ಕುವೆಂಪು ಪ್ರತಿಷ್ಠಾನಕ್ಕೆ ಮತ್ತೆ ಬಿ.ಎಲ್ ಶಂಕರ್ ಅಧ್ಯಕ್ಷರು
– ಸದಸ್ಯರಾಗಿ ಪತ್ರಕರ್ತ ಶಿವಾನಂದ ಕರ್ಕಿ ನೇಮಕ
– ಸರ್ಕಾರ ಆದೇಶ: ಸದಸ್ಯರು ಯಾರು ಯಾರು…?
NAMMUR EXPRESS NEWS
ಶಿವಮೊಗ್ಗ: ತೀರ್ಥಹಳ್ಳಿಯ ಕುವೆಂಪು ಕವಿಶೈಲದ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ನೂತನ ಅಧ್ಯಕ್ಷರಾಗಿ ಮಾಜಿ ಸಚಿವರಾದ ಬಿ.ಎಲ್ ಶಂಕರ್ ಅವರನ್ನು ಸರ್ಕಾರ ನೇಮಿಸಿದೆ. ಪ್ರತಿಷ್ಠಾನದ ಪದನಿಮಿತ್ತ ಉಪಾಧ್ಯಕ್ಷರಾಗಿ ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೋ ಶರತ್ ಅನಂತಮೂರ್ತಿ ಪದನಿಮಿತ್ತ ಕಾರ್ಯದರ್ಶಿಯಾಗಿ ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತಹೆಗ್ಡೆ ಸಮಕಾರ್ಯದರ್ಶಿಯಾಗಿ ಕಡಿದಾಳ್ ಪ್ರಕಾಶ್, ಖಜಾಂಚಿಯಾಗಿ ಡಿ.ಎಂ ಮನುದೇವ್ ಹಾಗೂ ಸದಸ್ಯರುಗಳಾಗಿ ಹಿರಿಯ ಪತ್ರಕರ್ತ, ಜಾನಪದ ತಜ್ಞ ಶಿವಾನಂದ ಕರ್ಕಿ, ಸಿ ಬಸವಲಿಂಗಯ್ಯ, ಎಸ್ ವಿ ದಯಾನಂದ, ಕುವೆಂಪು ವಿವಿ ಮಾಜಿ ಕುಲಪತಿ ಡಾ ಚಿದಾನಂದಗೌಡ , ಎಂ.ಸಿ ನರೇಂದ್ರ ಅವರನ್ನು ನೇಮಕ ಮಾಡಲಾಗಿದೆ.
ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರು, ಶಿವಮೊಗ್ಗ ಉಪರಣ್ಯ ಸಂರಕ್ಷಣಾಧಿಕಾರಿ, ಮಲೆನಾಡು ಪ್ರದೇಶಾಭಿವೃದ್ದಿ ಮಂಡಳಿ ಅಧ್ಯಕ್ಷರು, ಲೋಕೋಪಯೋಗಿ ಇಲಾಖೆ ವೃತ್ತ ಅಧೀಕ್ಷಕ ಇಂಜಿನಿಯರ್, ಪ್ರವಾಸೋದ್ಯಮ ಇಲಾಖೆ ನಿರ್ದೇಶಕರುಗಳು, ಸರ್ಕಾರದ ಆರ್ಥಿಕ ಇಲಾಖೆ ಕಾರ್ಯದರ್ಶಿ, ಶಿವಮೊಗ್ಗ , ಚಿಕ್ಕಮಗಳೂರು ಜಿಲ್ಲಾ ಪಂಚಾಯ್ತಿ ಅಧ್ಯಕ್ಷರುಗಳು, ಅವರುಗಳೂ ಪದನಿಮಿತ್ತ ಸದಸ್ಯರಾಗಿದ್ದಾರೆ. ತೀರ್ಥಹಳ್ಳಿ ಶಾಸಕರು, ದೇವಂಗಿ ಗ್ರಾಮಪಂಚಾಯ್ತಿ ಅಧ್ಯಕ್ಷರು, ತೀರ್ಥಹಳ್ಳಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರುಗಳು ವಿಶೇಷ ಆಹ್ವಾನಿತರನ್ನಾಗಿ ಸರ್ಕಾರ ಆದೇಶ ಹೊರಡಿಸಿದೆ.