ಹುಷಾರ್… ಎಲ್ಲಾ ಕಡೆ ಇದ್ದಾರೆ ಬೈಕ್ ಕಳ್ಳರು..!
- ಸಿಕ್ಕಸಿಕ್ಕಲ್ಲಿ ಪಾರ್ಕಿಂಗ್ ಮಾಡಿದ್ರೆ ಬೈಕ್ ಮಾಯ
- ಕೊಪ್ಪದಲ್ಲಿ ಬೈಕ್ ಕಳ್ಳನ ಅರೆಸ್ಟ್ ದಮಾಡಿದ ಪೊಲೀಸರು
NAMMUR EXPRESS NEWS
ಕೊಪ್ಪ: ಇತ್ತೀಚಿಗೆ ಮಲೆನಾಡಲ್ಲಿ ಬೈಕ್ ಕಳ್ಳರ ಹಾವಳಿ ಹೆಚ್ಚಾಗಿದೆ. ಪ್ರತಿ ತಾಲೂಕಿನಲ್ಲೂ ಬೈಕ್ ಕಳ್ಳತನ ಪ್ರಕರಣ ವರದಿಯಾಗುತ್ತಿವೆ. ಆದ್ದರಿಂದ ಬೈಕ್ ಸವಾರರು ಎಚ್ಚರಿಕೆ ವಹಿಸುವುದು ಅಗತ್ಯ.
ಹೌದು. ಪಟ್ಟಣ ಸೇರಿ ಹಳ್ಳಿಗಳಲ್ಲೂ ಬೈಕ್ ಕಳ್ಳರು ತಮ್ಮ ಕೈಚಳಕ ತೋರಿಸುತ್ತಿದ್ದಾರೆ. ಈಗಾಗಲೇ ಹತ್ತಾರು ಬೈಕ್ ವಶಪಡಿಸಿಕೊಳ್ಳಲಾಗಿದೆ.
ಕೊಪ್ಪ ತಾಲ್ಲೂಕು ಮುನಿಯೂರು ಬಂಡಿಗಡಿ ಗ್ರಾಮದಲ್ಲಿ ಮನೆಯ ಮುಂಭಾಗ ನಿಲ್ಲಿಸಿದ್ದ ರೂ. 70 ಸಾವಿರ ಬೆಲೆಯ ದ್ವಿಚಕ್ರ ವಾಹನವನ್ನು ಕಳವು ಮಾಡಿದ್ದ ಓರ್ವ ಆರೋಪಿಯನ್ನು ಹರಿಹರಪುರ ಪೊಲೀಸ್ ಠಾಣೆ ಪೊಲೀಸರು ವಶಕ್ಕೆ ಪಡೆದು, ಕಳುವಾಗಿದ್ದ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಹೊಸ ಬೈಕ್ ಮೇಲೆ ಕಣ್ಣು!: ಬೈಕ್ ಕಳ್ಳರು ಹೊಸ ಬೈಕ್ ಕಳ್ಳರ ಕಣ್ಣು ಬೀಳುತ್ತಿದೆ. ಕಳೆದ ವರ್ಷ ತೀರ್ಥಹಳ್ಳಿ ಸೊಪ್ಪುಗುಡ್ಡೆಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ ರಾಯಲ್ ಎನ್ ಫಿಲ್ಡ್ ಬೈಕ್ ಬೆಳಗಾಗುವುದರೊಳಗೆ ಮಂಗಮಾಯವಾಗಿತ್ತು. ಬಳಿಕ ಅದು ಸಾಗರದಲ್ಲಿ ಪತ್ತೆಯಾಗಿತ್ತು.
ಕಂಡ ಕಂಡಲ್ಲಿ ಬೈಕ್ ನಿಲ್ಲಿಸಿ ಹೋಗುವಾಗ ಎಚ್ಚರ ವಹಿಸಬೇಕಿದೆ. ಈ ಬಗ್ಗೆ ಗಮನಿಸುವ ಅನಿವಾರ್ಯತೆ ಎದುರಾಗಿದೆ.
ಸಿಸಿಟಿವಿ ಇಲ್ಲ.. ಮಿತಿ ಮೀರಿದ ಕಳ್ಳರ ಹಾವಳಿ!
ಕೊಪ್ಪ, ತೀರ್ಥಹಳ್ಳಿ ಸೇರಿ ಬಹುತೇಕ ಪಟ್ಟಣಗಳ ಆಯಕಟ್ಟಿನ ಜಾಗದಲ್ಲಿ ಸಿಸಿಟಿವಿ ಅಳವಡಿಸಿದರೆ ಒಂದಷ್ಟು ಕಳ್ಳತನ ಪ್ರಕರಣ ಬೆಳಕಿಗೆ ಬರಲಿದೆ. ಆದರೆ ಈ ಬಗ್ಗೆ ಆಡಳಿತ ಗಮನ ವಹಿಸಬೇಕಿದೆ.