- ಮೊದಲ ದಿನವೇ 7 ಲಕ್ಷ ಕೋಟಿ ಹೂಡಿಕೆ
- ಸಚಿವ ನಿರಾಣಿ ಸಂತಸ
NAMMUR EXPRESS NEWS
ಬೆಂಗಳೂರು: ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾ ವೇಶ 2022ರ ಮೊದಲ ದಿನವೇ ನಿರೀಕ್ಷೆಗೂ ಮೀರಿ 7.6 ಲಕ ಕೋಟಿ ರು. ಬಂಡವಾಳ ಹೂಡಿ ಕೆಗೆ ಹಲವು ಕೈಗಾರಿಕಾ ಹೂಡಿಕೆದಾರರೊಂದಿಗೆ ಒಪ್ಪಂದಗಳು ಏರ್ಪಟ್ಟಿದ್ದು, ಇದು – ಜಿಮ್ ಕೊನೆಯದಿನದವೇಳೆಗೆ ಇನ್ನಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.
ಬುಧವಾರ ಸಮಾವೇಶ ಮುಕ್ತಾಯಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಜಿಮ್ನಲ್ಲಿ 5 ಲಕ್ಷ ಕೋಟಿ ರು. ಬಂಡವಾಳ ನಿರೀಕ್ಷಿಸಿದ್ದೆವು. ಆದರೆ, ನಿರೀಕ್ಷೆಗೂ ಮೀರಿ 7.6 ಲಕ್ಷ ಕೋಟಿ ಬಂಡವಾಳ ಹೂಡಿಕೆಗೆ ಒಪ್ಪಂದಗಳು ಮೊದಲ ದಿನವೇ ಏರ್ಪಟ್ಟಿವೆ. ಇದರಿಂದ ನಿರೀಕ್ಷೆಗೂ ಮೀರಿ 8 ಲಕ್ಷ ಹೊಸ ಉದ್ಯೋಗ ಸೃಷ್ಟಿಯಾಗುವ ಭರವಸೆ ಸಿಕ್ಕಿದೆ. ಜಿಮ್ 3 ಮುಕ್ತಾಯಗೊಳ್ಳುವನ.4ರವೇಳೆಗೆ ಇನ್ನಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ.ಈ ಹಿಂದೆ 2010ರಲ್ಲಿ ಬಿ.ಎಸ್.ಯಡಿಯೂರಪ್ಪ
ಅವರ ನೇತೃತ್ವದ ಸರ್ಕಾರದಲ್ಲಿ ನಾವು ಜಾಗತಿಕ ಹೂಡಿಕೆದಾರರ ಸಮಾವೇಶ ಮಾಡಿದ್ದೆವು. ಆಗ 3.8 ಲಕ್ಷ ಕೋಟಿ ರು.ನಷ್ಟು ಬಂಡವಾಳ ಹೂಡಿ ಕೆಯ ಒಪ್ಪಂದಗಳಿಗೆ ಸಹಿ ಆಗಿತ್ತು. ನಂತರ 2012ರಲ್ಲಿ ಮತ್ತೊಂದು ಜಿಮ್ ನಡೆಸಿದಾಗ ವಿವಿಧ ಕೈಗಾರಿಕೆಗಳೊಂದಿಗೆ 7.6 ಲಕ್ಷ ಕೋಟಿ ರು. ಹೂಡಿಕೆಯ ಒಪ್ಪಂದಗಳಿಗೆ ನಾವು ಸಹಿ ಮಾಡಿದ್ದೆವು ಎಂದು ಅವರು ಮಾಹಿತಿ ನೀಡಿದರು.
ಹೊಸವಿಚಾರ ಅಂದರೆ ಈ ಬಾರಿ ಬಂದಿರುವ ಬಂಡವಾಳ ಹೆಚ್ಚಾಗಿ ಬೆಂಗಳೂರಿನ ಹೊರಭಾಗದಲ್ಲಿಯೇ ಹೂಡಿಕೆಯಾ ಗಲಿದೆ. 2 ಮತ್ತು 3ನೇ ಹಂತದ ನಗರಗಳಲ್ಲಿ ಉತ್ತಮ ಕಾಮಗಾರಿ ಸ್ನೇಹಿ ವಾತಾವರಣ ಸೃಷ್ಟಿಗೆ ಸರ್ಕಾರ ಕ್ರಮ ವಹಿಸುತ್ತಿದೆ. ಬರುವ ಮಾರ್ಚ್ಗೂ ಮುನ್ನ ಹಾಸನ, ಶಿವಮೊಗ್ಗ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಮೂರು ಹೊಸ ವಿಮಾನ ನಿಲ್ದಾಣಗಳು ಆರಂಭವಾಗಲಿವೆ. ನಂತರ ದಾವಣಗೆರೆ, ಬಾದಾಮಿ, ಕೊಪ್ಪಳ, ರಾಯಚೂರು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ವಿಮಾನ ನಿಲ್ದಾಣಕ್ಕೆ ಭೂಮಿಯನ್ನು ಗುರುತಿಸುವ ಕೆಲಸ ಆಗುತ್ತಿದೆ ಎಂದರು.