ಮಲ್ಪೆ ಬೀಚಲ್ಲಿ ಜೀಪ್ ಓಡಿಸಿ ಹುಚ್ಚಾಟ: ಕೇಸ್
– ಉಡುಪಿ: ವಾಕಿಂಗ್ ತೆರಳಿದ್ದ ವೃದ್ಧನ ಮೇಲೆ ಹಲ್ಲೆಗೈದ ದುಷ್ಕರ್ಮಿಗಳು
ಮಂಗಳೂರು: ಏಣಿಗೆ ಕರೆಂಟ್ ತಗಲಿ ವ್ಯಕ್ತಿಯ ಸಾವು
NAMMUR EXPRESS NEWS
ಮಲ್ಪೆ : ಪ್ರವಾಸಿ ತಾಣವಾಗಿರುವ ಮಲ್ಪೆ ಬೀಚ್ ಮಧ್ಯೆ ಅಪಾಯಕಾರಿ ರೀತಿಯಲ್ಲಿ ಜೀಪು ಚಲಾಯಿಸಿದ ಇಬ್ಬರ ವಿರುದ್ಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಗಳೂರಿನ ಭಾರತ್ ಮತ್ತು ನಂಜಿಗೌಡ ಎಂಬವರು ಡಿ.5ರಂದು ಮಧ್ಯಾಹ್ನ ಬೀಚ್ನ ಸಾರ್ವಜನಿಕ ಶೌಚಾಲಯದಿಂದ ಫಿಶರ್ ಮ್ಯಾನ್ ಹೋಟೆಲ್ಗೆ ಬೀಚ್ ಮಧ್ಯದಲ್ಲಿ ಬೀಚ್ ಮಧ್ಯದಲ್ಲಿ ಜೀಪ್ ಚಲಾಯಿಸಿಕೊಂಡು ಬಂದು ನಿಲ್ಲಿಸಿದ್ದು, ಬೀಚ್ಗೆ ಯಾವುದೇ ವಾಹನ ಪ್ರವೇಶವಿಲ್ಲದೇ, ಮಹಿಳೆಯರು ಮಕ್ಕಳು ಸೇರಿದಂತೆ ಸುಮಾರು ಜನ ತುಂಬಿರುವ ಜೀಪನ್ನು ಬೀಚ್ ಮಧ್ಯದಲ್ಲಿ ಜೀವಕ್ಕೆ ಅಪಾಯಕಾರಿಯಾಗಿ ಚಲಾಯಿಸುವುದಾಗಿ ದೂರಲಾಗಿದೆ.
ಮೊಬೈಲ್,ಪರ್ಸ್ ಕದ್ದು ಪರಾರಿ ಆದ ಕಳ್ಳರು
ಉಡುಪಿ: ಮರೆವು ಕಾಯಿಲೆಯಿಂದ ಬಳಲುತ್ತಿದ್ದ ವೃದ್ಧರೊಬ್ಬರಿಗೆ ಅಪರಿಚಿತರ ತಂಡ ಹಲ್ಲೆ ನಡೆಸಿ ಸುಲಿಗೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 76 ಬಡಗಬೆಟ್ಟು ಗ್ರಾಮದ ಬೈಲೂರು ನಿವಾಸಿ ಸಂಜೀವ (೮೨) ಎಂಬವರು ಒಂದು ವರ್ಷದಿಂದ ಮರೆವು ಖಾಯಿಲೆಯಿಂದ ಬಳಲುತ್ತಿದ್ದು, ನ.೩೦ರಂದು ಬೆಳಗ್ಗೆ ಮನೆಯಿಂದ ವಾಕಿಂಗ್ಗೆ ತೆರಳಿದ್ದರು. ಈ ವೇಳೆ ಇಬ್ಬರು ಅಪರಿಚಿತ ವ್ಯಕ್ತಿಗಳು ಸಂಜೀವ ಅವರಿಗೆ ಹಲ್ಲೆ ಮಾಡಿ ಮೊಬೈಲ್, ಪರ್ಸ್ ಮತ್ತು ಚಿನ್ನದ ಉಂಗುರವನ್ನು ಸುಲಿಗೆ ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ. ಹಲ್ಲೆಯಿಂದ ಗಾಯಗೊಂಡಿರುವ ಅವರು ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರೆಂಟ್ ತಗಲಿ ವ್ಯಕ್ತಿಯ ಸಾವು
ಏಣಿ ಮೂಲಕ ವಿದ್ಯುತ್ ಪ್ರವಹಿಸಿ ಕಾರ್ಮಿಕ ಮೃತಪಟ್ಟ ಘಟನೆ ಅಳಪೆ ಗ್ರಾಮದ ಶಿಲ್ಪ ಪಡ್ಡುವಿನಲ್ಲಿ ನಡೆದಿದೆ. ಬಂಟ್ವಾಳ ಅಬ್ದುಲ್ ರೆಹಮಾನ್ (43) ಮೃತರು ಹೆನ್ರಿ ಡಿ’ಸೋಜಾ ಎಂಬವರ ಮನೆಯಲ್ಲಿ ಮೇಲ್ಟಾವಣಿ ಬಳಿ ಕಬ್ಬಿಣದ ಏಣಿ ಮೇಲೆ ನಿಂತು ಪೈಟಿಂಗ್ ಮಾಡುತ್ತಿದ್ದಾಗ ಪಕ್ಕದಲ್ಲಿದ್ದ ಹೈಟೆನ್ಸನ್ ವೈರ್ ತಾಗಿ ವಿದ್ಯುತ್ ಪ್ರವಹಿಸಿ ಕೆಳಗೆ ಕುಸಿದು ಬಿದ್ದರು. ಅವರ ಜತೆ ಕೆಲಸ ಮಾಡುತ್ತಿದ್ದ ರಾಜೇಶ್ ಮತ್ತು ಬಾಲಕೃಷ್ಣ ಅವರು ಆಸ್ಪತ್ರೆಗೆ ಕರೆದೊಯ್ದರು ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.