- ಕೊಪ್ಪದ ಜಯಪುರ ಬಳಿ ಯುವಕರ ಅಟ್ಟಾಡಿಸಿದ ಕಾಡುಕೋಣ
ಸಾಗರ: ಕಾಡುಕೋಣವೊಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಸಾಗರ ತಾಲೂಕಿನ ಮಂಕಳಲೆ ಗ್ರಾಮ ವ್ಯಾಪ್ತಿಯ ನೀರಕೋಡ್ ಬಡಾವಣೆ ನೀಲಗಿರಿ ತೋಪಿನೊಳಗೆ ಸೋಮವಾರ ನಡೆದಿದೆ.
ಅರಣ್ಯಾಧಿಕಾರಿಗಳ ತಂಡ ಪರಿಶೀಲನೆ ನಡೆಸಿದೆ. ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ತಿಮ್ಮಪ್ಪ ಮೃತಪಟ್ಟ ಕಾಡುಕೋಣದ ಶವಪರೀಕ್ಷೆ ನಡೆಸಿದ್ದಾರೆ.
ಸಾವಿಗೆ ಕಾರಣ ತಿಳಿಯದ ಹಿನ್ನೆಲೆಯಲ್ಲಿ ಕಾಡುಕೋಣ ಶವಪರೀಕ್ಷೆ ನಡೆಸಿ ಅಂಗಾಂಗವನ್ನು ಸಂಗ್ರಹಿಸಿ ಹೆಚ್ಚಿನ ಪರೀಕ್ಷೆಗೆ ಕಳಿಸಿಕೊಡಲಾಗಿದೆ. ವರದಿ ನಂತರ ಗೊತ್ತಾಗಲಿದೆ. ಶವಪರೀಕ್ಷೆ ನಂತರ ಕಾಡುಕೋಣದ ಅಂತ್ಯಸಂಸ್ಕಾರ ನಡೆಸಲಾಯಿತು. ಸಹಾಯಕ ಅರಣ್ಯ ಸಂರಕ್ಷಣಾಕಾರಿ ಶ್ರೀಧರ್, ವಲಯ ಅರಣ್ಯಾಕಾರಿ ಡಿ.ಆರ್. ಪ್ರಮೋದ್, ಸಹಾಯಕ ವಲಯ ಅರಣ್ಯಾಕಾರಿ ಅಶೋಕ್, ಮುತ್ತಣ್ಣ, ಅರಣ್ಯ ರಕ್ಷಕ ಸತೀಶ್ ಗ್ರಾಮಸ್ಥರು ಹಾಜರಿದ್ದರು.
ಕಾಡುಕೋಣ ಅಟ್ಯಾಕ್?: ಕೊಪ್ಪ ತಾಲೂಕು ಜಯಪುರದ ಕೂಳೂರು ಬಳಿ ಧರೆಕೊಪ್ಪ ಎಂಬಲ್ಲಿ ಗದ್ದೆ ಬಳಿ ಇದ್ದ ಕಾಡುಕೋಣವನ್ನು ರೇಗಿಸಿದ ಯುವಕರ ಗುಂಪನ್ನು ಕಾಡುಕೋಣ ಅಟ್ಟಿಸಿಕೊಂಡು ಬಂದ ಪರಿಣಾಮ ಗುಂಪು ಅಂಗಡಿಯೊಳಗೆ ಓಡಿ ರಕ್ಷಣೆ ಪಡೆದ ಘಟನೆ ನಡೆದಿದೆ. ಸೋಮವಾರ ನಡೆದ ಈ ಘಟನೆ ವೈರಲ್ ಆಗಿದೆ.