ಟಾಪ್ ನ್ಯೂಸ್ ಮಲ್ನಾಡ್
– ಅಸ್ವಸ್ಥರಾದ ಅಧಿಕಾರಿಗೆ ಸಭೆಯಲ್ಲೇ ಡಾ.ಸರ್ಜಿ ಚಿಕಿತ್ಸೆ!
– ಶಿವಮೊಗ್ಗ: ಸಭೆಯಲ್ಲಿ ದಿಢೀರ್ ಅಸ್ವಸ್ಥರಾದ ಅಧಿಕಾರಿ: ತಕ್ಷಣ ಆರೈಕೆ ಮಾಡಿದ ಡಾ.ಸರ್ಜಿ
– ಶಿವಮೊಗ್ಗ: ಹಾಡಹಗಲೇ ರೌಡಿ ಶೀಟರ್ ರಾಜೇಶ್ ಶೆಟ್ಟಿ ಹತ್ಯೆ
– ಶೃಂಗೇರಿ: ಮಲ್ನಾಡಲ್ಲಿ ತೀವ್ರಗೊಂಡ ನಕ್ಸಲ್ ಕೂಂಬಿಂಗ್ ಕಾರ್ಯಚರಣೆ!
NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ವೇಳೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿ.ಬಿ.ಕಾವೇರಿ ದಿಢೀರ್ ಅಸ್ವಸ್ಥರಾಗಿದ್ದಾರೆ. ತಕ್ಷಣ ನೆರವಿಗೆ ಧಾವಿಸಿದ ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಟರಾಜ್ ಆರೈಕೆ ಮಾಡಿದರು. ಜಿಲ್ಲಾ ಪಂಚಾಯಿತಿಯ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ನೇತೃತ್ವದಲ್ಲಿ ತ್ರೈಮಾಸಿಕ ಕೆಡಿಪಿ ಸಭೆ ಆಯೋಜಿಸಲಾಗಿತ್ತು. ಸಭೆ ಮಧ್ಯೆ ಉಸ್ತುವಾರಿ ಕಾರ್ಯದರ್ಶಿ ಬಿ.ಬಿ.ಕಾವೇರಿ ಅಸ್ವಸ್ಥರಾದರು. ವೇದಿಕೆ ಮೇಲಿದ್ದ ಸಚಿವ ಮಧು ಬಂಗಾರಪ್ಪ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೇರಿದಂತೆ ಅಧಿಕಾರಿಗಳು ಕಾವೇರಿ ಅವರ ನೆರವಿಗೆ ಧಾವಿಸಿದರು. ವೇದಿಕೆ ಮುಂಭಾಗ ಕುಳಿತಿದ್ದ ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಟರಾಜ್ ತಕ್ಷಣ ನೆರವಿಗೆ ಧಾವಿಸಿದರು. ಸಭಾಂಗಣದಿಂದ ಹೊರಗೆ ತೆರಳಲು ಎದ್ದು ನಿಂತ ಬಿ.ಬಿ.ಕಾವೇರಿ ಅವರಿಗೆ ಕೆಲವು ಕ್ಷಣ ಅಲ್ಲಿಯೇ ಕೂರುವಂತೆ ಸಲಹೆ ನೀಡಿದರು. ಸುಧಾರಿಸಕೊಂಡ ಕಾವೇರಿ ಅವರನ್ನು ಸಭಾಂಗಣದಿಂದ ಹೊರಗೆ ಕೊರೆದೊಯ್ಯಲಾಯಿತು. ಕೆಲವು ನಿಮಿಷದ ಬಳಿಕ ಜಿಲಾಧಿಕಾರಿ ಗುರುದತ್ತ ಹೆಗಡೆ ಸಭಾಂಗಣಕ್ಕೆ ಹಿಂತಿರುಗಿ, ಕಾವೇರಿ ಅವರ ಕ್ಷೇಮವಾಗಿದ್ದಾರೆ ಎಂದು ತಿಳಿಸಿದರು. ಇದೇ ವೇಳೆ ಡಾ.ಧನಂಜಯ ಸರ್ಜಿ ಅವರ ಕರ್ತವ್ಯ ಪ್ರಜ್ಞೆಗೆ ಮೆಚ್ಚುಗೆ ವ್ಯಕ್ತವಾಯಿತು.
– ಶಿವಮೊಗ್ಗ: ಹಾಡಹಗಲೇ ರೌಡಿ ಶೀಟರ್ ರಾಜೇಶ್ ಶೆಟ್ಟಿ ಹತ್ಯೆ
ಶಿವಮೊಗ್ಗ : ವಿನೋಬನಗರ ಪೊಲೀಸ್ ಠಾಣಾ
ವ್ಯಾಪ್ತಿಯ ಹಳೇ ಬೊಮ್ಮನಕಟ್ಟೆಯಲ್ಲಿ ಹಾಡಹಗಲೇ ರೌಡಿ ಶೀಟರ್ ರಾಜೇಶ್ ಶೆಟ್ಟಿಯ ಬರ್ಬರ ಹತ್ಯೆ ನಡೆದ ಘಟನೆ ನಡೆದಿದೆ. ನವುಲೆ ಆನಂದನ ಸಹಚರ ಆಗಿದ್ದ ರಾಜೇಶ್ ಶೆಟ್ಟಿ ಬಸವನ ಗುಡಿಯ ಕ್ಯಾಸೆಟ್ ಅಂಗಡಿ ಮಾಲೀಕ ರಾಘು ಶೆಟ್ಟಿ ಎಂಬಾತನ ಮರ್ಡರ್ ಕೇಸಲ್ಲಿದ್ದ ಎನ್ನಲಾಗಿದೆ. ಇತ್ತೀಚೆಗಷ್ಟೇ ತನ್ನ ವಿರೋಧಿ ಬೊಮ್ಮನಕಟ್ಟೆಯ ಕರಿಯ ವಿನಯ್ ಮೇಲೆ ಹಲ್ಲೆ ಮಾಡಿ ಅವನ ಕೈ ಬೆರಳುಗಳನ್ನು ಕತ್ತರಿಸುವಂತೆ ಹಲ್ಲೆ ಮಾಡಿದ್ದ ಎಂದು ತಿಳಿದು ಬಂದಿದೆ. ಈ ದ್ವೇಷದಿಂದಾಗಿ ಕರಿಯ ವಿನಯ್ ತಂಡ ರಾಜೇಶ್ ಶೆಟ್ಟಿ ಮೇಲೆ ಮುಗಿಬಿದ್ದು ಕೊಲೆ ಮಾಡಿದ ಎಂಬ ಸಂಕೆ ವ್ಯಕ್ತವಾಗುತ್ತಿದೆ. ಪ್ರಕರಣ ಇಂದು ಮಧ್ಯಾಹ್ನ ನಡೆದಿದ್ದು, ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ಶೃಂಗೇರಿ: ತೀವ್ರಗೊಂಡ ಕೂಂಬಿಂಗ್ ಕಾರ್ಯಚರಣೆ
ಶೃಂಗೇರಿ: ನಕ್ಸಲ್ ನಾಯಕ ವಿಕ್ರಂಗೌಡ ಹತ್ಯೆ ವೇಳೆ ನಾಪತ್ತೆಯಾದ ಕರ್ನಾಟಕದ ಐವರು ನಕ್ಸಲರಿಗಾಗಿ ಚಿಕ್ಕಮಗಳೂರು ಜಿಲ್ಲೆಯ ಸುತ್ತಮುತ್ತ ಕೂಂಬಿಂಗ್ ಕಾರ್ಯಾಚರಣೆ ತೀವ್ರಗೊಂಡಿದೆ.
ಶೃಂಗೇರಿ ಕೆರೆಕಟ್ಟೆ ವ್ಯಾಪ್ತಿಯ ಸುತ್ತಿನಗುಡ್ಡದಲ್ಲಿ ತೀವ್ರಗೊಂಡ ಕೂಂಬಿಂಗ್ ನಡೆಯುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಕೆರೆಕಟ್ಟೆ ವ್ಯಾಪ್ತಿಯ ಸುತ್ತಿನ ಗುಡ್ಡದಲ್ಲಿ ಮಧ್ಯ ರಾತ್ರಿ ಕಾಡಿನ ನಡುವೆ ಟರ್ಚ್ ಲೈಟ್ ಕಾಣಿಸಿದ ಹಿನ್ನೆಲೆ ನಕ್ಸಲ್ ನಿಗ್ರಹ ಸಿಬ್ಬಂದಿಗಳಿಂದ ತೀವ್ರ ಕಾರ್ಯಚರಣೆ ನಡೆಯುತ್ತಿದೆ.
ಮೂಡಿಗೆರೆ ತಾಲೂಕಿನ ಅಂಗಡಿ ಗ್ರಾಮದ ಮೋಸ್ಟ್ ವಾಂಟೆಡ್ ನಕ್ಸಲ್ ಸುರೇಶ್ 2013 ರಲ್ಲಿ ಕೇರಳದ ಆಸ್ಪತ್ರೆಯಲ್ಲಿ ಪೊಲೀಸರಿಗೆ ಸಿಕ್ಕಿಹಾಕಿಕೊಂಡಿದ್ದ. ಈ ವೇಳೆ ಸುರೇಶ್ ಪತ್ನಿಯಾಗಿರುವ ವನಜಾಕ್ಷಿ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಮಾಹಿತಿ ತಿಳಿದಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಸೂಚನೆಯಂತೆ ಶರಣಾಗತಿಗೆ ಮೊದಲ ಆದ್ಯತೆ ನೀಡಿದೆ