ಆನಂದಪುರ: ವ್ಯಕ್ತಿ ರೈಲಿಗೆ ಸಿಲುಕಿ ಅರ್ಧ ದೇಹ ತುಂಡು!
– ಶಿವಮೊಗ್ಗ: ಅಡ್ರೆಸ್ ಕೇಳಿ, ಬೈಕ್ ಸವಾರನ ಮುಖಕ್ಕೆ ಗುದ್ದಿದ ದುಷ್ಕರ್ಮಿಗಳು!
– ತೀರ್ಥಹಳ್ಳಿಯಲ್ಲಿ ಗನ್ ಶಾಟ್: ಓರ್ವ ಆಸ್ಪತ್ರೆಗೆ!
NAMMUR EXPRESS NEWS
ಸಾಗರ: ಸಾಗರ ತಾಲೂಕಿನ ಆನಂದಪುರ ಸಮೀಪದ ಎಡೆಹಳ್ಳಿ ಬಳಿ ವ್ಯಕ್ತಿ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾರೆ.
ಸುಮಾರು 40 ರಿಂದ 45 ವರ್ಷ ಅಂದಾಜಿನ ವಯಸ್ಸಿನ ವ್ಯಕ್ತಿ ಸಾವನ್ನಪ್ಪಿದ್ದು, ವ್ಯಕ್ತಿಯ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ. ಬೆಂಗಳೂರಿನಿಂದ ತಾಳಗುಪ್ಪ ಕಡೆ ಬರುವ ರಾತ್ರಿ 9 ಗಂಟೆಯ ರೈಲಿಗೆ ವ್ಯಕ್ತಿ ಸಿಲುಕಿದ್ದು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ರೈಲ್ವೆ ಪೊಲೀಸ್ ತಂಡ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.
ಬೊಮ್ಮನಕಟ್ಟೆ ಅಡ್ರೆಸ್ ಕೇಳಿ, ಬೈಕ್ ಸವಾರನ ಮುಖಕ್ಕೆ ಗುದ್ದಿದ ದುಷ್ಕರ್ಮಿಗಳು!
ಶಿವಮೊಗ್ಗ ನಗರದ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿಳಾಸ ಕೇಳುವ ನೆಪದಲ್ಲಿ ಬೈಕ್ ಸವಾರನೊಬ್ಬನನ್ನ ಸುಲಿಗೆ ಮಾಡಲಾಗಿದೆ. ಶಿವಮೊಗ್ಗ ನಗರದ ರೈಲ್ವೆ ಸ್ಟೇಷನ್ ಸಮೀಪವೇ ಈ ಘಟನೆ ಸಂಭವಿಸಿದೆ.
ಆ.2ರಂದುಬಿದರೆಯಿಂದ ಬೈಕ್ ಸವಾರರೊಬ್ಬರು 100 ಅಡಿ ರಸ್ತೆಯಲ್ಲಿ ಬರುತ್ತಿದ್ದರು. ಈ ವೇಳೇ ಅವರನ್ನು ಹಿಂದಿನಿಂದ ಫಾಲೋ ಮಾಡಿದ್ದ ಇಬ್ಬರು ಬೊಮ್ಮನಕಟ್ಟೆ ಹೋಗುವುದು ಹೇಗೆ ಎಂದು ವಿಚಾರಿಸಿದ್ದಾರೆ. ಈ ವೇಳೆ, ದೂರುದಾರ ಬೈಕ್ ನಿಲ್ಲಿಸಿ ಅಡ್ರೆಸ್ ಹೇಳಿದ್ದಾರೆ. ಅಷ್ಟರಲ್ಲಿ ಬೈಕ್ನಿಂದ ಇಳಿದ ದುಷ್ಕರ್ಮಿ, ಸಂತ್ರಸ್ತ ನಾಗರಾಜ್ ಬೈಕ್ ಕೀ ತೆಗೆದುಕೊಂಡು ಅವರ ಮುಖಕ್ಕೆ ಹಲ್ಲೆ ಮಾಡಿದ್ದಾನೆ. ಈ ವೇಳೆ ಇನ್ನೊಬ್ಬ ದುಷ್ಕರ್ಮಿ ಚಾಕು ತೋರಿಸಿ ನಾಗರಾಜ್ರಿಂದ ಮೊಬೈಲ್ ಹಾಗೂ ಹಣ ಕಿತ್ತುಕೊಂಡಿದ್ದಾರೆ. 10000/- ರೂ ನಗದು ಹಣ ವೀವೋ ಕಂಪನಿಯ ಮೊಬೈಲ್ ಅನ್ನು ಕಿತ್ತುಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ದೌಡಾಯಿಸಿ ನಾಗರಾಜ್ರಿಗೆ ಮೆಗ್ಗಾನ್ನಲ್ಲಿದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆನಂತರ ನಾಗರಾಜ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ತೀರ್ಥಹಳ್ಳಿಯಲ್ಲಿ ಕೋವಿ ಗುಂಡಿನ ಶಬ್ದ
ತೀರ್ಥಹಳ್ಳಿಯ ದಾಸನ ಗದ್ದೆಯ ಬಳಿ ಫೈರಿಂಗ್ ಆಗಿದ್ದು ಗುಂಡು ಹೊಡೆತ ಬಿದ್ದವನನ್ನು ಮಣಿಪಾಲಿಗೆ ಸಾಗಿಸಲಾಗಿದೆ ಎಂದು ವರದಿ ತಿಳಿದು ಬಂದಿದೆ.ತೀರ್ಥಹಳ್ಳಿಯ ಆರಗದ ಸಮೀಪದ ದಾಸನಗದ್ದೆ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ರಾಕೇಶ್ ಎಂಬುವರ ತೊಡೆಗೆ ಗುಂಡು ಹಾರಿದೆ. ಮಿಸ್ ಫೈರಿಂಗ್ ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ.ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ. ಆದರೂ ಮಾಹಿತಿ ಪ್ರಕಾರ ತೋಟದಲ್ಲಿ ಶಬ್ದ ಕೇಳಿ ಬಂದ ಹಿನ್ನಲೆಯಲ್ಲಿ ಗನ್ ತೆಗೆದುಕೊಂಡು ಹೋಗಿದ್ದು ಮಿಸ್ ಫೈರಿಂಗ್ ಆದ ಕಾರಣ ತೊಡೆಗೆ ಬಿದ್ದಿದೆ ಎಂದು ಹೇಳಲಾಗುತ್ತಿದೆ. ಘಟನೆ ತೀರ್ಥಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೆಲ ತಿಂಗಳು ಹಿಂದಷ್ಟೇ ಗನ್ ಶಾಟ್ ಪ್ರಕರಣದಲ್ಲಿ ಒಬ್ಬರ ಪ್ರಾಣ ಹೋಗಿತ್ತು.
ಇದನ್ನೂ ಓದಿ : ನಾನು ಬದುಕಿರುವುದೇ ಕಿಮ್ಮನೆಗೆ ಸಹಿಸಲಾಗುತ್ತಿಲ್ಲ
HOW TO APPLY : NEET-UG COUNSELLING 2023