿಂದ ದೇವಸ್ಥಾನದ ಆವರಣ ಸ್ವಚ್ಚತಾ ಕಾರ್ಯಕ್ರಮ ನಡೆಸಲಾಯಿತು. ಸುಮಾರು 60 ಜನ ಸದಸ್ಯರು ಭಾಗವಹಿಸಿ ಮಾದರಿಯಾದರು. ಶ್ರೀ ರಾಮೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಸೊಪ್ಪುಗುಡ್ಡೆ, ರಾಘವೇಂದ್ರ, ಸದಸ್ಯ ಕಿಶೋರ್, ಧರ್ಮಸ್ಥಳ ಸಂಘದ ಯೋಜನಾಧಿಕಾರಿಗಳಾದ ಹೇಮಲತಾ, ಸಂಘದ ಸುಬ್ರಮಣ್ಯ ಕನ್ನಂಗಿ ಸೇರಿದಂತೆ ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಗುಂಪಿನ ಸದಸ್ಯರು ಭಾಗವಹಿಸಿದ್ದರು.
ಪ್ರತಿ ಗ್ರಾಮ, ಎಲ್ಲಾ ದೇಗುಲ ಆಗಲಿ ಕ್ಲೀನ್!: ಕರೋನಾ ಕಾರಣ ಎಲ್ಲೆಡೆ ಅಸ್ವಚ್ಛತೆ ಕಾಣುತ್ತಿದೆ. ಸಮಾಜಕ್ಕೆ ಮಂಕು ಬಡಿದಂಥ ವಾತಾವರಣ ಕಂಡು ಬರುತ್ತಿದೆ.ನೆಗೆಟಿವಿಟಿ ಹೆಚ್ಚಾಗಿದೆ. ಆದ್ದರಿಂದ ಪ್ರತಿ ಗ್ರಾಮದ ದೇಗುಲ, ಶಾಲೆ, ಸಾರ್ವಜನಿಕ ಕಚೇರಿ ಸ್ವಚ್ಛತೆ ಆಗಬೇಕು. ಈ ಹಿನ್ನೆಲೆ ಧರ್ಮಸ್ಥಳ ಯೋಜನೆ ರಾಜ್ಯವ್ಯಾಪಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಸ್ಥಳೀಯ ಆಡಳಿತ, ಸಂಘ ಸಂಸ್ಥೆಗಳು ಸಾಥ್ ನೀಡಬೇಕು ಎಂಬುದು ಓಂಒಒUಖ ಇಘಿPಖಇSS ಕಾಳಜಿ. ರಾಜ್ಯದ ಎಲ್ಲಾ ಸುದ್ದಿಗಳಿಗಾಗಿ “ಓಂಒಒUಖ ಇಘಿPಖಇSS” ಫೇಸ್ಬುಕ್ ಮತ್ತು ಯೂಟ್ಯೂಬ್ ಲೈಕ್ ಮಾಡಿ, ಸಬ್ಸ್ಕ್ರೈಬ್ ಆಗಿರಿ.ವಾಟ್ಸಾಪ್ನಲ್ಲಿ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು, ಊರು, ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು, ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು..!.