ಶಿವಮೊಗ್ಗದಲ್ಲಿ ಕೆಲಸ ಹುಡುಕ್ತಿರೋರಿಗೆ ಉದ್ಯೋಗ!
– ಶಿವಮೊಗ್ಗ ಸೈನ್ಸ್ ಮೈದಾನದಲ್ಲಿ ಸೆ.15ಕ್ಕೆ ಬೃಹತ್ ಉದ್ಯೋಗ ಮೇಳ
– ಅನೇಕ ಖಾಸಗಿ ಕಂಪನಿ ಆಗಮನ: ಕೌಶಲ್ಯ ಅಭಿವೃದ್ಧಿಗೂ ಕೂಡ ಅವಕಾಶ
NAMMUR EXPRESS NEWS
ಶಿವಮೊಗ್ಗ : ಸೈನ್ಸ್ ಮೈದಾನದಲ್ಲಿ ರಾಜ್ಯ ಮಟ್ಟದ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ. ಸುಮಾರು ಐದು ಸಾವಿರ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ. ಡಿಸಿ ಡಾ.ಸೆಲ್ವಮಣಿ ಈ ಬಗ್ಗೆ ಮಾಹಿತಿ ನೀಡಿದ್ದು, ಸೆ.15ರಂದು ನಡೆಯುವ ಉದ್ಯೋಗ ಮೇಳದಲ್ಲಿ ಯಾವುದೆ ವಿದ್ಯಾರ್ಹತೆ ಹೊಂದಿರುವ ಉದ್ಯೋಗ ಆಕಾಂಕ್ಷಿಗಳು ಭಾಗವಹಿಸಬಹುದು ಎಂದು ತಿಳಿಸಿದರು.
ಅನೇಕ ಖಾಸಗಿ ಕಂಪನಿ ಆಗಮನ
ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ನಿರ್ದೇಶಕ ಡಾ. ನಾಗೇಂದ್ರ ಎಫ್.ಹೊನ್ನಳ್ಳಿ ಮಾತನಾಡಿ, ಮೈಕ್ರೋಸಾಫ್ಟ್, ಬಾಷ್, ಟೊಯೋಟಾ ಸಂಸ್ಥೆ ಸೇರಿದಂತೆ ವಿವಿಧ ಕ್ಷೇತ್ರದ ಸುಮಾರು 40-50 ಉದ್ಯಮಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲಿವೆ. ಪ್ರತಿ ಕಂಪನಿಗೆ ಒಂದೊಂದು ಕೊಠಡಿ ಮೀಸಲಿಡಲಾಗಿದೆ. ಆಕಾಂಕ್ಷಿಗಳು ತಮ್ಮ ವಿದ್ಯಾರ್ಹತೆ ಅನುಗುಣವಾಗಿ ಸಂದರ್ಶನದಲ್ಲಿ ಭಾಗವಹಿಸಬಹುದು. ನೇರ ಸಂದರ್ಶನ, ಪರೀಕ್ಷೆಗಳು ಕೂಡ ನಡೆಯಲಿವೆ.
ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಸ್ಥಳೀಯ ಉದ್ಯಮ, ಕೈಗಾರಿಕೆಗಳು ಕೂಡ ಉದ್ಯೋಗ ಮೇಳದಲ್ಲಿ ಭಾಗವಹಿಸಲಿವೆ.
ಆಸಕ್ತರು 8757825088, 9880005425, 08182-255293, 08182-255294 ಸಂಪರ್ಕಿಸಬಹುದು.
ಸೆ.15ರಂದು ನೇರವಾಗಿ ಬಂದು ಹೆಸರು ನೋಂದಾಯಿಸಬಹುದಾಗಿದೆ.
ಕೌಶಲ್ಯ ಅಭಿವೃದ್ಧಿಗೆ ಅವಕಾಶ ಇದೆ!
ಉದ್ಯೋಗ ಮೇಳದಲ್ಲಿ ಭಾಗವಹಿಸಿ ಉದ್ಯೋಗ ಲಭಿಸದೆ ಇದ್ದರೆ ಅಂತವರ ಡೇಟಾ ಬೇಸ್ ಪಡೆಯಲಾಗುತ್ತದೆ. ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯಿಂದ ಅಂತಹ ಅಭ್ಯರ್ಥಿಗಳ ಕೌಶಲ್ಯ ಅಭಿವೃದ್ಧಿಗೆ ವ್ಯವಸ್ಥೆ ಮಾಡಲಾಗುತ್ತದೆ. ಇನ್ನು, ಈ ಬಾರಿ ಉದ್ಯೋಗ ಮೇಳದಲ್ಲಿ ವಿವಿಧ ಕಂಪನಿಗಳ ಸ್ಟಾಲ್ ಸ್ಥಾಪಿಸಲಾಗುತ್ತಿದೆ. ಮೇಳಕ್ಕೆ ಬಂದವರು ಸ್ಟಾಲ್ಗಳಿಗೆ ಭೇಟಿ ನೀಡಿ, ಆಯಾ ಉದ್ಯೋಗಕ್ಕೆ ಸಂಬಂಧಿಸಿದ ಕೌಶಲ್ಯದ ಕುರಿತು ಮಾಹಿತಿ ಪಡೆಯಬಹುದು ಎಂದು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ನಿರ್ದೇಶಕ ನಾಗೇಂದ್ರ ಎಫ್.ಹೊನ್ನಳ್ಳಿ ತಿಳಿಸಿದ್ದಾರೆ.