- ಜನ ವಸತಿ ಪ್ರದೇಶದಲ್ಲೇ ಹುಲಿ ಸಾವು: ಹಲವು ಅನುಮಾನ!
ಚಿಕ್ಕಮಗಳೂರು: ಭದ್ರಾ ಅಭಯಾರಣ್ಯದ ಜನವಸತಿ ಪ್ರದೇಶದಲ್ಲೇ ಹುಲಿ ಸಾವು ಕಂಡಿದ್ದು ಇದೀಗ ಹಲವು ಅನುಮಾನಗಳು ವ್ಯಕ್ತವಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಅಭಯಾರಣ್ಯ ವ್ಯಾಪ್ತಿಯ ತೇಗೂರು ಗುಡ್ಡದ ಬಳಿ ಸುಮಾರು 5 ರಿಂದ 6 ವರ್ಷ ಪ್ರಾಯದ ಹೆಣ್ಣು ಹುಲಿ ಕಳೆದ ಮೂರು ದಿನಗಳ ಹಿಂದೆ ಮೃತಪಟ್ಟಿದೆ. ಮರಣೋತ್ತರ ಪರೀಕ್ಷೆ ಬಳಿಕ ಹುಲಿಯ ಸಾವಿಗೆ ನಿಜವಾದ ಕಾರಣ ಏನೆಂದು ತಿಳಿದು ಬರಲಿದೆ. ಆಕಸ್ಮಿಕವಾಗಿ ಸಾವನ್ನಪ್ಪಿರುವ ಹೆಣ್ಣು ಹುಲಿಯನ್ನ ನೋಡಲು ಸ್ಥಳೀಯ ಜನರು ಹಾಗೂ ಅರಣ್ಯ ಸಿಬ್ಬಂದಿಗಳು ಬಂದಿದ್ದರು. ಜನವಸತಿ ಇರುವ ಪ್ರದೇಶದಲ್ಲಿ ಹುಲಿ ಸಾವು ಭೀತಿಯನ್ನು ಹುಟ್ಟಿಸಿದೆ. ಸಾಗರದಲ್ಲಿ ಕಾಡು ಕೋಣವೊಂದು ಸಾವನ್ನಪ್ಪಿದ್ದು ಇದೀಗ ಮಲೆನಾಡಿನಲ್ಲಿ ನಡೆದ ಈ ಘಟನೆ ಅಚ್ಚರಿ ಮೂಡಿಸಿದೆ.