- ಶೋಭಾಯಾತ್ರೆ, ಧಾರ್ಮಿಕ ಸಭೆ ಈ ಸಲ ಇಲ್ಲ
ಚಿಕ್ಕಮಗಳೂರು: ಶ್ರೀ ರಾಮ ಸೇನೆ ವತಿಯಿಂದ ಈ ವರ್ಷದ ದತ್ತಮಾಲಾ ಅಭಿಯಾನವನ್ನು ನ.22ರಿಂದ 26ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ತಿಳಿಸಿದ್ದಾರೆ.
ಶೋಭಾಯಾತ್ರೆ, ಧಾರ್ಮಿಕ ಸಭೆ ಮೊದಲಾದವನ್ನು ಕೈ ಬಿಡಲಾಗಿದೆ. ನ.23ರಂದು ದತ್ತಪೀಠ ಹಿಂದುಗಳಿಗೆ ಒಪ್ಪಿಸಬೇಕೆಂದು ಒತ್ತಾಯಿಸಿ ಪ್ರತಿ ಮನೆಯಲ್ಲಿ ದೀಪೆÇೀತ್ಸವ ಹಮ್ಮಿಕೊಳ್ಳಲಾಗುವುದು. ನ.24ರಂದು 10 ಸಾವಿರ ಮಂದಿಯ ಸಹಿ ಸಂಗ್ರಹಿಸಿ ಮುಖ್ಯಮಂತ್ರಿಗಳಿಗೆ ಕಳಿಸಿಕೊಡಲಾಗುವುದು. ನ.25ರಂದು ಪಡಿ ಸಂಗ್ರಹಿಸಿ ಕರೋನಾ ಮತ್ತು ಪ್ರವಾಹ ಸಂತ್ರಸ್ತರಿಗೆ ತಲುಪಿಸಲಾಗುವುದು ಎಂದರು. ಶ್ರೀರಾಮ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ್ ಶೆಟ್ಟಿ ಅಡ್ಯಾರ್, ಉಪಾಧ್ಯಕ್ಷ ಮಹೇಶ್ ಕುಮಾರ್ ಕಟ್ಟಿನಮನೆ, ಜಿಲ್ಲಾಧ್ಯಕ್ಷ ರಂಜಿತ್ ಶೆಟ್ಟಿ, ದುರ್ಗಾ ಸೇನೆಯ ಜಿಲ್ಲಾಧ್ಯಕ್ಷ ಶಾರದಮ್ಮ ಇದ್ದರು.