ಎನ್.ಆರ್ ಪುರದಲ್ಲಿ ಗಾಂಜಾ ಮಾರಾಟ: ಅರೆಸ್ಟ್!
– ಮೂವರ ಆರೋಪಿಗಳ ಬಂಧನ: ಮತ್ತಷ್ಟು ತನಿಖೆ
– ಭದ್ರಾವತಿ: ಗೋವಿನ ಕಬಾಬ್ ಮಾರಾಟ ಅಂಗಡಿ ಮೇಲೆ ದೂರು
-ಶಿವಮೊಗ್ಗ: ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ವಿರುದ್ಧ ದೂರು
NAMMUR EXPRESS NEWS
ಚಿಕ್ಕಮಗಳೂರು: ನರಸಿಂಹರಾಜಪುರ ತಾಲೂಕಿನ ಸೌತಿಕೆರೆ ಸಮೀಪದ ಸರ್ಕಲ್ ನಲ್ಲಿ ನಿಂತು ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಪೊಲೀಸರು ಮೂರು ಜನರನ್ನು ಬಂಧಿಸಿದ್ದಾರೆ. ಗುರುವಾರ ಸಂಜೆ 7 ಗಂಟೆ ಸುಮಾರಿಗೆ ಪೊಲೀಸರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಪೊಲೀಸರು ಸೌತಿಕೆರೆ ಸಮೀಪದ ಸರ್ಕಲ್ ಗೆ ಹೋದಾಗ ಬಿಳಿ ಕಾರು, 1 ಬೈಕ್ ನಿಲ್ಲಿಸಿಕೊಂಡು 3 ಜನರು ನಿಂತಿದ್ದು ಪೊಲೀಸರನ್ನು ಕಂಡು ಪರಾರಿಯಾಗುವ ಯತ್ನ ನಡೆಸಿದರು. ತಕ್ಷಣ ಪೊಲೀಸರು 3 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಗಾಂಜಾ ಮಾರಾಟಕ್ಕೆ ಬಂದಿದ್ದರು ಎಂಬುದು ಸಾಬೀತಾಗಿದೆ . ಪ್ರಮುಖ ಆರೋಪಿ ಬೆಳ್ಳೂರಿನ ನಿಕ್ಷೇಪಗೌಡ ಎಂಬುವರ ಜೇಬಿನಲ್ಲಿ 75 ಗ್ರಾಂ ಗಾಂಜ ಪತ್ತೆಯಾಗಿದೆ.
ಇನ್ನಿಬ್ಬರು ಆರೋಪಿಗಳನ್ನು ಕಳಸದ ಅರುಣ,ನರಸಿಂಹರಾಜಪುರ ಪಟ್ಟಣದ ಹರ್ಷದ್ ಅಯೂಬ್ ಎಂದು ಗುರುತಿಸಲಾಗಿದೆ. ಪ್ರಮುಖ ಆರೋಪಿ ನಿಕ್ಷೇಪಗೌಡ ಈ ಹಿಂದೆ ಉಡುಪಿಯಲ್ಲಿ 20 ಕೆಜಿ ಗಾಂಜಾ ಮಾರಾಟದ ಕೇಸಿನಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸರ ವಿಚಾರಣೆಯಿಂದ ತಿಳಿದು ಬಂದಿದೆ. ಇನ್ನಿಬ್ಬರು ಆರೋಪಿಗಳು ಗಾಂಜಾ ಖರೀದಿಗೆ ಬಂದಿದ್ದರು ಎನ್ನಲಾಗಿದೆ. ಭದ್ರಾವತಿ ಕಡೆಯಿಂದ ಆರೋಪಿಗೆ ಗಾಂಜಾ ಬಂದಿದೆ ಎಂದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ. 3 ಜನ ಆರೋಪಿಗಳನ್ನು ಪೊಲೀಸರು ಶುಕ್ರವಾರ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಗಾಂಜಾ ಮಾರಾಟದ ಕೇಸನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತೀವ್ರ ತನಿಖೆ ಪ್ರಾರಂಭಿಸಿದ್ದಾರೆ.
ಗೋವಿನ ಕಬಾಬ್ ಮಾರಾಟ ಅಂಗಡಿ ಮೇಲೆ ದೂರು
ಭದ್ರಾವತಿ: ಭದ್ರಾವತಿಯಲ್ಲಿ ಗೋವು ಮಾಂಸದಿಂದ ತಯಾರಿಸಿದ ಗೋ ಕಬಾಬ್ ಮಾರಾಟ ಅಂಗಡಿಯ ಮೇಲೆ ಹಿಂದೂ ಸಂಘಟನೆ ಭದ್ರಾವತಿ ಹಳೇ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಗೋಮಾಂಸ ನಿಷೇಧ ಕಾಯ್ಧೆ ಜಾರಿಯಲ್ಲಿದ್ದರೂ ಭದ್ರಾವತಿಯಲ್ಲಿ ಯಥೇಚ್ಛವಾಗಿ ಗೋಮಾಂಸ ಮಾರಾಟ ಮತ್ತು ಕಬಾಬ್ ಮಾರಾಟ ಮಳಿಗೆಗಳು ಪತ್ತೆಯಾಗುತ್ತಿದೆ ಎಂದು ಹಿಂದೂ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ. ತರೀಕೆರೆ ರಸ್ತೆಯಲ್ಲಿರುವ ಸಾದತ್ ದರ್ಗಾಬಳಿ ಗೋಮಾಂಸದಿಂದ ತಯಾರಿಸುವ ಕಬಾಬ್ ನ್ನ ಓರ್ವ ವ್ಯಕ್ತಿ ಮಾರಾಟ ಮಾಡುತ್ತಿದ್ದಾನೆ ಎಂಬ ಖಚಿತ ಮಾಹಿತಿ ಲಭ್ಯವಾದ ಹಿನ್ನಲೆಯಲ್ಲಿ ಹಿಂದೂ ಜಾಗರಣೆ ವೇದಿಕೆಯ ದೇವರಾಜ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ನಂತರ ಸ್ನೇಹಿತರಿಗೆ ಕಾಬಾಬ್ ಖರೀದಿಸಿ ಠಾಣೆಗೆ ತರುವಂತೆ ಸೂಚಿಸಿದ್ದಾರೆ. ಸ್ನೇಹಿತರಿಬ್ಬರು ಭದ್ರಾವತಿ ಹಳೇ ನಗರ ಪೊಲೀಸ್ ಠಾಣೆಗೆ ಸಾದತ್ ದರ್ಗಾ ಬಳಿ ಕಬಾಬ್ ಮಾರಾಟ ಮಾಡುತ್ತಿದ್ದವನಿಂದ ಕಬಾಬ್ ಸಮೇತ ಹೋಗಿ ಅಂಗಡಿಯ ವಿರುದ್ಧ ದೂರು ದಾಖಲಿಸಿದ್ದಾರೆ.
ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ವಿರುದ್ಧ ದೂರು
ಶಿವಮೊಗ್ಗ: ಕಾಂಗ್ರೆಸ್ ನ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ವಿರುದ್ಧ ದಾಖಲಿಸಿರುವ ವಂಚನೆ ಪ್ರಕರಣ ವಾಪಾಸ್ ಪಡೆಯದಿದ್ದರೆ ಸುಳ್ಳು ಕೇಸಿನಲ್ಲಿ ಸಿಕ್ಕಿಸುವುದಾಗಿ ಬೆದರಿಸಿದ 27 ನೇ ವಾರ್ಡ್ ನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಶಿವಮೊಗ್ಗದ ಚಂದ್ರಶೇಖರ್ ಎಂಬುವರಿಗೆ ಚಿಕ್ಕಮಗಳೂರಿನಲ್ಲಿ ಕೈಗಾರಿಕಾ ಪ್ರದೇಶದಲ್ಲಿ ಜಾಗಕೊಡಿಸುವುದಾಗಿ ನಂಬಿಸಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಅನಿತಾ ಕುಮಾರಿ 31½ ಲಕ್ಷ ರೂ ವಂಚಿಸಿದ್ದಾರೆ ಎಂದು ಆರೋಪಿಸಿ ಶಿವಮೊಗ್ಗದ ಡಿವೈಎಸ್ಪಿ ಕಚೇರಿಗೆ ದೂರು ನೀಡಿದ್ದರು.
ಈ ವಿಚಾರದಲ್ಲಿ ಡಿವೈಎಸ್ಪಿ ಕಚೇರಿಯಿಂದ ಅಧ್ಯಕ್ಷೆಗೆ ವಿಚಾರಣೆಗೆ ಬರುವಂತೆ ಕರೆ ಬಂದಿದೆ. ಚಂದ್ರಶೇಖರ್ ಅವರ ಮನೆಯ ಬಳಿಯಿರುವ 27 ನೇ ವಾರ್ಡ್ ನ ಮಹಿಳಾ ಕಾಂಗ್ರೆಸ್ ನ ಬ್ಲಾಕ್ ಅಧ್ಯಕ್ಷೆ ಸುವರ್ಣ ನಾಗರಾಜ್ ಕರೆ ಮಾಡಿ ಅವ್ಯಾಚ್ಯ ಶಬ್ದಗಳಿಂದ ಬೈದಿದ್ದಾರೆ. ನಮ್ಮ ಅಧ್ಯಕ್ಷೆಯ ಮೇಲಿನ ಪ್ರರಣ ವಾಪಾಸ್ ಪಡೆಯಿರಿ ಇಲ್ಲವಾದಲ್ಲಿ ಪರಿಣಾಮ ನೆಟ್ಟಗಿರಲ್ಲ. ಸುಳ್ಳು ಕೇಸ್ ದಾಖಲಿಸುವುದಾಗಿ ಬೆದರಿಸಿರುವ ವಾಯ್ಸ್ ಮೆಸೇಜ್ ಕಳುಹಿಸಿದ್ದಾರೆ ಎಂದು ಎಫ್ಐಆರ್ ನಲ್ಲಿ ದಾಖಲಿಸಿದ್ದಾರೆ. ಈ ಪ್ರಕರಣವನ್ನ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.