ಅಕ್ರಮ ಪಟಾಕಿ ಮೇಲೆ ಪೊಲೀಸ್ ದಾಳಿ!
– ಅಕ್ರಮವಾಗಿ ಸಂಗ್ರಹಿಸಿದ್ದ ಅಂಗಡಿಯ ಮೇಲೆ ಕೇಸ್
– ಜಿಲ್ಲೆಯ ಹಲವೆಡೆ ದೂರು ದಾಖಲು
– ಪಟಾಕಿ ಅವಘಡ ಎಲ್ಲೆಲ್ಲಿ ಏನಾಯ್ತು…?
NAMMUR EXPRESS NEWS
ಶಿವಮೊಗ್ಗ: ಅಕ್ರಮ ಪಟಾಕಿ ಮಾರಾಟ ಅಂಗಡಿಗಳ ಮೇಲೆ ಪೊಲೀಸರಿಂದ ದಾಳಿ ನಡೆಸಲಾಗುತ್ತಿದೆ. ಇದಕ್ಕೂ ಪೂರ್ವ ಹಸಿರು ಪಟಾಕಿಗಳನ್ನ ಮಾರಾಟ ಮಾಡುವ ಉದ್ದೇಶದಿಂದ ದಾಳಿ ನಡೆಸಿದ್ದ ಪೊಲೀಸರು ಅಕ್ರಮ ಪಟಾಕಿ ಮಾರಾಟ ಮಳಿಗೆ ಮೇಲೆ ಕೇಸ್ ಹಾಕಿದ್ದಾರೆ. ಜನ ವಸತಿ ಪ್ರದೇಶದಲ್ಲಿ ಪಟಾಕಿ ಮಾರಾಟ ಮಾಡುತ್ತಿದ್ದ ಮಾಹಿತಿ ಮೇರೆಗೆ ದಾಳಿ ನಡೆದಿದೆ. ನಗರದ ಗಾಂಧಿ ಬಜಾರ್ ನಲ್ಲಿ ಪೊಲೀಸರಿಂದ ದಾಳಿ ನಡೆದಿದೆ. ಶಿವಮೊಗ್ಗ ತಹಶಿಲ್ದಾರ್ ನಾಗರಾಜ್ ನೇತೃತ್ವದಲ್ಲಿ ದೊಡ್ಡಪೇಟೆ ಪೊಲೀಸರು ದಾಳಿ ನಡೆಸಿದ್ದಾರೆ.
ನಗರದ ಗಾಂಧಿ ಬಜಾರ್ ರಮೇಶ್ ಎನ್ನುವರ ಅಂಗಡಿ ಮೇಲೆ ದಾಳಿ ನಡೆದಿದೆ. 35 ಸಾವಿರಾರು ರೂಪಾಯಿ ಮೂಲ್ಯದ ಪಟಾಕಿ ವಶಕ್ಕೆ ಪಡೆಯಲಾಗಿದೆ. ಅಹಿತಕರ ಘಟನೆಗಳು ತಡೆಯಲು ಜಿಲ್ಲಾಡಳಿತ ಫ್ರೀಡಂ ಪಾರ್ಕ್ ನಲ್ಲಿ ಪಟಾಕಿ ಮಾರಾಟ ಮಾಡಲು ಅವಕಾಶ ಕಲ್ಪಿಸಿತ್ತು. ಜಿಲ್ಲಾಡಳಿತದ ಆದೇಶ ಇದ್ದರು ಜನ ನಿಬಿಡ ಪ್ರದೇಶದಲ್ಲಿ ಅಕ್ರಮ ಪಟಾಕಿ ಮಾರಾಟ ಮಾಡಲಾಗುತ್ತಿದೆ ಎಂಬ ದೂರಿನ ಆಧಾರದ ಮೇಲೆಗೆ ದಾಳಿ ನಡೆಯುತ್ತದೆ. ಜಿಲ್ಲೆಯ ಅನೇಕ ಕಡೆ ಕೂಡ ದಾಳಿ ನಡೆಸಲಾಗಿದೆ.
ಶಿವಮೊಗ್ಗದ ಅಂಗಡಿಯಲ್ಲಿ ಬೆಂಕಿ
ಅಂಗಡಿಯಲ್ಲಿ ವಸ್ತುಗಳು ಸುಟ್ಟು ಕರಕಲಾಗಿವೆ. ವಿದ್ಯಾನಗರದಲ್ಲಿ ಸೋಮವಾರ ಬೆಳಗಿನ ಜಾವ ಘಟನೆ ಸಂಭವಿಸಿದೆ.
ಸಹ್ಯಾದ್ರಿ ಕಾಲೇಜು ಮುಂಭಾಗ ಇರುವ ಸಮ್ಮುಬಂದ್ ಎಂಬುವವರಿಗೆ ಸೇರಿದ ದಿನಸಿ ಅಂಗಡಿಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಬೆಳಗಿನ ಜಾವ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೆ ಅಗ್ನಿಶಾಮಕ ಸಿಬ್ಬಂದಿ ವಿಚಾರ ತಿಳಿಸಿದ್ದು, ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣ ತಿಳಿದು ಬಂದಿಲ್ಲ.