ಡಿ.14ಕ್ಕೆ ದತ್ತ ಜಯಂತಿ: ಅಂಗಡಿ ಮುಂಗಟ್ಟು ಬಂದ್..!
– ಸಸ್ಯಹಾರಿ ಹೋಟೆಲ್ಗಳನ್ನು ಹೊರತುಪಡಿಸಿ ಉಳಿದೆಲ್ಲ ಅಂಗಡಿಗಳು ಬಂದ್
– ಬೆಳಿಗ್ಗೆ 4 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ನಿಯಮ
NAMMUR EXPRESS NEWS
ಚಿಕ್ಕಮಗಳೂರು: ಡಿ.14ರ ದತ್ತ ಜಯಂತಿ ಹಿನ್ನೆಲೆ ದತ್ತಪೀಠದಲ್ಲಿ ಶ್ರೀದತ್ತಪಾದುಕೆ ದರ್ಶನಕ್ಕೆ ಲಕ್ಷಾಂತರ ದತ್ತ ಮಾಲಾಧಾರಿಗಳು,ಭಕ್ತರು ದತ್ತಪೀಠಕ್ಕೆ ಭೇಟಿನೀಡಲಿರುವುದರಿಂದ ಕಾನೂನು ಸುವ್ಯವಸ್ಥೆಯ ಸಲುವಾಗಿ ಚಿಕ್ಕಮಗಳೂರು ನಗರದಾತ್ಯಂತ ಸಸ್ಯಹಾರಿ ಹೋಟೆಲ್ಗಳನ್ನು ಹೊರತುಪಡಿಸಿ ಉಳಿದೆಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವಂತೆ ಜಿಲ್ಲಾಧಿಕಾರಿ ಮೀನಾನಾಗರಾಜ್ ಆದೇಶ ಹೊರಡಿಸಿದ್ದಾರೆ.
ಎಲ್ಲೆಲ್ಲಿ ಅಂಗಡಿಗಳು ಬಂದ್, ಸಮಯವೇನು…?
ಕರ್ನಾಟಕ ಪೋಲೀಸ್ ಕಾಯ್ದೆ1963 ರ ಕಲಂ 35 ರ ಅಡಿಯಲ್ಲಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದು ಇದರನ್ವಯ ಈ ಕೆಳಕಂಡ ರಸ್ತೆ ಹಾಗೂ ಪಟ್ಟಣ/ಗ್ರಾಮ/ಪ್ರದೇಶಗಳಲ್ಲಿ ದಿನಾಂಕ 14:12:2024 ರ ಬೆಳಿಗ್ಗೆ 4 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಸಸ್ಯಹಾರಿ ಹೋಟೆಲ್ಗಳನ್ನು ಹೊರತುಪಡಿಸಿ ಉಳಿದೆಲ್ಲ ಅಂಗಡಿ ಮುಂಗಟ್ಟುಗಳು ಬಂದ್ ಮಾಡುವಂತೆ ಆದೇಶಿಸಿದ್ದಾರೆ.
ಯಾವ ಯಾವ ಪ್ರದೇಶದಲ್ಲಿ ಅಂಗಡಿ ಮುಂಗಟ್ಟು ತೆರೆದಿರುವುದಿಲ್ಲ..??
1) ಮೂಗ್ತಿಹಳ್ಳಿಯಿಂದ ಚಿಕ್ಕಮಗಳೂರು ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದವರೆಗೆ (ಕೆ.ಎಂ ರಸ್ತೆ)
2) ಐ.ಜಿ ರಸ್ತೆ ಮತ್ತು ಆರ್.ಜಿ ರಸ್ತೆ (ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಿಂದ ರಾಮನಹಳ್ಳಿ ವರೆಗೆ) (ಈ ರಸ್ತೆಗಳಲ್ಲಿರುವ ಸಸ್ಯಹಾರಿ ಹೋಟೆಲ್ ಗಳನ್ನು ಹೊರತುಪಡಿಸಿ).
3) ಜಾಲಿಫಂಡ್ ಸರ್ಕಲ್ ನಿಂದ ಅಲ್ಲಂಪುರ, ಹಾಲೇನಹಳ್ಳಿ, ಸಿರಿ ಕಾಫಿ ಶಾಪ್/ಹೋಂ ಸ್ಟೇ, ಕೈಮರ, ಅತ್ತಿಗುಂಡಿ ಮತ್ತು ಮಲ್ಲೇನಹಳ್ಳಿ ಗ್ರಾಮ.
4) ಕೆ.ಎಂ ರಸ್ತೆ (ಶೃಂಗಾರ್ ಸರ್ಕಲ್ ನಿಂದ ಎ.ಐ.ಟಿ ಸರ್ಕಲ್ ವರೆಗೆ)
5) ಬಸವನಹಳ್ಳಿ ಮುಖ್ಯರಸ್ತೆ (ಕೆ.ಇ.ಬಿ ಈದ್ಯಾ ಬಳಿಯಿಂದ ಹನುಮಂತಪ್ಪ ವೃತ್ತದ ವರೆಗೆ)
6) ಆಲ್ದೂರು ಪಟ್ಟಣ ಹಾಗೂ ಹಾಂದಿಯಿಂದ ಭೂತನಕಾಡು ಮತ್ತು ಹಾಂದಿಯಿಂದ ವಸ್ತಾರೆವರೆಗೆ.