ಡಾ.ಆರ್.ಎಂ.ಮಂಜುನಾಥ ಗೌಡರಿಗೆ ಮತ್ತೆ ಹುದ್ದೆ?
– ಡಿಸಿಸಿ ಬ್ಯಾಂಕ್ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಗ್ರೀನ್ ಸಿಗ್ನಲ್?
– ಮುಂದೇನಾಗುತ್ತೆ ಎಂಬುದೇ ಸಸ್ಪೆನ್ಸ್
NAMMUR EXPRESS NEWS
ಶಿವಮೊಗ್ಗ: ಭಾರೀ ಕುತೂಹಲ ಮೂಡಿಸಿದ್ದ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಅವಿಶ್ವಾಸ ನಿರ್ಣಯಕ್ಕೆ ಮುಹೂರ್ತ ಫಿಕ್ಸ್ ಆಗುವ ಎಲ್ಲಾ ಸಾಧ್ಯತೆಗಳು ಹೆಚ್ಚಾಗಿವೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಅವಕಾಶ ಕೋರಿ ಸಲ್ಲಿಸಿದ ಅರ್ಜಿ ಪುರಸ್ಕಾರಗೊಂಡಿದೆ. ಈ ಹಿನ್ನೆಲೆ ರಾಜಕೀಯ ಗರಿಗೆದರಿದೆ.
ಏನಿದು ಆವಿಶ್ವಾಸ?:
ಜು.6ರಂದು ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಷಡಾಕ್ಷರಿಯವರ ನೇತೃತ್ವದಲ್ಲಿ 13 ಜನ ನಿರ್ದೇಶಕರಲ್ಲಿ 6 ಜನರ ನೇತೃತ್ವದಲ್ಲಿ ಬ್ಯಾಂಕ್ ನ ವ್ಯವಸ್ಥಾಪಕ ನಿರ್ದೇಶಕ ವಾಸುದೇವ ಅವರಿಗೆ ಮನವಿ ಸಲ್ಲಿಸಿತ್ತು. ಡಿಸಿಸಿ ಬ್ಯಾಂಕ್ ನ ಅಧ್ಯಕ್ಷ ಚನ್ನವೀರಪ್ಪನವರ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಸಮಯ ಅವಕಾಶ ಕೋರಿ ಅರ್ಜಿ ಸಲ್ಲಿಸಿದ್ದರು.
ಎಂಡಿಯವರು ಬೆಂಗಳೂರಿನ ಕೇಂದ್ರ ಬ್ಯಾಂಕ್ ಸಕ್ಷಮ ಪ್ರಾಧಿಕಾರಕ್ಕೆ ಮನವಿ ಪತ್ರ ರವಾನಿಸಿದ್ದರು. ಸಮಕ್ಷಮ ಪ್ರಾಧಿಕಾರದ ಅಧಿಕಾರಿಗಳು ಜು.28 ರಂದು ಅವಿಶ್ವಾಸ ಮಂಡನೆಗೆ ಸಮಯ ಅವಕಾಶ ನೀಡಿ ಎಂಡಿಯವರಿಗೆ ಪತ್ರ ರವಾನಿಸಿದ್ದಾರೆ. ಇದರಿಂದ ಅವಿಶ್ವಾಸ ನಿರ್ಣಯಕ್ಕೆ ಮುಹೂರ್ತ ಫಿಕ್ಸ್ ಆಗಿದೆ.
ಅಧ್ಯಕ್ಷರ ಮುಂದಿನ ನಡೆ ಏನಾಗಬಹುದು?
13 ಜನ ನಿರ್ದೇಶಕರಲ್ಲಿ, ಷಡಾಕ್ಷರಿ, ಎಸ್ಪಿ ದಿನೇಶ್, ದುಗ್ಗಪ್ಪ ಗೌಡ, ಬಸವಾನಿ ವಿಜಯದೇವ, ಎಂಎಂ ಪರಮೇಶ್, ಹೆಚ್ ಕೆ ವೆಂಕಟೇಶ್, ಸುಧೀರ್ ಜಿ.ಎನ್ ಸೇರಿ ಏಳು ಜನರ ಅವಿಶ್ವಾಸ ನಿರ್ಣಯಕ್ಕೆ ಅವಕಾಶ ಕೋರಿ ಎಂಡಿಗೆ ಅರ್ಜಿ ಸಲ್ಲಿಸಿದ್ದರು.
ಈಗ ಸಕ್ಷಮ ಪ್ರಾಧಿಕಾರ ದಿನಾಂಕ ಫಿಕ್ಸ್ ಮಾಡಿ ಎಂಡಿಗೆ ಪತ್ರ ರವಾನಿಸಿದೆ. ಪತ್ರದ ಪ್ರಕಾರ ಜು.28 ರಂದು ಅವಿಶ್ವಾಸ ನಿರ್ಣಯ ಮಂಡನೆಗೆ ದಿನಾಂಕ ಫಿಕ್ಸ್ ಮಾಡಿ ಕಳುಹಿಸಿದೆ. ಇದರಿಂದಾಗಿ ಅಧ್ಯಕ್ಷ ಚನ್ನವೀರಪ್ಪನವರಿಗೆ ಒಂದೋ ಫಿಕ್ಸ್ ಆದ ದಿನಾಂಕದೊಳಗೆ ರಾಜೀನಾಮೆ ನೀಡಬೇಕು. ಇಲ್ಲ ಅವಿಶ್ವಾಸ ಮತದಾನ ಎದುರಿಸಬೇಕಿದೆ.
ಇದನ್ನೂ ಓದಿ : ಅಡಿಕೆ ದರ ಎಷ್ಟಿದೆ..? ಪ್ರಮುಖ ಮಾರುಕಟ್ಟೆಯಲ್ಲಿ ಏನಿದೆ ದರ?
HOW TO APPLY : NEET-UG COUNSELLING 2023