ಕ್ರಿಕೆಟ್ ವಿಶ್ವಕಪ್: ಸೋಲಿನ ನೋವಲ್ಲಿ ದೇಶ!
– ಛೇ..ಎಲ್ಲೆಲ್ಲೂ ಅದೇ ಚರ್ಚೆ: ಸಮಾಧಾನ
– ಆಸ್ಟ್ರೇಲಿಯಾ ವಿರುದ್ದ ಭಾರತ ಸೋತಿದ್ದೇಕೆ..?
NAMMUR EXPRESS NEWS
ವಿಶ್ವಕಪ್ನಲ್ಲಿ ಭಾರತ ಕ್ರಿಕೆಟ್ ತಂಡದ ಸೋಲನ್ನು ಭಾರತೀಯರಿಗೆ ಪಂದ್ಯ ಮುಗಿದು ಒಂದು ದಿನ ಕಳೆದರೂ ಮರೆಯಲು ಆಗುತ್ತಿಲ್ಲ. ಭಾರತೀಯ ಆಟಗಾರರು ಕಣ್ಣೀರು ಸುರಿಸಿದ್ದಾರೆ. ಎಲ್ಲೆಲ್ಲೂ ಹತಾಶೆ ಕಂಡು ಬಂತು. ಆದರೆ ಈಗ ಅದೇ ಚರ್ಚೆ ಎಲ್ಲೆಡೆ ಕಂಡು ಬರುತ್ತಿದೆ. ಲೀಗ್ ಹಂತದಲ್ಲಿ ಸತತ 9 ಪಂದ್ಯಗಳನ್ನು ಗೆದ್ದಿರುವ ಭಾರತ ಸೆಮಿಫೈನಲ್ನಲ್ಲಿ ನ್ಯೂಜಿಲೆಂಡ್ ತಂಡವನ್ನು ಭರ್ಜರಿಯಾಗಿಯೇ ಸೋಲಿಸಿ ವಿಶ್ವಕಪ್ ಫೈನಲ್ಗೆ ತಲುಪಿ ನೂರು ಕೋಟಿ ಜನರ ಮನಸು ಗೆದ್ದಿತ್ತು. ಇನ್ನೇನು ಗೆಲುವು ನಮ್ಮದೇ ಅನ್ನುವಷ್ಟರಲ್ಲಿ ಕೈಚೆಲ್ಲಿತು. ಭಾರತ 20 ವರ್ಷಗಳ ಹಿಂದಿನ ಸೇಡನ್ನು ತೀರಿಸಿಕೊಳ್ಳುತ್ತದೆ ಎಂದು ಕಾದು ಕುಳಿತಿದ್ದ ಭಾರತೀಯರಿಗೆ ಸೋಲನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಫಲಿಸಲಿಲ್ಲ ಭಾರತ ರಣತಂತ್ರ
ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನ ಪಿಚ್, ನಿರೀಕ್ಷೆಗಿಂತ ನಿಧಾನವಾಗಿ ಮತ್ತು ಶುಷ್ಕವಾಗಿದ್ದು ನಿರ್ಣಾಯಕ ಪಾತ್ರವಹಿಸಿತ್ತು. ಜೊತೆಗೆ ಭಾರತ ತಂಡ ಮಾಡಿಕೊಂಡಿದ್ದ ರಣತಂತ್ರ ಫಲಿಸಲೇ ಇಲ್ಲ. ಎರಡನೇ ಇನ್ನಿಂಗ್ಸ್ನಲ್ಲಿ ಪಿಚ್ ಸ್ವರೂಪ ಬದಲಾಗಿತ್ತು. ನಿಧಾನಗತಿಯ ಪಿಚ್ ಲಾಭ ಪಡೆಯವಲ್ಲಿ ಭಾರತ ವಿಫಲವಾಯ್ತು. ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮ್ಮಿನ್ಸ್ ಚಾಣಾಕ್ಷತೆ ಪಂದ್ಯದಲ್ಲಿ ಸಕ್ಸಸ್ ಆಗಿದೆ. ಬೌಲಿಂಗ್ ಬದಲಾವಣೆಯ ಮೂಲಕ ಭಾರತೀಯ ಆಟಗಾರರನ್ನು ಕಟ್ಟಿ ಹಾಕಿದ್ದಾರೆ.
ಆಸ್ಟ್ರೇಲಿಯಾ ತಂಡದ ಬ್ಯಾಟಿಂಗ್
ಭಾರತ ನೀಡಿದ್ದ ಗುರಿಯನ್ನು ಬೆನ್ನತ್ತಲು ಹೊರಟ ಆಸ್ಟ್ರೇಲಿಯಾ ತಂಡಕ್ಕೆ ಆರಂಭದಲ್ಲೇ ಆಕ್ರಮಣಕಾರಿ ಆಟಕ್ಕೆ ಮುಂದಾಗಿತ್ತು. ಟ್ರಾವೆಸ್ ಹೆಡ್ ಹಾಗೂ ಲಾಬುಶಂಗೆ ಉತ್ತಮ ಜೊತೆಯಾಟ ಬ್ರೇಕ್ ಮಾಡಲು ಸಾಧ್ಯವಾಗಲಿಲ್ಲ. ಇನ್ನು ಇಬ್ಬನಿ ಕಾರಣ ಒದ್ದೆಯಾದ ಚೆಂಡಿನ ಕಾರಣದಿಂದಾಗಿ ಸ್ಪಿನ್ನರ್ಗಳು ಹೆಚ್ಚು ಟರ್ನ್ ಮಾಡೋದಕ್ಕೆ ಸಾಧ್ಯವಾಗಿಲ್ಲ. ಇದು ಆಸ್ಟ್ರೇಲಿಯಾ ಆಟಗಾರರಿಗೆ ವರದಾನವಾಗಿತ್ತು. ಅಲ್ಲದೇ ಉತ್ತಮ ಜೊತೆಯಾಟಕ್ಕೂ ಸಹಕಾರಿಯಾತ್ತು.
ಆಸ್ಟ್ರೇಲಿಯಾವನ್ನು ಕಟ್ಟಿ ಹಾಕಲು ಬೌಲರ್ಗಳನ್ನು ಬಳಸಿಕೊಂಡ ರೀತಿ ಸರಿಯಾಗಿ ಇರಲಲ್ಲ. ಅಷ್ಟೇ ಅಲ್ಲ ಭಾರತ ಫೀಲ್ಡಿಂಗ್ ಕೂಡ ಹೇಳಿಕೊಳ್ಳುವಷ್ಟು ಚೆನ್ನಾಗಿ ಇರಲಿಲ್ಲ.
ಭಾರತ ಬ್ಯಾಟಿಂಗ್ ಕಳಪೆ!
ಆಸ್ಟ್ರೇಲಿಯಾದ ಪ್ರತೀ ಆಟಗಾರರು ಅದ್ಬುತ ಫೀಲ್ಡಿಂಗ್ ಭಾರತಕ್ಕೆ ಸಂಕಷ್ಟಕ್ಕೆ ನೂಕಿತ್ತು. ಇದೇ ಕಾರಣದಿಂದ ಭಾರತ ಕೇವಲ 241 ರನ್ಗಳಿಸಲಷ್ಟೇ ಸಾಧ್ಯವಾಯಿತು ಭಾರತ ತಂಡದ ಪರ ಶರ್ಮ, ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಹೊರತು ಪಡಿಸಿ ಉಳಿದ ಯಾವುದೇ ಆಟಗಾರರು ಉತ್ತಮ ಜೊತೆಯಾಟ ನೀಡುವಲ್ಲಿ ವಿಫಲವಾಗಿದ್ದು, ಭಾರತ ಸೋಲಿಗೆ ಪ್ರಮುಖ ಕಾರಣ. ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ ಆಡಲಿಲ್ಲ. ಕೆಎಲ್ ರಾಹುಲ್ ನಿಧಾನಗತಿಯ ಬ್ಯಾಟಿಂಗ್ ಭಾರತಕ್ಕೆ ಮಾರಕವಾಯಿತು. ಆದರೆ ಆಸ್ಟ್ರೇಲಿಯಾ ಬ್ಯಾಟಿಂಗ್ ಪಕ್ಕಾ ಮಾಡಿತು. ವಿಶ್ವ ಕಪ್ ಗೆದ್ದಿತು.