ಎಟಿಎಂ ಕಳ್ಳತನಕ್ಕೆ ಜೆಸಿಬಿಯನ್ನೇ ತಂದ!
– ಹಣದ ಮಿಷನನ್ನೇ ಎತ್ತಿಕೊಂಡು ಹೋಗುವ ವಿಫಲ ಯತ್ನ
– ಶಿವಮೊಗ್ಗ ಎಟಿಎಂನಲ್ಲಿ ನಡೆದ ಘಟನೆ: ಭಲೇ ಕಳ್ಳ!
NAMMUR EXPRESS NEWS
ಶಿವಮೊಗ್ಗ: ಏಟಿಎಂ ಕದಿಯೋದನ್ನು ನೋಡಿದ್ದೇವೆ… ಕೇಳಿದ್ದೇವೆ.. ಆದರೆ ಇಲ್ಲೊಬ್ಬ ಏಟಿಎಂ ಕಡಿಯಲು ಜೆಸಿಬಿಯನ್ನೇ ತಂದ ಪ್ರಕರಣ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗದ ಎಟಿಎಂನಲ್ಲಿರುವ ಹಣದ ಮಿಷಿನ್ ಅನ್ನು ಜೆಸಿಬಿಯಿಂದ ಎತ್ತಿಕೊಂಡು ಹೋಗುವ ವಿಫಲ ಯತ್ನ ನಡೆದಿರುವ ಘಟನೆ ಬುಧವಾರ ಮುಂಜಾನೆ ನಡೆದಿದೆ. ವಿನೋಬನಗರ ಇಂದಿರಾ ಕ್ಯಾಂಟೀನ್ ಮುಂಭಾಗದ ಪೆಟ್ರೋಲ್ ಬಂಕ್ ಬಳಿ ಜೆಸಿಬಿ ನಿಲ್ಲಿಸಲಾಗಿತ್ತು. ಅನಾಥವಾಗಿ ನಿಂತಿದ್ದ ಜೆಸಿಬಿಯನ್ನ ಚಲಾಯಿಸಿಕೊಂಡು ಬಂದ ಅಪರಿಚತ ವ್ಯಕ್ತಿ ಶಿವಾಲಯದ ಬಳಿಯ ಆಕ್ಸಿಸ್ ಬ್ಯಾಂಕ್ ಎಟಿಎಂ ಬಳಿ ತಂದು ನಿಲ್ಲಿಸಿದ್ದಾನೆ.
ಏಟಿಎಂ ಶೆಟರ್ ಅನ್ನು ಜೆಸಿಬಿಯಿಂದಲೇ ಎತ್ತಿದ್ದಾನೆ. ಎಟಿಎಂ ಮಿಷನ್ ಕೀಳಲು ಸಿದ್ಧ ಮಾಡಿಕೊಂಡ ವೇಳೆ ಗಸ್ತಿನಲ್ಲಿದ್ದ ಪೊಲೀಸರು ಬರುವುದನ್ನ ಕಂಡು ಜೆಸಿಬಿ ಬಿಟ್ಟು ಪರಾರಿಯಾಗಿದ್ದಾನೆ. ಜೆಸಿಬಿಯನ್ನು ವಿನೋಬ ನಗರ ಠಾಣೆಗೆ ತಂದಿಡಲಾಗಿದೆ. ಎಟಿಎಂಗೆ ಭದ್ರತಾ ಸಿಬ್ಬಂದಿಗಳನ್ನ ನೇಮಿಸದ ಕಾರಣ ಇಂತಹ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಮಧ್ಯರಾತ್ರಿ ಮಟ್ಕಾ ಆಡುತ್ತಿದ್ದ 13 ಜನ ಅರೆಸ್ಟ್!
ಮಧ್ಯರಾತ್ರಿ ಒಂದು ಗಂಟೆಗೆ ಮುಲ್ಕಿ ಪೊಲೀಸರು ಮಟ್ಕಾ ಅಡ್ಡೆಗೆ ದಾಳಿ ನಡೆಸಿದ್ದು 13 ಜನರನ್ನು ಬಂಧಿಸಿದ ಘಟನೆ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಂಧಿತ ಆರೋಪಿಗಳನ್ನು ಸ್ಥಳೀಯ ನಿವಾಸಿಗಳಾದ ಸುಧಾಕರ, ಅಶೋಕ, ರಮೇಶ್ ಗೌಡ, ಅಡಿವೆಪ್ಪ ಅಲಿಯಾಸ್ ಹರೀಶ್, ಬುದ್ಧಿವಂತ, ಅಣ್ಣರಾಯ, ಸಿದ್ದಿಕ್, ಮಹಮ್ಮದ್ ಇಮ್ರಾನ್, ಕಶ್ ಗುಡ್ಡಪ್ಪ ಪೂಜಾರ್, ಗಿರೀಶ್ ಕೋಟ್ಯಾನ್, ನಿಂಗಪ್ಪಅಲಿಯಾಸ್ ವೀರಪ್ಪ, ಚಂದ್ರಶೇಖರ ನಾವಿ, ಹನುಮಂತ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ : ಖಾಸಗಿ ಚಾನಲ್ ವಿರುದ್ದ ಕಿಮ್ಮನೆ 5 ಕೋಟಿ ಕೇಸ್!?
HOW TO APPLY : NEET-UG COUNSELLING 2023