- ಮೊದಲ ದಿನವೇ ಗ್ರಾಹಕರ ಜಾತ್ರೆ: ಖರೀದಿಗೆ ಫುಲ್ರಷ್
- ಆಗುಂಬೆ ರಸ್ತೆಯಲ್ಲಿ ಉದ್ಘಾಟನೆ: ವಿಭಿನ್ನ ಚಿನ್ನಾಭರಣ
ಬ್ಯುಸಿನೆಸ್ ಡೆಸ್ಕ್: ನಮ್ಮೂರ್ ಎಕ್ಸ್ಪ್ರೆಸ್
ತೀರ್ಥಹಳ್ಳಿ: ದೇಶದ ಹೆಸರಾಂತ ಚಿನ್ನಾಭರಣಗಳ ಮಳಿಗೆ ಆಭರಣ ಜ್ಯುವೆಲ್ಲರ್ಸ್ ತೀರ್ಥಹಳ್ಳಿಯಲ್ಲಿ ಶನಿವಾರ ಆರಂಭಗೊಂಡಿದೆ. ತೀರ್ಥಹಳ್ಳಿಯ ಆಗುಂಬೆ ಬಸ್ ನಿಲ್ದಾಣ ಸಮೀಪದ ಎಚ್ಡಿಎಫ್ಸಿ ಬ್ಯಾಂಕ್ ಮುಂಭಾಗದ ಕಣ್ಮಣಿ ಕಟ್ಟಡದಲ್ಲಿ ಆರಂಭಗೊಂಡಿದ್ದು, ಮೊದಲ ದಿನವೇ ಮಳಿಗೆ ಗ್ರಾಹಕರಿಂದ ತುಂಬಿ ಹೋಗಿತ್ತು. ದಸರಾ ಹಾಗೂ ವಿಜಯ ದಶಮಿ ಹಬ್ಬದ ಅಂಗವಾಗಿ ಜನತೆ ಚಿನ್ನ ಖರೀದಿಗೆ ಆಗಮಿಸಿದ್ದರು.
ಉಡುಪಿ, ಶಿವಮೊಗ್ಗ, ಮಂಗಳೂರು, ಕಾರ್ಕಳ, ಕುಂದಾಪುರ, ಹೆಬ್ರಿ, ಬೈಂದೂರು, ಬ್ರಹ್ಮಾವರ, ಚಿಕ್ಕಮಗಳೂರು, ಪಡುಬಿಡ್ರಿ, ಕುಮಟಾ, ಬೆಳ್ತಂಗಡಿ, ಸಾಗರ, ಪಣಜಿ ಬಳಿಕ 15ನೇ ಮಳಿಗೆ ಇದಾಗಿದೆ. ಆಭರಣ ನೂತನ ಮಳಿಗೆಯು ರಾಧಾ ಎಂ.ಕಾಮತ್, ಮಧುಕರ ಎಸ್ ಕಾಮತ್, ದಯಾನಂದ ಕಾಮತ್ ಮಾರ್ಗದರ್ಶನದಲ್ಲಿ ನಡೆಯಿತು. ಸಂಸ್ಥೆಯ ಆಡಳಿತ ವರ್ಗದ ಪ್ರಮುಖರಾದ ಸುಭಾಷ್ ಎಂ ಕಾಮತ್, ಮಹೇಶ್ ಎಂ ಕಾಮತ್, ಸಂಧ್ಯಾ ಎಸ್ ಕಾಮತ್, ವೀಣಾ ಕಾಮತ್ ಇದ್ದರು. ಡಾ.ಅರುಣ್ ಕುಡ್ವ, ಕ್ಷಮಾ ಅರುಣ್ ಕುಡ್ವ ಶುಭ ಹಾರೈಸಿದರು. ತೀರ್ಥಹಳ್ಳಿ ಶಾಸಕರಾದ ಆರಗ ಜ್ಞಾನೇಂದ್ರ, ಕಟ್ಟಡ ಮಾಲಿಕರಾದ ಯಶೋಧಾ, ರಾಮಚಂದ್ರ ಹಾಗೂ ಶಿವಾನಂದ ಶುಭ ಹಾರೈಸಿದರು.
1935ರಿಂದ ಶುರುವಾದ ಪರಿಶುದ್ಧ ಮತ್ತು ಉತ್ತಮ ಗುಣಮಟ್ಟದ ಚಿನ್ನಕ್ಕೆ ಕರಾವಳಿ ಮತ್ತು ಮಲೆನಾಡಲ್ಲಿ ಹೆಸರುವಾಸಿಯಾಗಿರುವ ಆಭರಣ ಜ್ಯುವೆಲ್ಲರ್ಸ್ನಲ್ಲಿ ಕರಕುಶಲ ಕೆಲಸ, ಶ್ರೇಷ್ಠ ವಿನ್ಯಾಸ ಲಭ್ಯತೆ, ಗುಣಮಟ್ಟ, ಗ್ರಾಹಕ ಸೇವೆ ಹೆಸರುವಾಸಿಯಾಗಿದೆ.
ತನ್ನ ಎಲ್ಲಾ ಮಳಿಗೆಯಲ್ಲಿ ಚಿನ್ನ, ಬೆಳ್ಳಿ, ವಜ್ರ, ಪ್ಲಾಟಿನಂ, ಬೆಲೆ ಬಾಳುವ ಮುತ್ತು ಹರಳುಗಳ ಪಾರಂಪರಿಕ ಮತ್ತು ಆಧುನಿಕ ವಿನ್ಯಾಸಗಳು ದೊರೆಯಲಿವೆ.
ಬೆಳ್ಳಿಯ ಪೂಜಾ ಸಾಮಾಗ್ರಿಗಳು, ಬೆಳ್ಳಿ ವಸ್ತುಗಳು ಲಭ್ಯವಿವೆ.