- ಕುವೆಂಪು ಪ್ರತಿಷ್ಠಾನದ ಹೆಸರಲ್ಲಿ ಯೂಟ್ಯೂಬ್ ಬಿಡುಗಡೆ
- 30 ನಿಮಿಷಗಳ ಸಾಕ್ಷ್ಯಚಿತ್ರ ಸಧ್ಯದಲ್ಲಿಯೇ ಬಿಡುಗಡೆ
NAMMUR EXPRESS NEWS
ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಕುಪ್ಪಳಿ ವತಿಯಿಂದ ಕುವೆಂಪು ಅವರ ವಿಚಾರಧಾರೆ ತಲುಪಿಸುವ ಉದ್ದೇಶದಿಂದ ಆಧುನಿಕ ತಂತ್ರಜ್ಞಾನದಲ್ಲಿ ಚಿತ್ರೀಕರಣ ಮಾಡಿರುವ ವಿಡಿಯೋ ಕ್ಲಿಪ್ ಬಿಡುಗಡೆ ಮಾಡಲಾಗಿದೆ.
ಕರ್ನಾಟಕದ ಪ್ರವಾಸಿ ಭೂಪಟದಲ್ಲಿ ಕುಪ್ಪಳಿ ಗಮನಾರ್ಹ ಸ್ಥಾನದಲ್ಲಿದೆ. ಸಹಸ್ರಾರು ಜನರು ಕುಪ್ಪಳಿಗೆ ಭೇಟಿ ನೀಡುತ್ತಿದ್ದಾರೆ. ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನವು, ಕವಿಮನೆ, ಕವಿಶೈಲ ಹಾಗೂ ಕುಪ್ಪಳಿಯ ಇತರೆ ಸ್ಮಾರಕಗಳನ್ನು ಹೊಸ ತಲೆಮಾರಿನ ಕನ್ನಡಿಗರಿಗೆ, ಕನ್ನಡೇತರರಿಗೆ ಪರಿಚಯಿಸುವ ಉದ್ದೇಶದಿಂದ, ಆಧುನಿಕ ತಂತ್ರಜ್ಞಾನದೊಂದಿಗೆ ಚಿತ್ರೀಕರಿಸಿ, ಹಲವು ವಿಡಿಯೋ ಕ್ಲಿಪ್ಗಳನ್ನು ಸಿದ್ಧಪಡಿಸಲಾಗಿದೆ.
ಸನ್ನಿವೇಶಕ್ಕೆ ಅನುಗುಣವಾಗಿ ಇಂಪಾದ ಹಿನ್ನೆಲೆ ಸಂಗೀತ, ಅಗತ್ಯವಿರುವ ಕಡೆ ಕುವೆಂಪು ಕವಿತೆಯ ಸಾಲುಗಳನ್ನು ಸಂಯೋಜಿಸಲಾಗಿದೆ. ಕನ್ನಡೇತರರಿಗಾಗಿ ಇಂಗ್ಲಿಷ್ ಸಬ್ಟೈಟಲ್ಗಳನ್ನು ಒದಗಿಸಲಾಗಿದೆ. ಈ ವಿಡಿಯೋ ತುಣುಕುಗಳನ್ನು ಸೋಮವಾರದಿಂದ ಪ್ರತಿಷ್ಠಾನದ ಯೂಟ್ಯೂಬ್ (ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ಕುಪ್ಪಳಿ) ಚಾನಲ್ಲಿನಲ್ಲಿ ಬಿಡುಗಡೆ ಮಾಡಲಾಗುವುದು ಸಹೃದಯರು ಇವುಗಳನ್ನು ನೋಡಿ, ಇತರರಿಗೂ ಇತರ ಸಾಮಾಜಿಕ ಮಾದ್ಯಮಗಳ ಮೂಲಕ ಹಂಚಬೇಕಾಗಿ ಪ್ರತಿಷ್ಠಾನ ವಿನಂತಿ ಮಾಡಿದೆ.
ಪ್ರತಿಷ್ಠಾನದ ಕಾರ್ಯಚಟುವಟಿಕೆಗಳನ್ನು ಕುರಿತು, ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸಿದ್ಧಪಡಿಸಿರುವ, 30 ನಿಮಿಷಗಳ ಕಾಲಾವಧಿಯ ಸಾಕ್ಷ್ಯಚಿತ್ರವು ಸಧ್ಯದಲ್ಲಿಯೇ ಬಿಡುಗಡೆಯಾಗಲಿದೆ.ಛಾಯಾಗ್ರಹಣವನ್ನು ಹೆಚ್.ಎಂ.ರಾಮಚಂದ್ರ ನಿರ್ದೇಶನವನ್ನು ಉಮಾಶಂಕರ ಸ್ವಾಮಿ ಮಾಡಿದ್ದಾರೆ.
ಕುವೆಂಪು ಅವರ ಊರಿನ ಪರಿಚಯ!
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು ದೇವಂಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಪ್ಪಳಿ ವಿಶ್ವ ಪ್ರಸಿದ್ಧ ಪ್ರತಿ ದಿನ ನೂರಾರು ಮತ್ತು ವಾರದ ಅಂತ್ಯದಲ್ಲಿ ಸಾವಿರಾರು ಪ್ರವಾಸಿಗರು, ಕುವೆಂಪು ಪ್ರೇಮಿಗಳು ಆಗಮಿಸುತ್ತಾರೆ. ಅವರಿಗೆ ಕುವೆಂಪು ಅವರ ಪರಿಚಯ, ಕುವೆಂಪು ಮನೆ, ಕುವೆಂಪು ಅವರ ಇತರೆ ಮಾಹಿತಿ ನೀಡಲು ಈ ಯೋಜನೆ ಮಾಡಲಾಗಿದೆ.