ಭಾರತ್ ಜೈ ಹೋ…!
– ಕ್ರಿಕೆಟ್ ಇತಿಹಾಸದಲ್ಲಿ ದಾಖಲೆ ಪುಟ ತೆರೆದ ಭಾರತ
– ನ್ಯೂಜಿಲ್ಯಾಂಡ್ ವಿರುದ್ಧ ವಿರೋಚಿತ ಗೆಲುವು
– ಕೊಹ್ಲಿ, ಶಮಿ, ಅಯ್ಯರ್ ಪಂದ್ಯದ ಹೀರೋಸ್
– ಇನ್ನೇನಿದ್ರು ಈ ವಿಶ್ವ ಕಪ್ ನಮ್ದೇ..!
NAMMUR EXPRESS NEWS
ವಿಶ್ವಕಪ್ನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ವಿಶ್ವ ದಾಖಲೆಯ 50ನೇ ಶತಕ, ಮಹಮ್ಮದ್ ಸೆಮಿ 7 ವಿಕೆಟ್ ಬೌಲಿಂಗ್ ಆರ್ಭಟ, ಶ್ರೇಯಸ್ ಅಯ್ಯರ್ ಶತಕ, ಗಿಲ್, ರೋಹಿತ್, ರಾಹುಲ್ ಬ್ಯಾಟಿಂಗ್, ಜಡೆಜಾ ಕ್ಯಾಚಿಂಗ್ ಸೇರಿ ಇಡೀ ಟೀಮ್ ಇಂಡಿಯಾ ಭರ್ಜರಿ ಆಟಕ್ಕೆ ನ್ಯೂಜಿಲೆಂಡ್ ತಂಡ ತತ್ತರಿಸಿ ಹೋಗಿದೆ. ಈ ಮೂಲಕ ಭಾರತ ನ್ಯೂಜಿಲೆಂಡ್ ವಿರುದ್ದ 70 ರನ್ಗಳ ಭರ್ಜರಿ ಗೆಲುವು ದಾಖಲಿಸಿದ್ದು, ವಿಶ್ವಕಪ್ ಫೈನಲ್ಗೆ ಪಯಣ ಬೆಳೆಸಿದೆ. ಮುಂಬೈನ ವಾಂಖಡೆ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ 2023 ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ, ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿತು. ಆರಂಭಿಕರಾದ ರೋಹಿತ ಶರ್ಮಾ ಹಾಗೂ ಶುಭಮನ್ ಗಿಲ್ ಜೋಡಿ 71 ರನ್ಗಳ ಜೊತೆಯಾಟ ಆಡಿ ರೋಹಿತ್ ಶರ್ಮಾ 47 ರನ್ ಗಳಿಸಿ ಔಟಾದರು. ಶುಭಮನ್ ಗಿಲ್ 80 ರನ್ ಗಳಿಸಿ ಕಾಲು ಪೆಟ್ಟು ಆಗಿದ್ದರಿಂದ ರಿರ್ಟೈರ್ಡ್ ಹರ್ಟ್ ಆದರು.
ನಂತರ ಬಂದ ರನ್ ಮಿಷನ್ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಅಬ್ಬರಿಸಿ ಕೊಹ್ಲಿ 113 ಎಸೆತಗಳಲ್ಲಿ 117 ರನ್ ಬಾರಿಸಿ 50 ಶತಕದ ವಿಶ್ವದಾಖಲೆಯ ಶತಕ ಸಿಡಿಸಿದರು. , ಶ್ರೇಯಸ್ ಅಯ್ಯರ್ ಕೇವಲ 70 ಎಸೆತಗಳಲ್ಲಿ 105 ರನ್ ಗಳಿಸುವ ಮೂಲಕ ಸತತ ಶತಕ ಬಾರಿಸಿದ ಕೀರ್ತಿಗೆ ಪಾತ್ರರಾದರು. ಬಳಿಕ ಕನ್ನಡಿಗ ಕೆಎಲ್ ರಾಹುಲ್ ಅತೀ ಹೆಚ್ಚು 39 ರನ್ ಗಳಿಸಿದರು. ಭಾರತ ಅಂತಿಮವಾಗಿ 50 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 397 ರನ್ ಗಳಿಸಿ 378 ಗುರಿ ನೀಡಿತು. ನ್ಯೂಜಿಲೆಂಡ್ ಪರ ಬೌಲಿಂಗ್ ಅಲ್ಲಿ ಟೀಂ ಸೌಥಿ 3 ವಿಕೆಟ್ ಪಡೆದುಕೊಂಡರೆ , ಟ್ರೆಂಟ್ ಬೌಲ್ಟ್ 1 ವಿಕೆಟ್ ಪಡೆದುಕೊಂಡಿದ್ದಾರೆ.
ಬೌಲಿಂಗ್ ಅಲ್ಲಿ ಮಿಂಚಿದ ಶಮಿ!
ಡ್ವೇನ್ ಕಾನ್ವೆ 13 ರನ್ ಗಳಿಸಿ ಆಡುತ್ತಿದ್ದಾಗ ಮೊಹಮ್ಮದ್ ಸೆಮಿ ಬಲಿ ಪಡೆದರು. ನಂತರ ಯುವ ಆಲ್ರೌಂಡರ್ ರಚಿನ್ ರವೀಂದ್ರ ಅವರನ್ನು ಕೂಡ ಸೆಮಿ ಔಟ್ ಮಾಡಿದರು. ನಂತರ ನಾಯಕ ಕೇನ್ ವಿಲಿಯಂಸನ್ ಜೊತೆಯಾದ ಮಿಚೆಲ್ ಇನ್ನಿಂಗ್ಸ್ ಕಟ್ಟಲು ಮುಂದಾಗಿ ಈ ಜೋಡಿ 2ನೇ ವಿಕೆಟ್ಗೆ ಬರೋಬ್ಬರಿ 190 ರನ್ ಗಳ ಜೊತೆಯಾಟ ಆಡಿತು. ಭಾರತದ ಬೌಲಿಂಗ್ ಪಡೆ ಇಬ್ಬರ ತಡೆಯಲು ಸುಸ್ತಾದರು. ವಿಲಿಯಂಸನ್ 69 ರನ್ ಗಳಿಸಿ ,ಮಿಚೆಲ್ 119 ಎಸೆತಗಳಲ್ಲಿ 134 ರನ್ ಸಿಡಿಸಿದರು. ಆದರೆ ಈ ಜೋಡಿಯನ್ನು ಕೂಡ ಮಹಮ್ಮದ್ ಶಮಿ ಔಟ್ ಮಾಡುವ ಮೂಲಕ ಇಂಡಿಯಾ ಗೆಲುವಲ್ಲಿ ಹೀರೋ ಆದರು. ಒಂದು ಬಾರಿ ಶಮಿ ವಿಲಿಯಮ್ಸನ್ ಕ್ಯಾಚ್ ಕೈ ಬಿಟ್ಟರು. ಆದರೆ ಅವರ ಬಲಿ ಪಡೆದರು. ಈ ಮೂಲಕ ವಿಶ್ವ ಕಪ್ ಕ್ರಿಕೆಟ್ ಅಲ್ಲಿ 50 ವಿಕೆಟ್ ಪಡೆದ ಮೊದಲ ಆಟಗಾರ ಎಂಬ ಖ್ಯಾತಿ ಪಡೆದರು.
ಬಳಿಕ ಗ್ಲೇನ್ ಫಿಲಿಫ್ 41 ರನ್ ಗಳಿಸಿದ್ದು ಹೊರತು ಪಡಿಸಿದರೆ ಉಳಿದ ಯಾವುದೇ ಆಟಗಾರರು ಕ್ರೀಸ್ನಲ್ಲಿ ಹೆಚ್ಚು ಹೊತ್ತು ನಿಲ್ಲಲು ಅವಕಾಶವನ್ನೇ ನೀಡಲಿಲ್ಲ. ಶಮಿ 9.5 ಓವರ್ ಬೌಲಿಂಗ್ ಮಾಡಿದ್ದು, 57 ರನ್ ನೀಡಿ 7 ವಿಕೆಟ್ ಕಬಳಿಸುವ ಮೂಲಕ ನ್ಯೂಜಿಲೆಂಡ್ ಆಟಗಾರರನ್ನು ಮನೆಗೆ ಕಳುಹಿಸಿದರು. ನ್ಯೂಜಿಲೆಂಡ್ ತಂಡ 48.5 ಓವರ್ಗಳಲ್ಲಿ 327 ರನ್ ಗಳಿಸುವ ಮೂಲಕ ಆಲೌಟ್ ಆಗಿ ವಿಶ್ವ ಕಪ್ ಟೂರ್ನಿಯಿಂದ ಹೊರ ಬಿದ್ದರು.
ಭಾರತ ಮತ್ತೆ ಫೈನಲ್: ದೇಶದೆಲ್ಲೆಡೆ ಸಂಭ್ರಮ!
4ನೇ ಬಾರಿ ಭಾರತ ಫೈನಲ್ ಪ್ರವೇಶ ಮಾಡಿದ್ದು 4 ಬಾರಿ ಪೈಕಿ,3 ಬಾರಿ ಗೆದ್ದಿದೆ. ಒಂದು ಬಾರಿ ಸೋತಿತ್ತು. ಈಗ ಗುರುವಾರ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವೆ ಸೆಮಿ ಫೈನಲ್ ನಡೆಯಲಿದ್ದು, ಅಲ್ಲಿ ಗೆದ್ದವರ ಮೇಲೆ ನ.19ರಂದು ಭಾರತ ಸ್ಪರ್ಧೆ ಮಾಡಲಿದೆ. ಇದೇ ಮೊದಲ ಬಾರಿಗೆ 10 ಪಂದ್ಯ ಗೆದ್ದು ಆಡಿದ ಎಲ್ಲಾ ಪಂದ್ಯ ಗೆದ್ದಿದೆ.
ಶಮಿ ಪಂದ್ಯ ಶ್ರೇಷ್ಠ: ಪ್ರಧಾನಿ ಮೆಚ್ಚುಗೆ
ಭಾರತ ತಂಡಕ್ಕೆ ಎಲ್ಲೆಡೆ ಅಭಿನಂದನೆಗಳ ಸುರಿಮಳೆ ಹರಿದು ಬರುತ್ತಿದೆ. ಪ್ರಧಾನಿ ಮೋದಿ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೊಹ್ಲಿ, ಅಯ್ಯರ್, 7 ವಿಕೆಟ್ ಸಾಧನೆ ಮಾಡಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಶಮಿಗೆ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ದೇಶದ ಮೂಲೆ ಮೂಲೆಯಲ್ಲೂ ಸಂಭ್ರಮರಾತ್ರಿ ಆಚರಣೆ ಆಯಿತು. ಪಟಾಕಿ, ಡಿಜೆ ಹಾಕಿ ಭಾರತದ ಭಾವುಟ ಹಾರಿಸಿ ಸಂಭ್ರಮಪಟ್ಟರು.
ಮದುವೆ, ಹಬ್ಬದಲ್ಲೂ ಕ್ರಿಕೆಟ್ ಕ್ರೇಜ್!
ಸೆಮಿ ಫೈನಲ್ ಪಂದ್ಯದ ಹಿನ್ನೆಲೆ ಇಡೀ ಭಾರತ ಈ ಪಂದ್ಯದ ಮೇಲೆ ಕಣ್ಣಿಟ್ಟಿತ್ತು. ಗೆಲ್ಲುತ್ತಿದ್ದಂತೆ ಪಟಾಕಿ ಸಿಡಿಸಿ ಕೇಕೆ ಹಾಕಿ ಸಂಭ್ರಮಿಸಿದರು.
ಸಚಿನ್, ಅನುಷ್ಕಾ ಸೇರಿ ಅನೇಕರ ಸಂಭ್ರಮ
ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ನಟಿ, ಕೊಹ್ಲಿ ಮಡದಿ ಅನುಷ್ಕಾ ಶರ್ಮ ಸೇರಿ ಅನೇಕ ತಾರೆಯರು ಭಾರತ ತಂಡಕ್ಕೆ ಮೈದಾನದಲ್ಲಿ ಹಾಜರಾಗಿ ಸ್ಫೂರ್ತಿ ತುಂಬಿದರು.