ಹಬ್ಬಕ್ಕೆ ಹೂವಿನ ದರ ಡಬ್ಬಲ್!
-ಹಳದಿ ಸೇವಂತಿಗೆ ಹೂವು ಬೆಲೆ ಕಡಿಮೆ ಉಳಿದ ಹೂವಿನ ಬೆಲೆ ಏರಿಕೆ
NAMMUR EXPRESS NEWS
ಶಿವಮೊಗ್ಗ : ಶಿವಮೊಗ್ಗದಲ್ಲಿ ಗೌರಿ ಗಣೇಶ ಹಬ್ಬಕ್ಕೆ ಹೂವಿನ ದರಗಳು ಡಬ್ಬಲ್ ಆಗಿವೆ. ಒಂದೇ ಒಂದು ಹೂವು ಬಿಟ್ಟು ಉಳಿದ ಹೂವುಗಳೆಲ್ಲಾ ಡಬ್ಬಲ್ ಆಗಿವೆ. ಹಬ್ಬಗಳೆಂದರೆ ಹೂವು, ಹಣ್ಣುಗಳು ಬೇಕೇ ಬೇಕು. ಇದರಿಂದಾಗಿ ಹೂವು ಮತ್ತು ಹಣ್ಣುಗಳ ದರದಲ್ಲಿ ಕೊಂಚ ಏರಿಕೆಯಾಗಿವೆ. ಆದರೂ ಹೂವಿಗಾಗಿ ಖರೀದಿ ಜೋರಾಗಿದೆ. ವರ್ಷಕ್ಕೊಮ್ಮೆ ಬರುವ ಹಬ್ಬಗಳನ್ನ ದರ ಹೆಚ್ಚಳದ ಹಿನ್ನೆಲೆಯಲ್ಲಿ ಆಚರಿಸಲು ಇರಲು ಸಾಧ್ಯವಿಲ್ಲ. ಹಾಗಾಗಿ ಹೂವಿನ ಖರೀದಿ ಈ ಬಾರಿಯ ಗೌರಿ ಗಣೇಶಕ್ಕೆ ದುಬಾರಿಯಾಗಿದೆ. ಹಳದಿ ಸೇವಂತಿಗೆ ಹೂವು ಮಾತ್ರ ಕೆಜಿಗೆ 50 ರೂ ಇದ್ದು ಉಳಿದ ಹೂವುಗಳು ದುಬಾರಿಯಾಗಿವೆ. ಆ.25 ರಂದು ನಡೆದ ವರಮಹಾಲಕ್ಷ್ಮೀ ಹಬ್ಬಕ್ಕೆ ಇದೇ ಸೇವಂತಿಗೆ ಹೂವು 150-200 ರೂ.ಗೆ ಮಾರಾಟವಾಗಿತ್ತು. ಆದರೆ ಗೌರಿ ಗಣೇಶ ಹಬ್ಬಕ್ಕೆ ಇದರ ಬೇಡಿಕೆ ಇದ್ದರೂ ಹೂವಿನ ಉತ್ಪತ್ತಿ ಹೆಚ್ಚಾಗಿದೆ.
ಅದರಂತೆ ಬಟನ್ ರೋಜ್ 40-70 ಇದ್ದವು 180-200 ರೂ.ಗೆ ಏರಿಕೆಯಾಗಿವೆ. ಕಳೆದ ವಾರ 80 ರೂವಿದ್ದ ಸುಗಂಧ ರಾಜ 200 ರೂ. ಗೆ ಜಿಗಿದಿದೆ. ಕಾಕಟ 250 ರೂಗೆ ಮಾರಾಟವಾಗುತ್ತಿದೆ, 150-200 ರೂ. ಮಲ್ಲಿಗೆ 300-400 300-350 ರೂ. ಇದ್ದ ಕನಂಕಾಬರ ಹೂವು 600 ರೂವಿನಿಂದ 700 ರೂ. ಗೆ ಏರಿದೆ. ಆದರೂ ಹಬ್ವಕ್ಜೆ ಮಹಿಳೆಯರು ಖರೀದಿ ಜೋರಾಗಿದೆ.