ಶಿವಮೊಗ್ಗ ಏರ್ಪೋರ್ಟ್: ತೀರ್ಥಹಳ್ಳಿ ನ್ಯಾಷನಲ್ ಕನ್ಸ್ಟ್ರಕ್ಷನ್ ಸಂಸ್ಥೆ ಸಾಧನೆ!
– ಶಿವಮೊಗ್ಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೌರವ
– ಅತೀ ವೇಗವಾಗಿ, ಅತ್ಯುತ್ತಮ ಗುಣಮಟ್ಟದ ಕಾಮಗಾರಿ
NAMMUR EXPRESS NEWS
ಶಿವಮೊಗ್ಗ/ತೀರ್ಥಹಳ್ಳಿ: ತೀರ್ಥಹಳ್ಳಿ ಮೂಲದ ರಾಜ್ಯದ ಪ್ರಸಿದ್ಧ ರಸ್ತೆ ನಿರ್ಮಾಣ ಸಂಸ್ಥೆ ನ್ಯಾಷನಲ್ ಕನ್ಸ್ಟ್ರಕ್ಷನ್ ಸಂಸ್ಥೆ ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿಯನ್ನು ಮಾಡಿದೆ. ಅತ್ಯುತ್ತಮ ಗುಣಮಟ್ಟ ಹಾಗೂ ವೇಗದ ಕಾಮಗಾರಿಗೆ ಹೆಸರಾದ ಸಂಸ್ಥೆ ಇದೀಗ ಆ.31ರಂದು ಉದ್ಘಾಟನೆಗೊಳ್ಳಲಿರುವ ಶಿವಮೊಗ್ಗ ವಿಮಾನ ನಿಲ್ದಾಣದ ಕಾಮಗಾರಿಯನ್ನು ಮಾಡಿದೆ.
ಒಟ್ಟು 280 ಕೋಟಿ ವೆಚ್ಚದ ಫ್ರಂಟ್ ಎಲಿವೇಶನ್, ಅಪ್ರಾನ್ (ವಿಮಾನ ನಿಲ್ದಾಣದ ವ್ಯವಸ್ಥೆ), ಪೆರಿಮೀಟರ್ ರೋಡ್, ಕಾಂಪೌಂಡು, ಗಾರ್ಡನಿಂಗ್ , ಫುಲ್ ಕಾಂಪೌಂಡು,ಪಾರ್ಕಿಂಗ್ ಏರಿಯಾ, ಕ್ರಾಸ್ ಗೇಟ್, ರನ್ ವೇ, ಐಸುಲೇಶನ್, ಫ್ರಂಟ್ ಗೇಟು, ವಿಮಾನ ನಿಲ್ದಾಣದ ಇತರೆ ಕಾಮಗಾರಿಯನ್ನು ನ್ಯಾಷನಲ್ ಸಂಸ್ಥೆ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ನ್ಯಾಷನಲ್ ಸಂಸ್ಥೆಗೆ ಗೌರವ
ಶಿವಮೊಗ್ಗದಲ್ಲಿ ಬುಧವಾರ ನಡೆದ ವಿಜಯ ಕರ್ನಾಟಕ ಸಂಸ್ಥೆಯ ಶಿವಮೊಗ್ಗ ವಿಮಾನ ನಿಲ್ದಾಣ ಆರಂಭದ ಹೊತ್ತಿನಲ್ಲಿ ನಡೆದ ಹೂಡಿಕೆದಾರರ ಸಮಾವೇಶದಲ್ಲಿ ನ್ಯಾಷನಲ್ ಕನ್ಸ್ಟ್ರಕ್ಷನ್ ಸಂಸ್ಥೆಯ ಪಾಲುದಾರರಾದ ಅಬ್ದುಲ್ ರೆಹಮಾನ್ ಅವರನ್ನು ಗೌರವಿಸಲಾಯಿತು.