
ತಲವಾರ್ನಿಂದ ಯುವಕನ ಮೇಲೆ ಹಲ್ಲೆ..!!?
– ಹಿಂದಿಯಲ್ಲಿ ಮಾತನಾಡುತ್ತಿದ್ದ ನಾಲ್ಕು ಜನರ ತಂಡ
– ಸ್ಥಳಕ್ಕೆ ಡಿವೈಎಸ್ಪಿ,ಸ್ಥಳೀಯ ಪೋಲೀಸರ ತಂಡ ಆಗಮಿಸಿ ಪರಿಶೀಲನೆ
NAMMUR EXPRESS NEWS
ಶೃಂಗೇರಿ: ತಲವಾರ್ ನಿಂದ ಯುವಕನ ಮೇಲೆ ನಾಲ್ಕು ಜನರ ಗುಂಪೊಂದು ಅಟ್ಯಾಕ್ ಮಾಡಲು ಯತ್ನಿಸಿರುವ ಘಟನೆ ಶೃಂಗೇರಿ ತಾಲ್ಲೂಕಿನ ಶಿಡ್ಲೆ ಸಮೀಪ ನಡೆದಿದೆ.
ತಡ ರಾತ್ರಿ 11 ಗಂಟೆ ಸುಮಾರಿಗೆ ಮಹೀಂದ್ರ ಜೈಲೋ XUV 500 ಕಾರಿನಲ್ಲಿ ಬಂದಿರುವ ನಾಲ್ಕು ಜನರ ಗುಂಪು ಸುಮುಖ ಎನ್ನುವ ಯುವಕನನ್ನು ಹಿಂಬಾಲಿಸಿ ಶಿಡ್ಲೆ ಸಮೀಪ ತಲವಾರ್ನಿಂದ ದಾಳಿಗೆ ಯತ್ನಿಸಿದ್ದಾರೆ. ದಾಳಿಯಲ್ಲಿ ಸುಮುಖನ ಕಾಲಿಗೆ ಗಾಯವಾಗಿದೆ. ದಾಳಿ ಮಾಡಲು ಬಂದ ನಾಲ್ಕು ಜನ ಅಪರಿಚಿತರು ಹಿಂದಿಯಲ್ಲಿ ಮಾತನಾಡುತ್ತಿದ್ದರು ಎನ್ನಲಾಗಿದೆ. ಇನ್ನು ಸ್ಥಳಕ್ಕೆ ಕೊಪ್ಪ ಡಿವೈಎಸ್ಪಿ ಬಾಲಾಜಿ ಸಿಂಗ್, ಇನ್ಸ್ಪೆಕ್ಟರ್ ಮಂಜು, ಶೃಂಗೇರಿ ಪಿ.ಎಸ್.ಐ ಜಕ್ಕಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶೃಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು ಆರೋಪಿಗಳ ಪತ್ತೆಗೆ ಪೋಲೀಸರು ಬಲೆ ಬೀಸಿದ್ದಾರೆ. ಗಾಯಾಳು ಸುಮುಖನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
