- ಆದಾಯ ತೆರಿಗೆ ಪಾವತಿ ಏನು..? ಎತ್ತ..?
ಆದಾಯ ತೆರಿಗೆ ಪಾವತಿ ಎನ್ನುವುದು ನಮ್ಮ ಪ್ರಮುಖ ಜವಾಬ್ದಾರಿಗಳಲ್ಲಿ ಒಂದು. ಪ್ರತಿ ಹಣಕಾಸು ವರ್ಷದಲ್ಲಿ ಈ ಬಗ್ಗೆ ಆದಾಯ ತೆರಿಗೆ ಮತ್ತು ಹಣಕಾಸು ಸಚಿವಾಲಯ ಸೂಚನೆ ನೀಡುತ್ತಲೇ ಇರುತ್ತದೆ. ಜತೆಗೆ ಆದಾಯ ತೆರಿಗೆ ಪಾವತಿ ದಿನಾಂಕ ವಿಸ್ತರಣೆ ಕುರಿತು ಕೂಡ ಮಾಹಿತಿ ನೀಡುತ್ತದೆ. ಅಲ್ಲದೆ, ಆದಾಯ ತೆರಿಗೆ ಮರುಪಾವತಿ ಮಾಡುವುದು ಹೇಗೆ? ಬೇಕಾದ ದಾಖಲೆಗಳು ಹಾಗೂ ಅಗತ್ಯ ವಿವರ ಕುರಿತು ಕೂಡ ವಿವಿಧ ಮಾಧ್ಯಮದ ಮೂಲಕ ತಿಳಿಸುತ್ತದೆ. ಈ ಬಾರಿ ಕೋವಿಡ್ 19 ಹಾವಳಿಯಿಂದಾಗಿ ಲಾಕ್ಡೌನ್ ಸಂಕಷ್ಟ ಮತ್ತಿತರ ಕಾರಣಗಳಿಂದಾಗಿ, 2019-20ನೇ ಸಾಲಿನ ಆದಾಯ ತೆರಿಗೆ ಮರುಪಾವತಿ ಕೊನೆಯ ದಿನಾಂಕವನ್ನು ನ.30ರವರೆಗೆ ಮುಂದೂಡಿದೆ. ಹೀಗಾಗಿ ನೀವು ಈವರೆಗೆ ಪ್ರಸಕ್ತ ಸಾಲಿನ ಆದಾಯ ತೆರಿಗೆ ಮರುಪಾವತಿ ಮಾಡಿಲ್ಲ ಎಂದಾದರೆ, ಇಲ್ಲಿ ಹೇಳಿರುವ ಸುಲಭ ಆನ್ಲೈನ್ ವಿಧಾನ ಬಳಸಿಕೊಂಡು ಮಾಡಬಹುದು.
ಇನ್ಕಂ ಟ್ಯಾಕ್ಸ್ ರಿಟನ್ರ್ಸ್ ಆನ್ಲೈನ್ ಮೂಲಕ ಪಾವತಿ ಮಾಡಲು, https://incometaxindiaefiling.gov.in ವೆಬ್ಸೈಟ್ ಅನ್ನು ನಿಮ್ಮ ಕಂಪ್ಯೂಟರ್/ಲ್ಯಾಪ್ಟಾಪ್ನಲ್ಲಿ ತೆರೆಯಿರಿ. ಆದಾಯ ತೆರಿಗೆ ಪಾವತಿ ಆಯ್ಕೆ ಸೆಲೆಕ್ಟ್ ಮಾಡಿಕೊಳ್ಳಿ. ಯಾವ ಅವಧಿಯ ಆದಾಯ ತೆರಿಗೆ ಎಂದು ಆಯ್ಕೆ ಮಾಡಿಕೊಳ್ಳಿ.
ಈಗ ತೆರೆದುಕೊಳ್ಳುವ ಹೊಸ ಪುಟದಲ್ಲಿ, ಅಲ್ಲಿ ಐಟಿಆರ್ ಫಾರ್ಮ್, ಫಾರ್ಮ್ 16 ಮತ್ತು ಪ್ರಿಪೇರ್ ಮೇಲೆ ಕ್ಲಿಕ್ ಮಾಡಿ, ಸಬ್ಮಿಟ್ ಮಾಡಿ.
ನಂತರ ನಿಮ್ಮ ಬ್ಯಾಂಕ್ ಖಾತೆ ಸೆಲೆಕ್ಟ್ ಮಾಡಿ. ಅಲ್ಲಿಗೆ ನಿಮ್ಮ ಆದಾಯ ತೆರಿಗೆ ಮರುಪಾವತಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.
ಗಮನಿಸಿ, ಆದಾಯ ತೆರಿಗೆ ಮರುಪಾವತಿ ಕುರಿತು ಇಲಾಖೆ ನಿಮಗೆ ಯಾವುದೇ ಸಂದರ್ಭದಲ್ಲಿ ಕರೆ ಮಾಡಿ ವಿವರ ಕೇಳುವುದಿಲ್ಲ, ಆದ್ದರಿಂದ ನಕಲಿ ಮತ್ತು ವಂಚನೆ ಜಾಲದ ಕುರಿತು ಎಚ್ಚರಿಕೆ ವಹಿಸಿ. ತೆರಿಗೆ ಪಾವತಿ ಮಾಡುವ ಮೊದಲು ಎಲ್ಲಾ ನಿಯಮ, ದಾಖಲೆ ಸಿದ್ಧಪಡಿಸಿಕೊಳ್ಳಿ. ನಿಮಗೆ ನೀವೇ ಟ್ಯಾಕ್ಸ್ ಕನ್ಸಲ್ಟೆಂಟ್ ಆಗಿರಿ.