ಅಂತೂ ಸಿಕ್ಕಿಬಿದ್ದ ನರಬಲಿ ಪಡೆದ ಚಿರತೆ!
– ದಾವಣಗೆರೆ ಮೂಲದ ಕುಟುಂಬ ಅಮೆರಿಕದಲ್ಲಿ ಸಾವು
NAMMUR EXPRESS NEWS
ದಾವಣಗೆರೆ: ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಹಾಲೆಕಲ್ಲು ಗ್ರಾಮದ ಪತಿ, ಪತ್ನಿ ಹಾಗೂ ಗಂಡು ಮಗು ಸೇರಿದಂತೆ ಮೂವರು ಅಮೆರಿಕಾದಲ್ಲಿ ಸಾವಿಗೀಡಾದ ಘಟನೆ ನಡೆದಿದೆ. ಅಮೆರಿಕಾದ ಮೇರಿಲ್ಯಾಂಡ್ ರಾಜ್ಯದ ಬಾಲ್ಟಿಮೋರ್ ನಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಮೃತಪಟ್ಟವರು ಯೋಗೇಶ್ ಹೊನ್ನಾಳ (37), ಪ್ರತಿಭಾ ಹೊನ್ನಾಳ್ (35) ಹಾಗೂ ಯಶ್ ಹೊನ್ನಾಳ್ (6) ಎಂದು ವರದಿಯಿಂದ ತಿಳಿದುಬಂದಿದೆ. ಕಳೆದ 9 ವರ್ಷಗಳ ಹಿಂದೆ ದಂಪತಿ ಮದುವೆಯಾಗಿದ್ದು, ಅಮೆರಿಕಾದಲ್ಲಿ ವಾಸವಾಗಿದ್ದರು. ಇನ್ನೂ ಪತಿ ಹಾಗೂ ಪತ್ನಿ ಇಬ್ಬರೂ ವೃತ್ತಿಯಲ್ಲಿ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತಗತಿದ್ದಾರೆ. ಆದರೆ ಮೂವರ ಸಾವು ಯಾವ ರೀತಿಯಾಗಿದೆ ಎನ್ನುವ ಕುರಿತು ಮಾಹಿತಿ ಇಲ್ಲ.
ಇದೀಗ ಮೂವರ ಸಾವಿನ ನಿಖರ ಕಾರಣ ತಿಳಿಸುವಂತೆ ಹಾಗೂ ಮೃತದೇಹಗಳನ್ನು ಸ್ವದೇಶಕ್ಕೆ ತರಿಸಿಕೊಡುವಂತೆ ಮೃತರ ಕುಟುಂಬಸ್ಥರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಮಹಿಳೆ ಬಲಿ ಪಡೆದ ಚಿರತೆ ಬೋನಿನಲ್ಲಿ ಸೆರೆ!
ಶಿವಮೊಗ್ಗದ ಬಿಕ್ಕೋನಹಳ್ಳಿಯಲ್ಲಿ ಚಿರತೆಯೊಂದು ಬೋನ್ ಗೆ ಬಿದ್ದಿದ್ದು, ಬೆಳಗ್ಗೆಯಿಂದ ಜನ ಜಂಗುಳಿಯಾಗಿದೆ. ರಾತ್ರಿ 8-30 ರ ಸಮಯದಲ್ಲಿ ಚಿರತೆ ಬೋನ್ ನಲ್ಲಿ ಕಾಣಿಸಿಕೊಂಡಿರುವುದನ್ನು ಗ್ರಾಮಸ್ಥರು ನೋಡಿದ್ದಾರೆ. 6 ವರ್ಷದ ಗಂಡು ಚಿರತೆ ಬೋನಿನಲ್ಲಿ ಪತ್ತೆಯಾಗಿದೆ. ಓರ್ವ ಮಹಿಳೆಯನ್ನು ಚಿರತೆ ಬಲಿ ಪಡೆದಿತ್ತು.