ಜೆಡಿಎಸ್ ನಾಯಕ ಶ್ರೀಕಾಂತ್ ಕಾಂಗ್ರೆಸ್ ಕಡೆಗೆ!
– ಶಿವಮೊಗ್ಗ ರಾಜಕೀಯದಲ್ಲಿ ಭಾರೀ ಬಿರುಗಾಳಿ
– ಜೆಡಿಎಸ್ ಜಿಲ್ಲಾಧ್ಯಕ್ಷರಾಗಿದ್ದ ಶ್ರೀಕಾಂತ್
NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗ ರಾಜಕಾರಣದಲ್ಲಿ ಬಿರುಗಾಳಿ ಬೀಸತೊಡಗಿದೆ. ಬಹುತೇಕ ನಾಯಕರು ಕಾಂಗ್ರೆಸ್ ಕಡೆಗೆ ಬರುತ್ತಿದ್ದಾರೆ. ಈಗಾಗಲೇ ಆಯನೂರು ಮಂಜುನಾಥ್, ನಾಗರಾಜ್ ಗೌಡ ಆಗಮನದ ಬೆನ್ನಲ್ಲೇ ಇದೀಗ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆ ಬಹುತೇಕ ಪಕ್ಕಾ ಆಗಿದೆ. ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಜೊತೆ ಇರುವ ಫೊಟೊವೊಂದು ವೈರಲ್ ಆಗಿದ್ದು ಅದರ ಬೆನ್ನಲ್ಲೇ ಶ್ರೀಕಾಂತ್ ತಾವು ಪಕ್ಷ ಸೇರುವುದು ಖಚಿತ ಪಡಿಸಿದ್ದಾರೆ. ಇದು ರಾಜಕೀಯ ಪಡಸಾಲೆಯಲ್ಲಿ ವಿಧಾನ ಸಭಾ ಚುನಾವಣೆಯ ವೇಳೆ ಜೆಡಿಎಸ್ ಸೇರ್ಪಡೆಗೊಂಡು ಅಖಾಡಕ್ಕೆ ಇಳಿದಿದ್ದ ಆಯನೂರು ಮಂಜುನಾಥ್ ಆ.24 ರಂದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು. ಅದರ ಜೊತೆ ಹಲವಾರು ಜೆಡಿಎಸ್ ನಾಯಕರು ಕಾಂಗ್ರೆಸ್ ಸೇರ್ಪಡೆಯಾಗಿದ್ದರು.
ಜಿಲ್ಲಾ ಜೆಡಿಎಸ್ಸಿಗೆ ಭದ್ರಬುನಾದಿಯಾಗಿರುವ ಶ್ರೀಕಾಂತ್ ಸಹ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಿರುವುದು ಪಕ್ಷಕ್ಕೆ ದೊಡ್ಡ ಆಘಾತಕಾರಿಯಾಗಿದೆ. ಅಲ್ಲದೆ ರಾಜಕೀಯವಾಗಿ ಇದೊಂದು ದೊಡ್ಡ ಹೆಜ್ಜೆ ಆಗಿದೆ.
20 ವರ್ಷ ಶಿವಮೊಗ್ಗ ಜಿಲ್ಲೆಯಲ್ಲಿ ಪಕ್ಷ ಕಟ್ಟಿದ ನಾಯಕ!
ಶ್ರೀಕಾಂತ್ ಜೆಡಿಎಸ್ ಶಿವಮೊಗ್ಗ ಜಿಲ್ಲೆಯಲ್ಲಿ ಕಟ್ಟಿದ ನಾಯಕ. ಯಾರು ಬರಲಿ ಯಾರು ಹೋಗಲಿ ಶ್ರೀಕಾಂತ್ ಮಾತ್ರ ಪಕ್ಷ ಬಿಟ್ಟಿರಲಿಲ್ಲ. ಜೆಡಿಎಸ್ ನಾಯಕ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರ ಆಪ್ತ ಕೂಡ ಇವರು.
20 ವರ್ಷದಿಂದ ಜೆಡಿಎಸ್ ಶಿವಮೊಗ್ಗದಲ್ಲಿ ಕಟ್ಟಿ ಬೆಳೆಸಿದ ಕೀರ್ತಿ ಶ್ರೀಕಾಂತ್ ಗೆ ಸಲ್ಲುತ್ತದೆ. ಗಣೇಶ ಹಬ್ಬಕ್ಕೂ ಮುನ್ನ ಕಾಂಗ್ರೆಸ್ ಪಕ್ಷ ಸೇರ್ಪಡೆಯ ಸುಳಿವು ನೀಡಿರುವ ಶ್ರೀಕಾಂತ್ ಜೊತೆ ಮತ್ತೆಯಾರು ಯಾರು ಹೋಗಲಿದ್ದಾರೆ ಎಂಬುದೇ ಕುತೂಹಲದ ಸಂಗತಿಯಾಗಿದೆ.