ಸಾಗರದ ಸಿಗಂದೂರು ಲಾಂಚ್ ಪ್ರಯಾಣ ಶುರು!
– ಚೌಡೇಶ್ವರಿ ದೇವಸ್ಥಾನಕ್ಕೆ ಹೋಗುವವರಿಗೆ ಅನುಕೂಲ
– ಪ್ರಯಾಣಿಕರ ಜತೆ ವಾಹನ ಕೂಡ ಹೂತ್ತು ಸಾಗಾಟ!
NAMMUR EXPRESS NEWS
ಸಾಗರ: ಮಳೆಯಿಲ್ಲದೇ ಹಿನ್ನೀರಲ್ಲಿ ನೀರಿನ ಪ್ರಮಾಣ ಸಂಪೂರ್ಣ ಕಡಿಮೆಯಾಗಿದ್ದರಿಂದ ಸಂಚಾರವನ್ನೇ ಸ್ಥಗಿತಗೊಳಿಸುವ ಮಟ್ಟಕ್ಕೆ ತಲುಪಿದ್ದ ಸಿಗಂದೂರು ಲಾಂಚ್ ಇದೀಗ ಮತ್ತೆ ಶುರುವಾಗಿದೆ. ವಾಹನಗಳನ್ನು ಸಹ ಹೊತ್ತುಕೊಂಡು ಈ ಕಡೆಯಿಂದ ಆ ಕಡೆ , ಆ ಕಡೆಯಿಂದ ಈ ಕಡೆಗೆ ಸಂಚರಿಸಲಿವೆ.
ಲಿಂಗನಮಕ್ಕಿ ಜಲಾಶಯದ ಹಿನ್ನೀರಿನ ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಮಳೆಬೀಳುತ್ತಿದ್ದು, ಹಿನ್ನೀರಿನಲ್ಲಿ ಏರಿಕೆ ಕಾಣುತ್ತಿದೆ. ವಿಶೇಷವಾಗಿ ಲಾಂಜ್ನ ಪ್ಲಾಟ್ ಫಾರಂನವರೆಗೂ ಕಳಸವಳ್ಳಿ, ಅಂಬಾರಗೊಡ್ಡು, ಹೊಳೆಬಾಗಿಲಿನಲ್ಲಿ ನೀರು ಏರಿಕೆಯಾಗಿದೆ. ಇದರಿಂದಾಗಿ ಶುಕ್ರವಾರದಿಂದ ಸಂಚಾರ ಶುರುವಾಗಿದೆ.
ಕಳೆದ 20 ದಿನಗಳಿಂದ ಲಾಂಚ್ ನಲ್ಲಿ ಪ್ರಯಾಣಿಕರನ್ನ ಮಾತ್ರ ಸಾಗಿಸಲಾಗುತ್ತಿತ್ತು. ಇದೀಗ ನೀರು ಏರಿಕೆಯಾಗಿದ್ದರಿಂದ ವಾಹನಗಳನ್ನ ಲಾಂಚ್ಗೆ ಹಾಕಲಾಗಿತ್ತು. ಯಾವುದೇ ತೊಂದರೆ ಆಗದ ಹಿನ್ನೆಲೆಯಲ್ಲಿ ಮತ್ತೆ ಅಧಿಕೃತವಾಗಿ ಲಾಂಚ್ನಲ್ಲಿ ವಾಹನ ಸಾಗಾಟಕ್ಕೆ ಅನುವು ಮಾಡಿಕೊಡಲಾಗಿದೆ.
ಇದನ್ನೂ ಓದಿ : ರೈತರಿಗೆ ಶೂನ್ಯ ಬಡ್ಡಿದರದಲ್ಲಿ 5 ಲಕ್ಷವರೆಗೆ ಸಾಲ!
HOW TO APPLY : NEET-UG COUNSELLING 2023