- ಕನ್ನಡದ ಖ್ಯಾತ ಸಾಹಿತಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಜನ್ಮ ದಿನ
- ಬಹು ಮುಖ ವ್ಯಕ್ತಿತ್ವದ ಸಾಹಿತಿ ಎಲ್ಲರಿಗೂ ಮಾದರಿ
- ಕೃಷಿ ಜತೆಗೆ ಸಾಹಿತ್ಯ.. ಛಾಯಾಗ್ರಾಹಕ.. ಹೋರಾಟಗಾರ
NAMMUR EXPRESS NEWS
ಕನ್ನಡದ ಖ್ಯಾತ ಸಾಹಿತಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಜನ್ಮ ದಿನ ಸೆ.8. ಅವರ ಜನ್ಮ ದಿನ ವಿಶೇಷ ದಿನ. ಕನ್ನಡ ಸಾಹಿತ್ಯ ಲೋಕಕ್ಕೆ ತೇಜಸ್ವಿ ದೊಡ್ಡ ಆಸ್ತಿ.
ಪೂರ್ಣಚಂದ್ರ ತೇಜಸ್ವಿ ಸೆಪ್ಟೆಂಬರ್ 8, 1938ರಲ್ಲಿ ಜನಿಸಿ ಏಪ್ರಿಲ್ 5, 2007ರಲ್ಲಿ ಇಹಲೋಕ ತ್ಯಜಿಸಿದರು. ಇವರು ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ತೇಜಸ್ವಿ ಅವರು ರಾಷ್ಟ್ರಕವಿ ಕುವೆಂಪು ಅವರ ಪುತ್ರ ಹಾಗು ಕನ್ನಡ ಸಾಹಿತ್ಯದ ಪ್ರಮುಖ ಲೇಖಕ ಹಾಗು ಸ್ವತಂತ್ರ ಪ್ರವೃತ್ತಿಯ ಬರಹಗಾರರು.
ನವ್ಯ ಸಾಹಿತ್ಯದ ಕಾಲಘಟ್ಟದಲ್ಲಿ ಪ್ರಮುಖವಾಗಿ ಕೇಳಿ ಬಂದ ಹೆಸರು, ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನದ ಮೂಲಕ ಬಂಡಾಯ ಸಾಹಿತ್ಯವನ್ನು ಪ್ರಾರಂಭಿಸಿದರು. ಕಥಾ ಸಂಕಲನ, ಕಾದಂಬರಿ, ರಾಜಕೀಯ ವಿಶ್ಲೇಷಣೆ, ನಾಟಕ,ವೈಜ್ಞಾನಿಕ ಬರಹಗಳ ಲೇಖನಗಳ ಕಡೆ ಹೆಚ್ಚಿನ ಗಮನ ಹರಿಸಿದರು.
ತೇಜಸ್ವಿಯವರು ರಾಷ್ಟ್ರಕವಿ ಕುವೆಂಪು ಮತ್ತು ಹೇಮಾವತಿಯವರ ಮೊದಲನೆಯ ಪುತ್ರನಾಗಿ ಸೆಪ್ಟೆಂಬರ್ 8, 1938ರಂದು ಜನಿಸಿದರು. ಏಪ್ರಿಲ್ 5, 2007, ಮೂಡಿಗೆರೆಯಲ್ಲಿ ನಿಧನರಾದರು
ಪತ್ನಿ ರಾಜೇಶ್ವರಿ ತೇಜಸ್ವಿ, ಮಕ್ಕಳಾದ ಸುಸ್ಮಿತಾ ಮತ್ತು ಈಶಾನ್ಯ, ಸಹೋದರರಾದ ಕೋಕಿಲೋದಯ ಚೈತ್ರ, ಸಹೋದರಿಯರಾದ ಇಂದುಕಲಾ ಮತ್ತು ತಾರಿಣಿ.
ಕೃಷಿಕ, ಲೇಖಕ, ಪುಸ್ತಕ ಪ್ರಕಾಶನ, ಛಾಯಚಿತ್ರಗಾರರಾಗಿ ಪ್ರಸಿದ್ಧಿ ಹೊಂದಿದ ತೇಜಸ್ವಿ ಶಿವಮೊಗ್ಗ ಸಹ್ಯಾದ್ರಿ ಕಾಲೇಜು ಬಳಿಕ ಮೈಸೂರಿನ ಮಹಾರಾಜ ಕಾಲೇಜಲ್ಲಿ ವ್ಯಾಸಂಗ ಮಾಡಿದ್ದರು.
ಸಸಣ್ಣಕತೆ, ಕವಿತೆ, ಕಾದಂಬರಿ, ನಾಟಕ, ವಿಮರ್ಶೆ, ಆತ್ಮಕಥೆ, ವಿಜ್ಞಾನ-ವಿಷಯ, ವಿಜ್ಞಾನ ಸಾಹಿತ್ಯ ಚಿತ್ರ ಲೇಖನ, ಅನುವಾದ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ.
ಪಂಪ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದಾರೆ.
ಸಾಹಿತ್ಯದ ಜತೆ ಮಲೆನಾಡಿನ ಮೂಡಿಗೆರೆಯಲ್ಲಿ ಕೃಷಿಯ ಜತೆಜತೆಗೆ ಅಗಾದವಾದ ಸಾಹಿತ್ಯದ ಕೃಷಿ ಮಾಡಿದರು. ಸಾಹಿತ್ಯದ ಜೊತೆಗೆ ಇವರಿಗೆ ವ್ಯವಸಾಯ, ಛಾಯಾಚಿತ್ರಗ್ರಹಣ, ಸಂಗೀತ, ಚಿತ್ರಕಲೆಯಲ್ಲಿ ಆಸಕ್ತಿಯಿತ್ತು. ಇವರು ರೈತ ಚಳುವಳಿಗಳಲ್ಲಿ, ಜೆಪಿ ಚಳುವಳಿಯಲ್ಲಿ, ಕುದುರೆಮುಖ-ಉಳಿಸಿ ಹೋರಾಟದಲ್ಲಿ ಮತ್ತು ಇನ್ನೂ ಹಲವಾರು ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಹೀಗೆ ಕನ್ನಡದ ಆಗ್ರ ಸಾಹಿತಿಯ ಜನ್ಮ ದಿನವನ್ನು ನಾವೆಲ್ಲರೂ ಅವರ ನೆನಪಿನೊಂದಿಗೆ ಆಚರಿಸೋಣ.
“ನೀವೆಲ್ಲಾ ಬರವಣಿಗೆ ಅಂದ್ರೆ ಏನೂಂತಾ ತಿಳ್ಕೊಂಡಿದೀರೋ ಗೊತ್ತಿಲ್ಲ ಕಣಯ್ಯಾ… ಆದ್ರೆ ನನ್ಗ ಮಾತ್ರ ಬರೆಯೋದೂಂದ್ರೆ ದೇವ್ರ ಜೊತೆ ಮಾತಾಡೋದು..
ತೇಜಸ್ವಿಯವರು ತಮ್ಮ ಆಪ್ತರೊಬ್ಬರ ಬಳ ಹೇಳದ್ದ ಈ ಮಾತುಗಳು ನೆನಪಾದಾಗಲೆಲ್ಲಾ ನನ್ನೊಳಗೊಂದು ರೋಮಾಂಚನ, ಸಾಹಿತ್ಯದಲ್ಲಿ ಸಾಕಷ್ಟು ದೂರ ಕ್ರಮಿಸಬೇಕಿರುವ ನಮ್ಮಂತವರಿಗೆ ಈ ಸಾಲುಗಳು ವೇದವಾಕ್ಯವಾಗಬೇಕು. ಇಲ್ಲದೇ ಹೋದಲ್ಲಿ ಪ್ರಶಸ್ತಿ, ಶಾಲು-ಸನ್ಮಾನ , ಹುದ್ದೆ, ಐಡೆಂಟಟಗಳೆಂಬ ಯಕಃಶ್ಚಿತ್ ನ ಅಲ್ಪತೃಪ್ತಿ ಹೊಂದಿ ಕಾಲ ಸವೆಸಬೇಕಾಗುತ್ತದಷ್ಟೇ ಎಂಬ ಸರಳ ಸತ್ಯವನ್ನು ಅವರ ಆ ಮಾತು ಜನಪ್ರಿಯಯತೆಯ ಹುಣ್ಣಿಗೆ ಬಿದ್ದಿರುವ ಸ್ಟೇಜ್ ಸಾಹಿತಿಗಳಗೆ ಸದಾ ಹಳೆಚಪ್ಪಆಗೆ ಶಾಲು ಸುತ್ತಿ ಹೊಡೆಯುತ್ತಲೇ ಇರುತ್ತದೆ.
ಲೇಖಕರು : ಕಾರ್ತಿಕಾದಿತ್ಯ ಬೆಳ್ಗೋಡು