- ಗುಜರಾತ್ ಯುವ ನಾಯಕನ ಹೊಸ ಹೆಜ್ಜೆ
- ಆಪ್ ಪಕ್ಷಕ್ಕೆ ಬರ್ತಾರಾ ಯುವ ನಾಯಕ
NAMMUR EXPRESS NEWS
ಅಹಮದಾಬಾದ್: “ನಾನು ಬುಧುವಾರ ಕಾಂಗ್ರೆಸ್ ಪಕ್ಷದ ಹುದ್ದೆ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ನನ್ನ ಈ ನಿರ್ಧಾರವನ್ನು ನನ್ನೆಲ್ಲಾ ಬೆಂಬಲಿಗರು ಹಾಗೂ ಗುಜರಾತ್ ಜನತೆ ಸ್ವಾಗತ ಮಾಡುತ್ತದೆ ಎಂಬ ಖಾತ್ರಿ ಇದೆ. ನನ್ನ ಈ ಹೆಜ್ಜೆಯಿಂದ ಭವಿಷ್ಯದಲ್ಲಿ ಗುಜರಾತ್ ಗೋಸ್ಕರ ಸಕಾರಾತ್ಮಕ ರೂಪದಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ನಂಬುತ್ತೇನೆ” ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಬರೆದಿರುವ ತಮ್ಮ ರಾಜೀನಾಮೆ ಪತ್ರವನ್ನು ಹಾರ್ದಿಕ್ ಪಟೇಲ್ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಪಾಟಿದಾರ್ ಪರ ಹೋರಾಟಗಾರ ಪಟೇಲ್ 2019 ರಲ್ಲಿ ಲೋಕಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ಸೇರಿದ್ದರು.
ಪಟೇಲ್ ಅವರು ಕಳೆದ ಕೆಲವು ವಾರಗಳಿಂದ ಗುಜರಾತ್ ಕಾಂಗ್ರೆಸ್ ಘಟಕದಲ್ಲಿ ಆಂತರಿಕ ಕಲಹದ ಬಗ್ಗೆ ದೂರು ನೀಡುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದರು.