ಬಂಗಾರಪ್ಪನವರ 92ನೇ ಹುಟ್ಟುಹಬ್ಬ: ಎಲ್ಲೆಡೆ ಆಚರಣೆ
– ನಾಡು ಕಂಡ ವರ್ಣ ರಂಜಿತ ರಾಜಕಾರಣಿ ಬಂಗಾರಪ್ಪ
– ಜನಪರ ಯೋಜನೆ ಜಾರಿಗೆಗೊಳಿಸಿದ ಧೀಮಂತ ನಾಯಕ
– ತವರೂರು ಸೊರಬ ಸಾರೆಕೊಪ್ಪದಲ್ಲಿ ಕಾರ್ಯಕ್ರಮ
NAMMUR EXPRESS NEWS
ಕರ್ನಾಟಕದ ಮಾಜಿ ಮುಖ್ಯಮಂತ್ರಿ, ನಾಡು ಕಂಡ ವರ್ಣ ರಂಜಿತ ರಾಜಕಾರಣಿ ಮಾಜಿ ಸಿ ಎಂ ಎಸ್ ಬಂಗಾರಪ್ಪ ಅವರ 92ನೇ ಹುಟ್ಟುಹಬ್ಬ ಸಂದರ್ಭದಲ್ಲಿ ನಾಡಿನ ಎಲ್ಲೆಡೆ ಅವರಿಗೆ ನಮನ ಸಲ್ಲಿಸಲಾಗುತ್ತಿದೆ.
ಬಂಗಾರಪ್ಪ ರಾಜ್ಯದ ಮುಖ್ಯಮಂತ್ರಿ ಆದ ಅವಧಿಯಲ್ಲಿ ಅನೇಕ ಜನಪರ ಯೋಜನೆಗಳಾದ ಆಶ್ರಯ ಮನೆ, ಅಕ್ಷಯ ಯೋಜನೆ, ಆರಾಧನಾ ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೃಪಾಂಕ ಯೋಜನೆ ಮತ್ತು ಗ್ರಾಮೀಣ ಕುಶಲ ಕಾರ್ಮಿಕರ ಏಳ್ಗೆಗಾಗಿ ವಿಶ್ವ ಯೋಜನೆ ಅಂಥಹ ಅನೇಕ ಜನಪರ ಯೋಜನೆಗಳನ್ನು ಜಾರಿಗೆಗೊಳಿಸಿ ಇಡೀ ಕರ್ನಾಟಕದ ಜನತೆಯ ಪ್ರೀತಿಗೆ ಪಾತ್ರರಾಗಿದ್ದರು.
ರೈತರ ಸಂಕಟಗಳ ಬಗ್ಗೆ ಅರಿವಿದ್ದ ಬಂಗಾರಪ್ಪನವರು ಉಚಿತ ಕೃಷಿ ಪಂಪ್ ಸೆಟ್ ನೀಡಿದ್ದು ಐತಿಹಾಸಿಕ ಮಹತ್ವದ ಸಂಗತಿ. ರೈತರ ಬಾಳಿಗೆ ನಿಜವಾದ ಬಂಗಾರದ ಯುಗ ಅಂದು ಆರಂಭವಾಗಿತ್ತು. ನಿರುದ್ಯೋಗಿ ಗ್ರಾಮೀಣ ಯುವಕರಿಗೆ ಗ್ರಾಮೀಣ ಕೃಪಾಂಕ ನೀಡಿ ಇಡೀ ಭಾರತವೇ ಬಂಗಾರಪ್ಪನವರ ಯೋಜನೆಗಳನ್ನು ತಿರುಗಿ ನೋಡುವಂತೆ ಮಾಡಿದ್ದರು. ಕನ್ನಡಿಗರಿಗೆ ಕನ್ನಡ ಮಾಧ್ಯಮ ವಿನಾಯಿತಿ ನೀಡಿ ದೇಶದ ಭಾಷಾವಾರು ಪ್ರಾಂತ್ಯಗಳಿಗೆ ಮಾದರಿಯಾದರು. ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸದೆ ಸುಗ್ರೀವಾಜ್ಞೆ ಹೊರಡಿಸಿದ್ದು ಕರುನಾಡ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಇತಿಹಾಸ ಅವರದ್ದು, ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸದೆ ಸುಗ್ರೀವಾಜ್ಞೆ ಹೊರಡಿಸಿದ್ದು ಕರುನಾಡ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಇತಿಹಾಸ. ದೇವಸ್ಥಾನಗಳಿಗೆ ಕೆಲವರಿಗೆ ಹೋಗಲು ಸಹ ಅನುಮತಿ ಇರದಿದ್ದ ಕಾಲದಲ್ಲಿ ತಮಗೆ ಬೇಕಾದಂತೆ ದೇವಸ್ಥಾನ ಕಟ್ಟಿಕೊಳ್ಳಲು ಧನಸಹಾಯ ಘೋಷಿಸಿ ಧೀಮಂತ ನಾಯಕ. ಸಮಾಜದಲ್ಲಿ ಈಡಿಗರ ನಿಲುವನ್ನು ಎತ್ತಿ ಹಿಡಿದವರಲ್ಲಿ ಮುಂಚೂಣಿಯಲ್ಲಿದ್ದವರು ಸಾರೆ ಕೊಪ್ಪದ ಎಸ್ ಬಂಗಾರಪ್ಪ.
ಬಂಗಾರಪ್ಪ ತವರೂರು ಶಿವಮೊಗ್ಗ ಜಿಲ್ಲೆ ಸೊರಬದ ಸಾರೆಕೊಪ್ಪದಲ್ಲಿ ಅವರ ಜನ್ಮ ದಿನದ ಅಂಗವಾಗಿ ವಿಶೇಷ ಕಾರ್ಯಕ್ರಮ ನಡೆಯುತ್ತಿದೆ.