ಸ್ವಾತಂತ್ರ್ಯ ಸಂಭ್ರಮಕ್ಕೆ ದೇಶ ಸಜ್ಜು!
– ಇಂದು ಸಂಜೆ ರಾಷ್ಟ್ರಪತಿ ಭಾಷಣ
– ದೆಹಲಿ ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ ಭಾಷಣ
NAMMUR EXPRESS NEWS
ನವದೆಹಲಿ: ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತ ಸ್ವಾತಂತ್ರೋತ್ಸವದ ಸಂಭ್ರಮದಲ್ಲಿದೆ. ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆ ಮಾಡಲು ಇಡೀ ದೇಶ ಸರ್ವ ಸನ್ನದ್ಧವಾಗಿದೆ. ಇಡೀ ದೇಶದಲ್ಲಿ ಎಲ್ಲೆಡೆ ಭಾರತ ಮಾತೆಯ ಪೂಜೆಗೆ ಜನ ಸಜ್ಜುಗೊಂಡಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಸಂಪ್ರದಾಯದಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸೋಮವಾರ (ಆಗಸ್ಟ್ 14) ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸೋಮವಾರ ಸಂಜೆ 7 ಗಂಟೆಗೆ ರಾಷ್ಟ್ರಪತಿಗಳ ಸ್ವಾತಂತ್ರೋತ್ಸವ ಸಂದೇಶ ಭಾಷಣ ನಡೆಯಲಿದೆ. ಆಲ್ ಇಂಡಿಯಾ ರೇಡಿಯೋ ಮತ್ತು ದೂರದರ್ಶನದ ಎಲ್ಲಾ ಚಾನೆಲ್ ಗಳಲ್ಲಿ ರಾಷ್ಟ್ರಪತಿಯವರ ಭಾಷಣ ನೇರ ಪ್ರಸಾರವಾಗಲಿದೆ. ರಾಷ್ಟ್ರಪತಿ ಹಿಂದಿಯಲ್ಲಿ ಮಾತನಾಡಲಿದ್ದು, ನೇರ ಪ್ರಸಾರದ ಬಳಿಕ ಭಾಷಣ ಇಂಗ್ಲಿಷ್ ಭಾಷೆಯಲ್ಲಿ ಮರು ಪ್ರಸಾರವಾಗಲಿದೆ. ರಾಷ್ಟ್ರಪತಿಗಳ ಭಾಷಣ ಹಿಂದಿ, ಇಂಗ್ಲಿಷ್ ನಲ್ಲಿ ಪ್ರಸಾರವಾದ ಬಳಿಕ ಪ್ರಾದೇಶಿಕ ದೂರ ದರ್ಶನ ವಾಹಿನಿಗಳು ಮತ್ತು ಆಕಾಶವಾಣಿಯಲ್ಲಿ ರಾತ್ರಿ 9:30ಕ್ಕೆ ಪ್ರಾದೇಶಿಕ ಭಾಷೆಗಳಲ್ಲಿ ಪ್ರಸಾರಗೊಳ್ಳಲಿದೆ.
ಆಗಸ್ಟ್ 15 ಕ್ಕೆ ಪ್ರಧಾನಿಯಿಂದ ಭಾಷಣ!
ಆಗಸ್ಟ್ 15ಕ್ಕೆ ಪ್ರಧಾನಿ ನರೇಂದ್ರ ಮೋದಿ ದೆಹಲಿಯ ಕೆಂಪುಕೋಟೆಯಲ್ಲಿ ಭಾಷಣ ಮಾಡಲಿದ್ದಾರೆ. ಬೆಳಿಗ್ಗೆ 7 ಗಂಟೆಗೆ ಕೆಂಪುಕೋಟೆ ಮೇಲೆ ಧ್ವಜಾರೋಹಣ ಮಾಡಲಿರುವ ಪ್ರಧಾನಿ, ಬಳಿಕ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ದೇಶದ ವಿವಿಧ ಭಾಗಗಳಿಂದ 1,800 ಜನರು ಈ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ರಕ್ಷಣಾ ಸಚಿವಾಲಯ ಭಾನುವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ : ತೀರ್ಥಹಳ್ಳಿ ರೆಸಾರ್ಟ್ ಅಲ್ಲಿ ಸಿಕ್ತು ವಿದೇಶಿ ಮದ್ಯ, ಪ್ರಾಣಿಗಳ ಕೊಂಬು!
HOW TO APPLY : NEET-UG COUNSELLING 2023