ಆ.9ಕ್ಕೆ ಈಡಿಗ, ಬಿಲ್ಲವ, ಹಿಂದುಳಿದ ವರ್ಗಗಳ ಪೂರ್ವಭಾವಿ ಸಭೆ
– ಶಿವಮೊಗ್ಗದಲ್ಲಿ ಬಿ. ಕೆ. ಹರಿಪ್ರಸಾದ್ ನೇತೃತ್ವದಲ್ಲಿ ಸಭೆ
– ಈಡಿಗರು ಒಂದಾಗಬೇಕು ಎಂದು ಕರೆ ನೀಡಿದ ನಾಯಕ
NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗ ಆರ್ಯ ಈಡಿಗರ ಸಭಾ ಭವನದಲ್ಲಿ ಕರ್ನಾಟಕದ ಹಿಂದುಳಿದ ವರ್ಗಗಳ ಧ್ವನಿ, ಕಾಂಗ್ರೆಸ್ ಪಕ್ಷದ ನಾಯಕರಾದ ಬಿ ಕೆ ಹರಿಪ್ರಸಾದ್ ಅವರು ಬೆಂಗಳೂರಲ್ಲಿ ಆ.9ರಂದು ನಡೆಯುತ್ತಿರುವ ಈಡಿಗರು, ಬಿಲ್ಲವ ಮತ್ತು ಹಿಂದುಳಿದ ವರ್ಗಗಳ ಪೂರ್ವ ಭಾವಿ ಸಭೆ ಬಗ್ಗೆ ಮಾಹಿತಿ ಹಾಗೂ ಕಾರ್ಯಕ್ರಮದ ತಯಾರಿಯ ಬಗ್ಗೆ ಮಾಹಿತಿ ನೀಡಿದರು.
ಮೀಸಲಾತಿ ಹಾಗೂ ಸರ್ಕಾರದಿಂದ ಸಿಗುವ ಸೌಲಭ್ಯ ರಾಜ್ಯದ ಅತಿಕಮ್ಮಿ ಜನಸಂಖ್ಯೆ ಇರುವ ಸಮುದಾಯಗಳಿಗೆ ಸಿಗಬೇಕು ಅದು ನಮ್ಮ ಹಕ್ಕು. ಚುನಾವಣೆ ಸಂಧರ್ಭದಲ್ಲಿ ನಮ್ಮ ಪಕ್ಷ ಸೇರಿ ಎಲ್ಲಾ ರಾಜಕೀಯ ಪಕ್ಷಗಳು ನೀಡುವ ಭರವಸೆಗಳನ್ನು ಈಡೇರಿಸಲು ಮೀನಮೇಷ ಎಣಿಸುವ ಕಾಲಘಟ್ಟದಲ್ಲಿ ನಾವು ಇದ್ದೀವಿ. ಹಾಗಾಗಿ ಹಿಂದುಳಿದ ವರ್ಗಗಳ ಒಂದೇ ವೇದಿಕೆಯಲ್ಲಿ ಚರ್ಚೆ ಮಾಡಲು ಈ ಪೂರ್ವಭಾವಿ ಸಭೆ. ಎಲ್ಲರೂ ಒಗ್ಗೂಡಬೇಕು ಎಂದರು.
ಆರ್ಯ ಈಡಿಗರ ಸಂಘದ ಜಿಲ್ಲಾ ಅಧ್ಯಕ್ಷರಾದ ಹೊಲ್ತಿಕೊಪ್ಪ ಶ್ರೀಧರ್, ಪ್ರಮುಖರಾದ ಡಾ.ಸುಂದರೇಶ್ ಹಿಂದುಳಿದ ವರ್ಗಗಳ ಒಕ್ಕೂಟದ ರಾಜು ಸಾಧು ಶೆಟ್ಟಿ, ಸಮಾಜದ ಪ್ರಮುಖರಾದ ಉಮಾಪತಿ ಮೋಹನ್, ಕಡ್ತೂರು ದಿನೇಶ್, ಗೀತಾಂಜಲಿ, ತೀ.ನಾ ಶ್ರೀನಿವಾಸ್ ಕುರುವಳ್ಳಿ ನಾಗರಾಜ್ ಇತರೆ ಪ್ರಮುಖರು ಭಾಗವಹಿಸಿದ್ದರು