- ಯಾವ್ಯಾವ ಕ್ಷೇತ್ರದಲ್ಲಿ ಎಷ್ಟು ಮತದಾರರಿದ್ದಾರೆ?
NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಾದ್ಯಂತ 14.58 ಲಕ್ಷ ಮತದಾರರು ಇದ್ದಾರೆ. ಈ ಪೈಕಿ 7.22 ಲಕ್ಷ ಪುರುಷ, 7.36 ಲಕ್ಷ ಮಹಿಳಾ ಮತದಾರರಿದ್ದಾರೆ.
ಶಿವಮೊಗ್ಗ ಜಿಲ್ಲೆಯಲ್ಲಿ 14,58,680 ಮತದಾರರು ಇದ್ದಾರೆ. ಈ ಪೈಕಿ ಮಹಿಳಾ ಮತದಾರರೆ ಹೆಚ್ಚಿದ್ದಾರೆ. ಒಟ್ಟು ಮತದಾರರ ಪೈಕಿ 7,22,080 ಪುರುಷ ಮತದಾರರು, 7,36,574 ಮಹಿಳಾ ಮತದಾರರು ಇದ್ದಾರೆ. ಶಿವಮೊಗ್ಗ ಗ್ರಾಮಾಂತರದಲ್ಲಿ 1,04,640 ಪುರುಷ, 1,05,768 ಮಹಿಳಾ ಮತದಾರರಿದ್ದಾರೆ. ಭದ್ರಾವತಿಯಲ್ಲಿ 1,02,236 ಪುರುಷ, 107971 ಮಹಿಳಾ ಮತದಾರರು. ಶಿವಮೊಗ್ಗದಲ್ಲಿ 1,25,943 ಪುರುಷ, 1,31,729 ಮಹಿಳಾ ಮತದಾರರು, ತೀರ್ಥಹಳ್ಳಿಯಲ್ಲಿ 92,141 ಪುರುಷ, 94,453 ಮಹಿಳಾ ಮತದಾರರು. ಶಿಕಾರಿಪುರದಲ್ಲಿ 99,129 ಪುರುಷ, 98,311 ಮಹಿಳಾ ಮತದಾರರು. ಸೊರಬದಲ್ಲಿ 97,674 ಪುರುಷ, 95,910 ಮಹಿಳಾ ಮತದಾರರು. ಸಾಗರದಲ್ಲಿ 1,00,317 ಪುರುಷ, 1,02,432 ಮಹಿಳಾ ಮತದಾರರು ಇದ್ದಾರೆ.
ಕ್ಷೇತ್ರವಾರು ಮತದಾರರ ವಿವರ
ಕ್ಷೇತ್ರ – ಒಟ್ಟು ಮತದಾರರು
Vote : ತೀರ್ಥಹಳ್ಳಿ ವಿಧಾನ ಸಭಾ ಚುನಾವಣೆ – 2023 ಗೆಲ್ಲುವವರು ಯಾರು…?
ಶಿವಮೊಗ್ಗ ಗ್ರಾಮಾಂತರ – 2,10,412
ಭದ್ರಾವತಿ – 2,10,212
ಶಿವಮೊಗ್ಗ – 2,57,685
ತೀರ್ಥಹಳ್ಳಿ – 1,86,594
ಶಿಕಾರಿಪುರ – 1,97,443
ಸೊರಬ – 1,93,584
ಸಾಗರ – 2,02,750
ತೃತೀಯ ಲಿಂಗ ಮತದಾರರು:
ಜಿಲ್ಲೆಯಲ್ಲಿ 26 ತೃತೀಯ ಲಿಂಗ ಮತದಾರರು ಇದ್ದಾರೆ. ಈ ಪೈಕಿ ಶಿವಮೊಗ್ಗ ಗ್ರಾಮಾಂತರದಲ್ಲಿ 4, ಭದ್ರಾವತಿಯಲ್ಲಿ 5, ಶಿವಮೊಗ್ಗದಲ್ಲಿ 13, ಶಿಕಾರಿಪುರದಲ್ಲಿ 3, ಸಾಗರದಲ್ಲಿ ಒಬ್ಬರು ತೃತೀಯ ಲಿಂಗಿ ಮತದಾರರಿದ್ದಾರೆ.