ಲೋಕಸಭೆ ಅಖಾಡ: ಕರಾವಳಿ ಅಂತಿಮ ಕಣದ ಚಿತ್ರಣ ಏನಿದೆ…?
– ದಕ್ಷಿಣಕನ್ನಡ ಕ್ಷೇತ್ರ, ಉಡುಪಿ -ಚಿಕ್ಕಮಗಳೂರು ಕಣದಲ್ಲಿ ಯಾರು ಯಾರು?
– ದಕ್ಷಿಣ ಕನ್ನಡದಲ್ಲಿ 9 ಮಂದಿ, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ 10 ಮಂದಿ ಕಣದಲ್ಲಿ
NAMMUR EXPRESS NEWS
ಲೋಕಸಭಾ ಚುನಾವಣೆಗೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಬ್ಬ ಅಭ್ಯರ್ಥಿ ನಾಮಪತ್ರ ಹಿಂಪಡೆದಿದ್ದು, ಒಟ್ಟು ಒಂಬತ್ತು ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಪಕ್ಷೇತರವಾಗಿ ನಾಮಪತ್ರ ಸಲ್ಲಿಸಿದ್ದ ಸತೀಶ್ ಬೂಡಮಕ್ಕಿ ನಾಮಪತ್ರ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಇಂದು ನಾಮಪತ್ರವನ್ನು ಹಿಂಪಡೆದಿದ್ದಾರೆ. ಕ್ಷೇತ್ರದಿಂದ ಸ್ಪರ್ಧಿಸಲು 11 ಅಭ್ಯರ್ಥಿಗಳು 21 ನಾಮಪತ್ರ ಸಲ್ಲಿಸಿದ್ದರು. . ಪಕ್ಷೇತರ ಅಭ್ಯರ್ಥಿಗಳ ಪೈಕಿ ಫ್ರಾನ್ಸಿಸ್ ಲ್ಯಾನ್ಸ್ ಮಾಡ್ತಾ ಅವರ ನಾಮಪತ್ರ ತಿರಸ್ಕೃತಗೊಂಡಿತ್ತು.ಇದರಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ತಲಾ 4 ಸೆಟ್ ನಾಮಪತ್ರ ಸಲ್ಲಿಸಿದ್ದು, ಇವೆಲ್ಲವೂ ಕ್ರಮಬದ್ಧವಾಗಿದೆ. ರಂಜಿನಿ ಎಂ , ಉತ್ತಮ ಪ್ರಜಾಕೀಯ ಪಕ್ಷದ ಕೆ.ಇ.ಮನೋಹರ, ಕರುನಾಡ ಸೇವಕ ಪಕ್ಷದ ದುರ್ಗಾ ಪ್ರಸಾದ್, ಪಕ್ಷೇತರರಾಗಿ ದೀಪಕ್ ರಾಜೇಶ್, ಕುವೆಲ್ಲೊ, ಮೆಕ್ಸಿಂ ಪಿಂಟೊ ಹಾಗೂ ಸುಪ್ರೀತ್ ಕುಮಾರ್ ಪೂಜಾರಿ ಕಣದಲ್ಲಿ ಇದ್ದಾರೆ.
ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ 10 ಮಂದಿ ಕಣದಲ್ಲಿ!
ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆಗೆ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಇಂದು ಯಾವೊಬ್ಬ ಅಭ್ಯರ್ಥಿಯೂ ನಾಮಪತ್ರ ಹಿಂಪಡೆದಿಲ್ಲ. ಹೀಗಾಗಿ 2024ರ ಲೋಕಸಭೆ ಚುನಾವಣೆಗೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ 10 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ.ಜಯಪ್ರಕಾಶ ಹೆಗಡೆ, ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ, ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ಕೆ.ಟಿ.ರಾಧಾಕೃಷ್ಣ, ಜನಹಿತ ಪಕ್ಷದ ಅಭ್ಯರ್ಥಿ ಸುಪ್ರೀತ್ ಕುಮಾರ್ ಪೂಜಾರಿ, ಕರುನಾಡ ಸೇವಕ ಪಕ್ಷದ ಅಭ್ಯರ್ಥಿ ಶಬರೀಶ್ ಆರ್. ಸಮಾಜ ಪಕ್ಷದ ಅಭ್ಯರ್ಥಿ ಎಂ.ಕೆ. ದಯಾನಂದ್, ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಸಚಿನ್ ಬಿಕೆ ಹಾಗೂ ಸ್ವತಂತ್ರ ಅಭ್ಯರ್ಥಿಗಳಾದ ಸುಧೀರ್ ಕಾಂಚನ್ ಮತ್ತು ವಿಜಯಕುಮಾರ್ ಕಣದಲ್ಲಿದ್ದಾರೆ.