- ಕಾಂಗ್ರೆಸ್ನಲ್ಲಿ ಕಾಗೋಡು ಪುತ್ರಿ ರಾಜ ನಂದಿನಿ ಬಂಡಾಯ
- ಎದೆಗೆ ಚೂರಿ ಹಾಕಿದ ಹಾಗೆ ಮಾಡಿದ್ದಾಳೆ ಎಂದ ಕಾಗೋಡು
NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗ ನಗರ ಬಿಜೆಪಿಯಲ್ಲಿ ಈಶ್ವರಪ್ಪನವರ ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಸಾಗರದಲ್ಲೂ ರಾಜಕೀಯ ಜೋರಾಗಿದೆ.
ಸಾಗರ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಕಾಗೋಡು ತಿಮ್ಮಪ್ಪ ಅವರ ಪುತ್ರಿ ಡಾ.ರಾಜನಂದಿನಿ ಅವರು ಸಿಎಂ ಬೊಮ್ಮಾಯಿ ಹಾಗೂ ಯಡಿಯೂರಪ್ಪ ಭೇಟಿ ಮಾಡಿ ಬಿಜೆಪಿ ಸೇರಿದ್ದಾರೆ.
ಡಾ. ರಾಜನಂದಿನಿ ಜೊತೆಗೆ ಹನಗೋಡು ರತ್ನಾಕರ್ ಸೇರಿದಂತೆ ಹಲವರು ಬಿಜೆಪಿ ಸೇರಲಿದ್ದಾರೆ ಎನ್ನಲಾಗಿದೆ.
ಅಸಮಾಧಾನಿತರಿಗೆ ಹರತಾಳು ಹಾಲಪ್ಪ ಗಾಳ ಹಾಕಿದ್ದಾರಾ ಎಂಬ ಅನುಮಾನ ಶುರು ಆಗಿದೆ
ಬೇಳೂರು ಗೋಪಾಲಕೃಷ್ಣರಿಗೆ ಕಾಂಗ್ರೆಸ್ ಟಿಕೆಟ್ ಸಿಕ್ಕಬೆನ್ನಲ್ಲೆ ಡಾ.ರಾಜನಂದಿನಿ ಬೇಸರಗೊಂಡಿದ್ದರು. ಅಲ್ಲಿವರೆಗೂ ಪಕ್ಷದ ಎಲ್ಲಾ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಅವರು, ಆನಂತರದ ಬೆಳವಣಿಗೆಯಲ್ಲಿ ಬೇಳೂರು ಗೋಪಾಲಕೃಷ್ಣರಿರುವ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಆರಂಭದಲ್ಲಿ ಮುನಿಸು ತೋರಿದ್ದ ಕಾಗೋಡು ತಿಮ್ಮಪ್ಪನವರು, ನಮ್ಮನಮ್ಮ ತಪ್ಪಿಗೆ ಪಕ್ಷವನ್ನು ಸೋಲಿಸುವುದು ಸರಿಯಲ್ಲ, ಎಲ್ಲರೂ ಸೇರಿ ಬೇಳೂರು ಗೋಪಾಲಕೃಷ್ಣರನ್ನು ಗೆಲ್ಲಿಸೋಣ ಎಂದಿದ್ದರು. ಅಲ್ಲದೆ ಹರತಾಳು ಹಾಲಪ್ಪರನ್ನು ಟೀಕಿಸಿದ್ದರು. ಇನ್ನೊಂದೆಡೆ ಬೇಳೂರು ಗೋಪಾಲಕೃಷ್ಣರವರು ಸಹ ಟಿಕೆಟ್ ಪಡೆದು ನಗರ ಪ್ರವೇಶ ಮಾಡುತ್ತಲೇ ಕಾಗೋಡು ತಿಮ್ಮಪ್ಪನವರ ಕಾಲಿಗೆ ಬಿದ್ದು, ನೀವೆ ಗೆಲ್ಲಿಸಬೇಕು ಎಂದು ಚುನಾವಣೆ ನಡೆಸುವ ನೇತೃತ್ವವನ್ನುಮಾವನ ಹೆಗಲಿಗೆ ಹಾಕಿದ್ದರು.
ಹಿರಿಯ ನಾಯಕ ಕಾಗೋಡು ತಿಮ್ಮಪ್ಪನವರು ತಮ್ಮ ಪುತ್ರಿಗಾಗಿ ಟಿಕೆಟ್ ಕೇಳಿದ್ದರಾದರೂ, ಅದನ್ನ ನಿರಾಕರಿಸಿದ ನಂತರ ಹಟಹಿಡಿಯಿದೇ ಬೇಳೂರು ಗೋಪಾಲಕೃಷ್ಣರ ಪರ ಪ್ರಚಾರಕ್ಕೆ ಹೊರಟಿದ್ದರು.ಇದೀಗ ಅವರ ಪುತ್ರಿ ಡಾ.ರಾಜನಂದಿನಿ ಮತ್ತು ತಂಡ ಬಿಜೆಪಿ ಸೇರಿದೆ.
ನನಗೆ ಗೊತ್ತೇ ಇಲ್ಲ.. ನಾನೇನಿದ್ದರೂ ಕಾಂಗ್ರೆಸ್!
ಕಾಗೋಡು ತಿಮ್ಮಪ್ಪ ಸುದ್ದಿಗಾರರ ಜತೆ ಮಾತನಾಡಿ, ನಾನೇನಿದ್ದರೂ ಕಾಂಗ್ರೆಸ್ ಪಕ್ಷಕ್ಕೆ ಕೆಲಸ ಮಾಡೋದು. ಮಗಳು ಬಿಜೆಪಿ ಸೇರಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ ಅವಳು ನನ್ನ ಎದೆಗೆ ಚೂರಿ ಹಾಕಿದ್ದಾಳೆ. ಇದು ಹಾಲಪ್ಪನ ಚುನಾವಣೆ ತಂತ್ರ. ನಾನು ಅವಳ ಜತೆ ಮಾತನಾಡುತ್ತೇನೆ. ಆದರೆ ನಾನು ಕಾಂಗ್ರೆಸ್ ಪಕ್ಷಕ್ಕೆ ಮೋಸ ಮಾಡುವುದಿಲ್ಲ ಎಂದು ಹೇಳಿದ್ದಾರೆ.