ತುಂಬಿದ ತುಂಗಾ ನದಿಗೆ ತಮಾಷೆಗೆ ಹಾರಿದ ಭೂಪ!
– ಗಾಬರಿಗೊಂಡ ಜನರಿಂದ ಪೊಲೀಸರಿಗೆ ಫೋನ್
– ನೋಡ ನೋಡುತ್ತಲೇ ತುಂಬಿದ ನದಿಯಿಂದ ಎದ್ದು ಬಂದ!
NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗದಲ್ಲಿ ಮೈದುಂಬಿಕೊಂಡು ಹರಿಯುತ್ತಿರುವ ತುಂಗೆಗೆ ವ್ಯಕ್ತಿಯೋರ್ವ ತಮಾಷೆಗೆ ಹಾರಿ ಮತ್ತೆ ಎದ್ದು ಬರುವ ಮೂಲಕ ಸುದ್ದಿಯಲ್ಲಿದ್ದಾನೆ. ತುಂಬಿದ ತುಂಗಾ ನದಿಗೆ ತಮಾಷೆಗೆ ಹಾರಿದ ಭೂಪನ ನೋಡಿ ಗಾಬರಿಗೊಂಡ ಜನರಿಂದ ಪೊಲೀಸರಿಗೆ ಫೋನ್ ಮಾಡಿದ್ದಾರೆ. ಆದರೆ ನೋಡ ನೋಡುತ್ತಲೇ ತುಂಬಿದ ನದಿಯಿಂದ ಎದ್ದು ಬಂದಿದ್ದು ಈಗ ಈ ಘಟನೆ ಭಾರೀ ಸುದ್ದಿಯಾಗಿದೆ. ಆತನ ಬಗ್ಗೆ ಪರಿಶೀಲಿಸಿದಾಗ ಈತ ಟೈಮ್ ಪಾಸ್ ಗೆ ಈ ರೀತಿ ಮಾಡುತ್ತಿರುವುದಾಗಿ ತಿಳಿದು ಬಂದಿದೆ.
ಏನಿದು ಘಟನೆ?:
ಶಿವಮೊಗ್ಗ ಪಟ್ಟಣದಲ್ಲಿ ತುಂಗಾ ನದಿ ತುಂಬಿ ಹರಿಯುತ್ತದೆ. 60 ಸಾವಿರ ಕ್ಯೂಸೆಕ್ ನೀರು ತುಂಗೆ ಹರಿದು ಬರುವ ವೇಳೆ ನದಿಗೆ ಹಾರಿದ್ದನ್ನ ಕಂಡು ಕೋಟೆ ಪೊಲೀಸರಿಗೆ ಮತ್ತು ಅಗ್ನಿಶಾಮಕದಳಕ್ಕೆ ಜನರು ಕರೆ ಮಾಡಿದ್ದಾರೆ. ಹಳೆ ಸೇತುವೆ ಬಳಿ ವ್ಯಕ್ತಿಯೋರ್ವ ನದಿಗೆ ಹಾರಿ ರಾಜೀವ್ ಗಾಂಧಿ ಬಡಾವಣೆಯ ಬಳಿ ಎದ್ದು ಬರುತ್ತಿರುವ ದೃಶ್ಯ ಕಂಡು ಸಾರ್ವಜನಿಕರು ಭಯದಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕೋಟೆ ಪೊಲೀಸ್ ಠಾಣೆಗೆ ಮತ್ತು ಅಗ್ನಿಶಾಮಕದಳಕ್ಕೆ ಕರೆ ಮಾಡಿದ್ದಾರೆ.
ಅಗ್ನಿಶಾಮಕದಳ ಸ್ಥಳಕ್ಕೆ ದೌಡಾಯಿಸಿದ್ದಾರೆ. ಇತ್ತಕಡೆ ಕೋಟೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ನದಿಗೆ ಹಾರಿದವನು ನಿಧಾನವಾಗಿ ರಾಜೀವ್ ಗಾಂಧಿ ಬಡಾವಣೆಯ ಬಳಿಯಿಂದ ಹತ್ತಿಕೊಂಡು ಬಂದಿದ್ದಾನೆ. ಆತನನ್ನ ವಿಚಾರಿಸಿದಾಗ ಗಂಗಪ್ಪ ಯಾನೆ ಅಂಗೂರಿ ಎಂದು ಹೆಸರು ಹೇಳಿದ್ದಾನೆ. ನನಗೆ ಈಜುವುದು ಕ್ರೆಜ್ ಹಾಗಾಗಿ ಹಾರಿದ್ದೇ ಎಂದಿದ್ದಾನೆ.
ಮಾಹಿತಿ ಪ್ರಕಾರ ಈತ ಸಣ್ಣಪುಟ್ಟ ಹಣಕ್ಕೂ ಹಾರುತ್ತಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ : ತೀರ್ಥಹಳ್ಳಿ ಹುಡುಗನ ಅನುಮಾನಾಸ್ಪದ ಸಾವು!
HOW TO APPLY : NEET-UG COUNSELLING 2023