- ಅತೀ ಹೆಚ್ಚು ಜನ ಬಂದಿದ್ದು ತೀರ್ಥಹಳ್ಳಿಯಿಂದ?!
- ಮೋದಿ ಅವರನ್ನು ಸ್ವಾಗತಿಸಿದ ತೀರ್ಥಹಳ್ಳಿ ಯಕ್ಷಗಾನ ಕಲಾವಿದರು: ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಹೈ ಸೆಕ್ಯೂರಿಟಿ
- ಸಿಗಂದೂರು ಸ್ಮರಿಸಿದ ಪ್ರಧಾನಿ
ಇನ್ನಷ್ಟು ಸುದ್ದಿ ನಮ್ಮೂರ್ ಎಕ್ಸ್ಪ್ರೆಸ್ ವಿಶೇಷ ಇಂದಿನ ಪುರವಣಿಯಲ್ಲಿ ಓದಿ!
NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮ ಮಲೆನಾಡಲ್ಲಿ ಹೊಸ ಇತಿಹಾಸ ಸೃಷ್ಟಿ ಮಾಡಿದೆ. ಇದರ ನಡುವೆ ವಿಮಾನ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮದಲ್ಲಿ ತೀರ್ಥಹಳ್ಳಿ ಮಹತ್ವದ ಪಾತ್ರ ವಹಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಿದ ಈ ಕಾರ್ಯಕ್ರಮಕ್ಕೆ ತೀರ್ಥಹಳ್ಳಿಯಿಂದ ಅತೀ ಹೆಚ್ಚು ಬಿಜೆಪಿ ಕಾರ್ಯಕರ್ತರು, ಮುಖಂಡರು ಭೇಟಿ ನೀಡಿದ್ದರು. ಜೊತೆಗೆ ವಿವಿಧ ವ್ಯವಸ್ಥೆಯನ್ನು ನೋಡಿಕೊಂಡಿದ್ದರು.
ಗೃಹ ಮಂತ್ರಿ ಆರಗ ಜ್ಞಾನೇಂದ್ರ ಅವರ ನೇತೃತ್ವದಲ್ಲಿ ಇಡೀ ಕಾರ್ಯಕ್ರಮಕ್ಕೆ ಭದ್ರತೆ ಮಾಡಲಾಗಿದ್ದು ಸಣ್ಣ ಪುಟ್ಟ ಲೋಪದೋಷವೂ ಆಗದೆ ಕಾರ್ಯಕ್ರಮ ಯಶಸ್ವಿಯಾಗಿದೆ. ಪೊಲೀಸ್ ಇಲಾಖೆ, ಸ್ವಯಂ ಸೇವಕರು ಅತ್ಯುತ್ತಮ ಕೆಲಸ ಮಾಡಿದ್ದಾರೆ.
ತೀರ್ಥಹಳ್ಳಿ ಕಲಾವಿದರಿಂದ ಮೋದಿಗೆ ಸ್ವಾಗತ!
ಶಿವಮೊಗ್ಗದ ವಿಮಾನ ನಿಲ್ದಾಣ ಉದ್ಘಾಟನಾ ಕಾರ್ಯಕ್ರಮ ಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಸ್ವಾಗತ ಕೋರಲು ಶಿವಮೊಗ್ಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತೀರ್ಥಹಳ್ಳಿ ಶ್ರೀಗುತ್ಯಮ್ಮ ಜಾನಪದ ಮತ್ತು ಯಕ್ಷಗಾನ ಕಲಾಕೇಂದ್ರದ ಸದಸ್ಯರು ಯಕ್ಷಗಾನ ಸ್ವಾಗತ ಮಾಡಿದರು.
ಬಾಯಿ ಬಡಿದುಕೊಂಡ ವಿಐಎಸ್ಎಲ್ ಕಾರ್ಮಿಕರು!
ವಿಮಾನ ನಿಲ್ದಾಣದ ಉದ್ಘಾಟನೆ ಸಮಾರಂಭದ ಕಾರ್ಯಕ್ರಮದ ವೇದಿಕೆ ಮುಂಭಾಗ ವಿಐಎಸ್ಎಲ್ ಕಾರ್ಮಿಕರು ಬಾಯಿ ಬಡಿದುಕೊಂಡು, ಘೋಷಣೆ ಕೂಗಿದರು. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಗಮನ ಸೆಳೆಯಲು ಪ್ರಯತ್ನಿಸಿದರು.
ಸೋಗಾನೆಯಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ಲೋಕಾರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ಹಿನ್ನೆಲೆ ಪ್ರಧಾನಿ ಗಮನ ಸೆಳೆಯಲು ವಿಐಎಸ್ಎಲ್ ಕಾರ್ಮಿಕರು ಘೋಷಣೆ ಮೊಳಗಿಸಿದರು.
ಕಾರ್ಮಿಕರು, ಕುಟುಂಬದಿಂದ ಘೋಷಣೆ
ಕಾರ್ಯಕ್ರಮಕ್ಕೆ ಕುಟುಂಬ ಸಹಿತ ಆಗಮಿಸಿದ್ದ ವಿಐಎಸ್ಎಲ್ ಕಾರ್ಮಿಕರು ಘೋಷಣೆಗಳನ್ನು ಕೂಗಿದರು. ವಿಐಎಸ್ಎಲ್ ಉಳಿಸಿ ಎಂದು ಘೋಷಣೆ ಮೊಳಗಿಸಿ, ಬಾಯಿ ಬಡಿದುಕೊಂಡು ನೋವು ತೋಡಿಕೊಂಡರು. ತಮ್ಮ ಟೀಶರ್ಟ್ ಮೇಲಿರುವ SAVE VISL ಘೋಷಣೆ ಪ್ರದರ್ಶಿಸಿದರು. ಪೊಲೀಸರು ಕಾರ್ಮಿಕರನ್ನು ವಶಕ್ಕೆ ಪಡೆದರು.
ಡಿ ಎಂ ಗಜಾನನ ,ನಿವೃತ್ತ ಇಂಜಿನಿಯರ್, BSNL,ಸಾಗರ ಇವರು ಮೋದಿ ಅವರಿಗೆ ತಮ್ಮ ಕೈಚಳಕದಿಂದ ಕೆತ್ತಿದ ಶ್ರೀ ಗಂಧದ ನೇಮ್ ಬೋರ್ಡ್ ತಮ್ಮ ಕೈಯಿಂದ ಪ್ರದಾನ ಮಂತ್ರಿಗಳಿಗೆ ನೀಡಿದ ಕಲಾಕೃತಿ ನೀಡಲಾಯಿತು.
ನೀರು ಸಿಗದೇ ಮೋದಿ ಅಭಿಮಾನಿ ಸಾವು!?
ಮೋದಿ ಅಭಿಮಾನಿಯೊಬ್ಬರು ಕಾರ್ಯಕ್ರಮ ಮುಗಿಸಿಕೊಂಡು ವಾಪಾಸ್ ಆಗುವಾಗ ಬಿಸಿಲಿನ ತಾಪಕ್ಕೆ ಬಾಯಾರಿಕೆಯಾಗಿದ್ದು, ಸರಿಯಾದ ವೇಳೆಗೆ ನೀರು ಸಿಗದ ಕಾರಣ ವ್ಯಕ್ತಿ ಅಸುನೀಗಿದ್ದಾರೆ ಎಂದು ಹೇಳಲಾಗಿದೆ.
ಸೊರಬ ತಾಲೂಕಿನ ಚಿಮಣೂರು ಗ್ರಾಮದ ನಿವಾಸಿ ಮಲ್ಲಿಕಾರ್ಜುನ (55) ಎಂಬುವರು ಕಾರ್ಯಕ್ರಮ ಮುಗಿಸಿ ಬಸ್ ಬಳಿ ನಡೆದುಕೊಂಡು ಬಂದಿದ್ದಾರೆ. ಕಿಲೋಮೀಟರ್ ಗಟ್ಟಲೆ ಬಸ್ ಪಾರ್ಕಿಂಗ್ ಗೂ ಸಭಾ ಕಾರ್ಯಕ್ರಮಕ್ಕೂ ದೂರವಿದ್ದಿದ್ದರಿಂದ ನೀರಾಡಿಕೆ ಆಗಿದೆ. ನೀರು ಅರಸಿಕೊಂಡು ಹೋದ ಮಲ್ಲಿಕಾರ್ಜುನ್ ಗೆ ನೀರು ಸರಿಯಾದ ವೇಳೆ ಸಿಕ್ಕಿಲ್ಲ ದೂರ ನಡೆದುಕೊಂಡು ಬಂದ ಮಲ್ಲಿಕಾರ್ಜುನ್ ನೀರು ಕುಡಿಯುತ್ತಿದ್ದಂತೆ ಕುಸಿದು ಬಿದ್ದಿದ್ದಾರೆ. ಸಾವು ಕಂಡಿದ್ದಾರೆ. ಅವರ ಮೃತ ದೇಹವನ್ನ ಶಿವಮೊಗ್ಗ ಮರಣೋತ್ತರ ಪರೀಕ್ಷೆಯಲ್ಲಿರಿಸಲಾಗಿದೆ.ಮಲ್ಲಿಕಾರ್ಜುನ್ ಚಿಮಣೂರು ಗ್ರಾಮದಲ್ಲಿ ರೈತರಾಗಿದ್ದು ಕಳೆದ 30 ವರ್ಷದಿಂದ ಬಿಜೆಪಿ ಕಾರ್ಯಕರ್ತರಾಗಿದ್ದಾರೆ. ಅಭಿಮಾನಕ್ಕಾಗಿ ದೂರದಿಂದ ಬಂದ ಅವರು ದುರಂತ ಸಾವು ಕಂಡಿದ್ದಾರೆ. ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಕಾರ್ಯಕ್ರಮದ ಬ್ಯುಸಿಯಲ್ಲೂ ಹುಟ್ಟು ಹಬ್ಬ
ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ಮತ್ತು ಪ್ರಧಾನಿ ಕಾರ್ಯಕ್ರಮ ಒತ್ತಡದ ನಡುವೆ ಶಿವಮೊಗ್ಗದ ವಿನೋಬ ನಗರದಲ್ಲಿರುವ ಬಿಎಸ್ ವೈ ಸ್ವಗೃಹದಲ್ಲಿ 80 ಕೆಜಿ ಕೇಕ್ ಕತ್ತರಿಸಿ ಜನುಮ ದಿನವನ್ನು ಮುನ್ನ ದಿನ ಯಡಿಯೂರಪ್ಪ ಆಚರಿಸಿಕೊಂಡಿದ್ದಾರೆ. ಪುತ್ರರಾದ ಬಿ.ವೈ. ರಾಘವೇಂದ್ರ, ಬಿ.ವೈ. ವಿಜಯೇಂದ್ರಗೆ ಕೇಕ್ ತಿನ್ನಿಸಿ ಯಡಿಯೂರಪ್ಪ ಜನುಮದಿನಾಚರಣೆ ಆಚರಿಸಿಕೊಂಡಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಗೃಹಸಚಿವ ಆರಗ ಜ್ಞಾನೇಂದ್ರ ಉಪಸ್ಥಿತಿರಿದ್ದರು.
ಡಿ. ಎಸ್.ಅರುಣ್ ಮಾತುಕತೆ : 2005ರ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಶಿವಮೊಗ್ಗ ಮತ್ತು ಭದ್ರಾವತಿಗೆ ಭೇಟಿ ನೀಡಿದ ವೇಳೆಯಲ್ಲಿ ಅಂದಿನ ಗುಜರಾತ್ ಮುಖ್ಯಮಂತ್ರಿಗಳಾದ ನರೇಂದ್ರ ಮೋದಿ ಭದ್ರಾವತಿಗೆ ಭೇಟಿ ಸಮಯದಲ್ಲಿ ನಮ್ಮ ಕಾರಿನಲ್ಲಿ ಭದ್ರಾವತಿಯಿಂದ ಶಿವಮೊಗ್ಗಕ್ಕೆ ಕರೆದುಕೊಂಡು ಬಂದ ಸಂದರ್ಭದ ಛಾಯಾಚಿತ್ರವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಜಿ ಅವರಿಗೆ ತೋರಿಸಿದ ಸಂಧರ್ಭದಲ್ಲಿ ಅರುಣ್ ತಲೆಗೆ ಸವರಿ ಹರ್ಷ ವ್ಯಕ್ತಪಡಿಸಿದರು.
ಸಿಗಂದೂರು ದೇವಿ ಸ್ಮರಿಸಿದ ಮೋದಿ!
ನಾಡಿನ ಶಕ್ತಿ ದೇವತೆ ಸಿಗಂದೂರು ಚೌಡಮ್ಮ ದೇವಿಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ವೇದಿಕೆಯಲ್ಲೇ ಸ್ಮರಿಸಿದ್ದಾರೆ.
ಶಿವಮೊಗ್ಗದ ಸೋಗಾನೆಯಲ್ಲಿ ನೂತನವಾಗಿ ನಿರ್ಮಾಣವಾದ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಿ ನಂತರ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು ಶಿವಮೊಗ್ಗದ ಪ್ರಮುಖ ಎರಡು ಧಾರ್ಮಿಕ ಕೇಂದ್ರಗಳ ಹೆಸರನ್ನು ಉಲ್ಲೇಖಿಸಿದರು. ಅದರಲ್ಲಿ ಪ್ರಮುಖವಾಗಿ ಶ್ರೀ ಕ್ಷೇತ್ರ ಸಿಗಂದೂರ ಚೌಡೇಶ್ವರಿ ಅಮ್ಮನವರನ್ನು ಸ್ಮರಿಸಿಕೊಂಡಿದ್ದಾರೆ, ದೇಶದ ಪ್ರಧಾನಿ ಮೋದಿ ಅವರೇ ತಾಯಿಯನ್ನು ಸ್ಮರಿಸಿಕೊಳ್ಳುತ್ತಾರೆ ಅಂದ್ರೆ ಆ ತಾಯಿಯ ಶಕ್ತಿ ಏನೆಂಬುದನ್ನು ಅರಿತುಕೊಳ್ಳಬೇಕಿದೆ, ಮಾತ್ರವಲ್ಲ ಶ್ರೀ ಸಿಗಂದೂರು ಚೌಡೇಶ್ವರೀ ದೇವಸ್ಥಾನದ ವಿರುದ್ಧ ಸಂಚು ನಡೆಸುತ್ತಿರುವವರು ಆ ರೀತಿಯ ಸಂಚುಗಳನ್ನು ಕೈ ಬಿಟ್ಟು…ತಾಯಿಯ ಶಕ್ತಿಯನ್ನು ಮತ್ತು ಶ್ರೀ ಕ್ಷೇತ್ರದ ಅನುವಂಶಿಕ ಧರ್ಮದರ್ಶಿಗಳಾದ ಪೂಜ್ಯ ಶ್ರೀ ರಾಮಪ್ಪಾಜೀ ರವರ ಶ್ರಮವನ್ನು ಅರಿತುಕೊಳ್ಳುವುದು ಅವಶ್ಯಕವಾಗಿದೆ ಎಂಬ ಚರ್ಚೆ ಶುರುವಾಗಿದೆ.
ಜನರಿಗೆ ಜೋಷ್ ತುಂಬಿದ ಆರಗ!
ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಉದ್ಘಾಟನೆಗೆ ತೆರಳುತ್ತಿದ್ದ ಜನರಿಗೆ ಗೃಹ ಮಂತ್ರಿ ಅರಗ ಜ್ಞಾನೇಂದ್ರ ಅವರು ತಮ್ಮ ಕಾರಿನಲ್ಲಿ ಹೋಗುತ್ತಾ ಕಾರ್ಯಕರ್ತರು ಸಾಗುತ್ತಿದ್ದ ಬಸ್ನತ್ತ ಕೈ ಬೀಸುತ್ತ ಸಾಗಿರುವ ವಿಡಿಯೋ ವೈರಲ್ ಆಗಿದೆ.