ರೂಪದರ್ಶಿಗಳಾಗಿ ನಟಿಸುತ್ತಿದ್ದ ನಟರಿಗೆ ಶಾಕ್..!
– ಶಾರೂಕ್, ಅಕ್ಷಯ್, ಅಜಯ್ ದೇವಗನ್ ಅವರಿಗೆ ನೋಟಿಸ್
– ತಂಬಾಕು ಜಾಹೀರಾತಿನಲ್ಲಿ ನಟಿಸಿದ್ದಕ್ಕೆ ಶಿಕ್ಷೆ?!
NAMMUR EXPRESS NEWS
ಗುಟ್ಕಾ ಜಾಹೀರಾತುಗಳಲ್ಲಿ ರೂಪದರ್ಶಿಗಳಾಗಿ ಕಾಣಿಸಿಕೊಂಡಿರುವ ನಟರಾದ ಅಕ್ಷಯ್ ಕುಮಾರ್, ಶಾರುಖ್ ಖಾನ್ ಮತ್ತು ಅಜಯ್ ದೇವಗನ್ ಅವರಿಗೆ ತಂಬಾಕು ಉತ್ಪನ್ನದ ಬಳಕೆಯನ್ನು ಉತ್ತೇಜಿಸಿರುವುದನ್ನು ಪ್ರಶ್ನಿಸಿ ಕೇಂದ್ರೀಯ ಗ್ರಾಹಕ ರಕ್ಷಣೆ ಪ್ರಾಧಿಕಾರ ಅಕ್ಟೋಬರ್ 20ರಂದು ನೋಟಿಸ್ ಜಾರಿ ಮಾಡಿದೆ ಎಂದು ಕೇಂದ್ರ ಸರ್ಕಾರದ ಡೆಪ್ಯಟಿ ಸಾಲಿಸಿಟರ್ ಜನರಲ್ ಎಸ್.ಬಿ.ಪಾಂಡೆ ಅಲಹಾಬಾದ್ ಹೈಕೋರ್ಟ್ ಲಖನೌ ಪೀಠಕ್ಕೆ ತಿಳಿಸಿದ್ದಾರೆ.
ಪದ್ಮ ಪ್ರಶಸ್ತಿಗಳನ್ನು ಪಡೆದಿರುವ ಸೆಲೆಬ್ರಿಟಿಗಳು ಮತ್ತು ಸಿನೆಮಾ ಕಲಾವಿದರು ತಂಬಾಕು ಬಳಕೆ ಉತ್ತೇಜಿಸುವ ಜಾಹೀರಾತುಗಳಲ್ಲಿ ಕಾಣಿಸಿಕೊಂಡು ಯುವ ಸಮುದಾಯದ ದಿಕ್ಕು ತಪ್ಪಿಸುತ್ತಿರುವುದನ್ನು ಆಕ್ಷೇಪಿಸಿ ಅಡ್ವೊಕೇಟ್ ಮೋತಿಲಾಲ್ ಯಾದವ್ ಎನ್ನುವವರು ದಾವೆ ಹೂಡಿದ್ದಾರೆ.ಈ ದಾವೆಗೆ ಪ್ರತಿಕ್ರಿಯೆ ಸಲ್ಲಿಸರುವ ದುಬೆ ಈಗಾಗಲೇ ಶಾರೂಕ್ ಖಾನ್, ಅಕ್ಷಯ್ ಕುಮಾರ್ ಮತ್ತು ಅಜಯ್ ದೇವಗನ್ಗೆ ಶೋಕಾಸ್ ನೋಟಿಸ್ ಜಾರಿಯಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದ್ದಾರೆ.