ಮಲ್ನಾಡ್ ಪ್ರಮುಖ ಸುದ್ದಿ
ಶೃಂಗೇರಿಯಲ್ಲಿ ಸರಣಿ ಕಳ್ಳತನ!
– ಮೆಡಿಕಲ್, ಅಕ್ಕಪಕ್ಕ ದಿನಸಿ ಅಂಗಡಿಯಲ್ಲಿ ಕಳ್ಳತನ
– ಕಲ್ಕಟ್ಟೆಯ ಮನೆಯೊಂದರಲ್ಲಿ ಕಳ್ಳತನ: ತನಿಖೆ
– ಶಿವಮೊಗ್ಗ: ಹಲಗೆ ಕದಿಯಲು ಬಂದು ಅತ್ತೆಯ ಕೊಂದ!
– 7 ಕೆಜಿ ಹೆಬ್ಬಾವು ಹಿಡಿದ ಸ್ನೇಕ್ ಕಿರಣ್
NAMMUR EXPRESS NEWS
ಶೃಂಗೇರಿ: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ ಸರಣಿ ಕಳ್ಳತನವಾಗಿದ್ದು ಕಳ್ಳರಿಗಾಗಿ ಪೋಲೀಸ್ ತಂಡ ಶೋಧ ನಡೆಸುತ್ತಿದ್ದಾರೆ. ಶೃಂಗೇರಿಯ ಮುಖ್ಯ ಬಸ್ ನಿಲ್ದಾಣದ ಬಳಿಯ ಇರುವ ಮೆಡಿಕಲ್ ಹಾಗೂ ಅಕ್ಕ ಪಕ್ಕದ ದಿನಸಿ ಅಂಗಡಿಯಲ್ಲಿ ತಡ ರಾತ್ರಿ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ಮೊನ್ನೆ ತಾಲೂಕಿನ ಕಲ್ಕಟ್ಟೆಯ ಮನೆಯೊಂದರಲ್ಲಿ ಕಳ್ಳತನ ನಡೆದಿತ್ತು. ಹಣ,ಚಿನ್ನ ದೊಚಿ ಪಪರರಾರಿಯಾಗಿದ್ದರು. ಈ ಎರಡು ಘಟನೆ ನಡೆದ ಸ್ಥಳಕ್ಕೆ ಶೃಂಗೇರಿ ಪೋಲೀಸ್ ಅಧಿಕಾರಿಗಳಾದ ಜಕ್ಕಣನವರ್ ತಂಡ ಭೇಟಿ ನೀಡಿ ಪರಿಶೀಲಿಸಿದೆ ಹಾಗೂ ಕಳ್ಳರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಹಲಗೆ ಕದಿಯಲು ಬಂದು ಅತ್ತೆಯ ಕೊಂದ!
ಶಿವಮೊಗ್ಗ: ಕೊಲೆ ಪ್ರಕರಣ ಆರೋಪಿಯನ್ನು ಕುಂಸಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನು ಮಹಿಳೆಯ ಸಂಬಂಧಿಯೇ ಆಗಿದ್ದು, ಹಲಗೆ ಕಳ್ಳತನಕ್ಕೆ ಹೋದಾಗ ಕೃತ್ಯ ಎಸಗಿದ್ದಾನೆ.
ಮಂಜರಿಕೊಪ್ಪ ಗ್ರಾಮದ ಎಸ್.ಆದರ್ಶ್(30) ಬಂಧಿತ. ಅದೇ ಗ್ರಾಮದಲ್ಲಿ ಒಂಟಿಯಾಗಿ ವಾಸವಿದ್ದ ಸಾವಿತ್ರಮ್ಮ (60) ಅವರನ್ನು ಗುರುವಾರ ಈತ ಹತ್ಯೆ ಮಾಡಿದ್ದ. ಕೊಲೆಯಾದ ಸಾವಿತ್ರಮ್ಮ ಬಂಧಿತ ಆದರ್ಶನ ಅತ್ತೆ. “ಸಾವಿತ್ರಮ್ಮ ಮನೆಯಲ್ಲಿ ಹಲಗೆ ಕಳವು ಮಾಡಲು ಹೋಗಿದ್ದ. ಎಚ್ಚರಗೊಂಡ ಸಾವಿತ್ರಮ್ಮ ಆದರ್ಶನನ್ನು ಪ್ರಶ್ನೆ ಮಾಡಿದ್ದರು. ಈ ಸಂದರ್ಭ ಆದರ್ಶ ಸಾವಿತ್ರಮ್ಮಳ ಹತ್ಯೆ ಮಾಡಿದ್ದ’ ಎಂದು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಮಾಧ್ಯಮಗಳಿಗೆ ವಾಟ್ಸಪ್ನಲ್ಲಿ ಮಾಹಿತಿ ನೀಡಿದ್ದಾರೆ. ಪ್ರಕರಣದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
7 ಕೆಜಿ ಹೆಬ್ಬಾವು ಹಿಡಿದ ಸ್ನೇಕ್ ಕಿರಣ್
ಶಿವಮೊಗ್ಗ: ಮನೆ ಹಿಂಭಾಗದ ಹುಲ್ಲಿನ ಪಿಂಡಿಗಳ ಅಡಿ ಅವಿತಿದ್ದ ಹೆಬ್ಬಾವನ್ನು ಉರಗ ರಕ್ಷಕ ಸ್ನೇಕ್ ಕಿರಣ್ ರಕ್ಷಣೆ ಮಾಡಿದ್ದಾರೆ. ಶಿವಮೊಗ್ಗದ ತೀರ್ಥಹಳ್ಳಿ ರಸ್ತೆಯ ಕುರುಬರ ಪಾಳ್ಯದಲ್ಲಿ ಹಾವು ಪತ್ತೆಯಾಗಿತ್ತು.
ಸುಹಾಸ್ ಎಂಬುವವರ ಮನೆ ಹಿಂಬದಿ ಹುಲ್ಲಿನ ಪಿಂಡಿಗಳನ್ನು ಇಟ್ಟಿದ್ದರು. ಬೆಳಗ್ಗೆ ಹಸುಗಳಿಗೆ ಹುಲ್ಲು ತರಲು ಹೋದಾಗ ಹಾವು ಕಾಣಿಸಿತ್ತು. ವಿಷಯ ತಿಳಿದು ಸ್ಥಳಕ್ಕೆ ತೆರಳಿದ್ದ ಸ್ನೇಕ್ ಕಿರಣ್ ಸುಮಾರು ಏಳೂವರೆ ಅಡಿ ಉದ್ದದ ಹೆಬ್ಬಾವು ರಕ್ಷಣೆ ಮಾಡಿದ್ದಾರೆ. ಈ ಹಾವು 7 ಕೆ.ಜೆ 700 ಗ್ರಾಮ್ ತೂಕವಿತ್ತು. ಶಂಕರ ವಲಯ ಅರಣ್ಯಾಧಿಕಾರಿಗಳ ಸಮುಖದಲಿ ಹೆಬ್ಬಾವನು ಸಮೀಪದ ಅರಣ್ಯಕ್ಕೆ ಬಿಟ್ಟಿದ್ದಾರೆ.