ಪಠ್ಯದಲ್ಲಿ ರಾಮಾಯಣ, ಮಹಾ ಭಾರತ?!
– ಶಾಲಾ ಪಠ್ಯಪುಸ್ತಕಗಳಲ್ಲಿ ಆಮೂಲಾಗ್ರ ಬದಲಾವಣೆ
– ಪಠ್ಯ ಪರಿಷ್ಕರಣಾ ಸಮಿತಿ ಚಿಂತನೆ
NAMMUR EXPRESS NEWS
ನವದೆಹಲಿ: ಪಠ್ಯಪುಸ್ತಕಗಳಲ್ಲಿ ಆಮೂಲಾಗ್ರ ಬದಲಾವಣೆ ತರಲು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ ರಚಿಸಿರುವ ಪಠ್ಯ ಪರಿಷ್ಕರಣಾ ಸಮಿತಿ ಚಿಂತನೆ ನಡೆಸಿದೆ. ಮಹಾಭಾರತ, ರಾಮಾಯಣವನ್ನು ಶಾಲೆಗಳ ಇತಿಹಾಸ ಪಠ್ಯದಲ್ಲಿ ಅಳವಡಿಸುವಂತೆ ಶಿಫಾರಸು ಮಾಡಿದೆ. ತರಗತಿಯ ಗೋಡೆಗಳಲ್ಲಿ ಸ್ಥಳೀಯ ಭಾಷೆಯಲ್ಲಿ ಸಂವಿಧಾನದ ಪ್ರಸ್ತಾವನೆ ಇರುವ ಫಲಕ ಹಾಕಬೇಕು ಎಂದು ಹೇಳಲಾಗಿದೆ. ಇತ್ತೀಚೆಗಷ್ಟೇ ಪಠ್ಯಗಳಲ್ಲಿ ಇಂಡಿಯಾ ಹೆಸರನ್ನು ಭಾರತ ಎಂದು ಬದಲಿಸಲು ಪಠ್ಯ ಪರಿಷ್ಕರಣಾ ಸಮಿತಿ ಶಿಫಾರಸು ಮಾಡಿತ್ತು. ಇದಾದ ನಂತರ ರಾಮಾಯಣ, ಮಹಾಭಾರತ ಸೇರ್ಪಡೆಗೆ ಶಿಫಾರಸು ಮಾಡಿದ್ದು, ಎನ್.ಸಿ.ಇ.ಆರ್.ಟಿ. ಇನ್ನು ಯಾವುದೇ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಶೀಘ್ರದಲ್ಲಿ ಈ ಬಗ್ಗೆ ಅಂತಿಮವಾಗಲಿದೆ.