ಶಿವಮೊಗ್ಗ ಜಿಲ್ಲೆ ಟಾಪ್ ನ್ಯೂಸ್
ಎಲ್ಲೆಡೆ ಹೆಚ್ಚಿದೆ ಶಾರ್ಟ್ ಸರ್ಕ್ಯೂಟ್ ಹುಷಾರ್!
– ಆಯನೂರಲ್ಲಿ ಹಾರ್ಡ್ ವೇರ್ ಅಲ್ಲಿ ಶಾರ್ಟ್: ಲಕ್ಷ ಲಕ್ಷ ಹಾನಿ
– ಶಿವಮೊಗ್ಗ : ಮೆಗ್ಗಾನ್ ಪಾರ್ಕಿಂಗ್ ಬಳಿ ಲಾಂಗ್ ಹಿಡಿದವರು ಅರೆಸ್ಟ್
– ಶಿವಮೊಗ್ಗ: ತುಂಗಾ ನದಿ ಮಧ್ಯೆ ಬಂಡೆ ಮೇಲೆ ಸಿಲುಕಿದ ವ್ಯಕ್ತಿ!
NAMMUR EXPRESS NEWS
ಆಯನೂರು : ಶಾರ್ಟ್ ಸರ್ಕ್ಯೂಟ್ನಿಂದ ಹಾರ್ಡ್ವೇರ್ ಅಂಗಡಿಗೆ ಬೆಂಕಿ ತಗುಲಿ ನಗದು ಹಾಗೂ ಲಕ್ಷಾಂತರ ರೂಪಾಯಿ ಮೌಲ್ಯದ ಸಾಮಗ್ರಿಗಳು ಆಹುತಿಯಾದ ಘಟನೆ ಆಯನೂರಿನಲ್ಲಿ ನಡೆದಿದೆ. ಆರ್.ವಿ.ಟ್ರೇಡರ್ಸ್ ಕಬ್ಬಿಣ ಹಾಗೂ ಸಿಮೆಂಟ್ ಅಂಗಡಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಸಾಮಗ್ರಿಗಳು ಸುಟ್ಟು ಕರಕಲಾಗಿವೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು. ಶಾರ್ಟ್ ಸರ್ಕಿಟ್ನಿಂದ ಘಟನೆ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಬೆಂಕಿ ಹೊತ್ತಿದ ಕೆಲವೇ ನಿಮಿಷದಲ್ಲಿ ವ್ಯಾಪಕವಾಗಿ ಹರಡಿದೆ. ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಹೋಗಿವೆ. ಮೆಸ್ಕಾಂ ಸಿಬ್ಬಂದಿ, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು.
– ಶಿವಮೊಗ್ಗ : ಮೆಗ್ಗಾನ್ ಪಾರ್ಕಿಂಗ್ ಬಳಿ ಲಾಂಗ್ ಹಿಡಿದು ಭಯ ಸೃಷ್ಟಿಸಿದ ಇಬ್ಬರು ಯುವಕರು ಅರೆಸ್ಟ್
ಶಿವಮೊಗ್ಗ :ಪಾರ್ಕಿಂಗ್ ಆವರಣದಲ್ಲಿ ಮಚ್ಚು ಲಾಂಗು ಹಿಡಿದು ಪ್ರದರ್ಶನ ಮಾಡಿ ಭಯ ಸೃಷ್ಟಿಸಲು ಪ್ರಯತ್ನಿಸಿದ ಆರೋಪದ ಅಡಿಯಲ್ಲಿ ಇಬ್ಬರು ಟಿಪ್ಪುನಗರ ನಿವಾಸಿಗಳನ್ನ ದೊಡ್ಡಪೇಟೆ ಬಂಧಿಸಿದ್ದಾರೆ. ಮೆಗ್ಗಾನ್ ಆಸ್ಪತ್ರೆಯ ಪಾರ್ಕಿಂಗ್ ಬಳಿಯಲ್ಲಿ ಅನುಮಾಸ್ಪದವಾಗಿ ನಿಂತಿದ್ದ ಇಬ್ಬರು ಯುವಕರ ಪೈಕಿ ಓರ್ವ ಮತ್ತೊಂದನ್ನ ಹಿಡಿದು ಆಕಡೆಯಿಂದ ಈಕಡೆಗೆ ಓಡಾಡುತ್ತಿದ್ದ. ಇದರಿಂದ ಆಸ್ಪತ್ರೆಯ ಬಳಿಯಲ್ಲಿ ಸೇರಿದ್ದ ಜನರಲ್ಲಿ ಆತಂಕವೂ ಮೂಡಿತ್ತು. ಈ ಬಗ್ಗೆ ವಿಷಯ ತಿಳಿದು ಸ್ಥಳಕ್ಕೆ ಬಂದ ದೊಡ್ಡಪೇಟೆ ಪೊಲೀಸರು ಇಬ್ಬರು ಯುವಕರನ್ನ ಹಿಡಿದಿದ್ದಾರೆ. ಆ ಬಳಿಕ ಪರಿಶೀಲಿಸಿದಾಗ ಇನ್ನೊಬ್ಬನ ಬಳಿಯುಲ್ಲಿ ಚಾಕು ಇರುವುದು ಗೊತ್ತಾಗಿದೆ. ಯಾವ ಉದ್ದೇಶಕ್ಕಾಗಿ ಯುವಕರು ಅಲ್ಲಿದ್ದರು. ಯಾರು ಟಾರ್ಗೆಟ್ ಆಗಿದ್ದರು ಎಂಬುದು ಇನ್ನಷ್ಟೆ ಗೊತ್ತಾಗಬೇಕಿದೆ.
– ಶಿವಮೊಗ್ಗ: ತುಂಗಾ ನದಿ ಮಧ್ಯೆ ಬಂಡೆ ಮೇಲೆ ಸಿಲುಕಿದ ವ್ಯಕ್ತಿ
ಶಿವಮೊಗ್ಗ : ತುಂಗಾ ನದಿ ಮಧ್ಯೆ ಬಂಡೆ ಮೇಲೆ ಸಿಲುಕಿದ್ದ ವ್ಯಕ್ತಿಯೊಬ್ಬನನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಶಿವಮೊಗ್ಗದ ಹಳೆ ಸೇತುವೆ ಪಕ್ಕದಲ್ಲಿರುವ ಬಂಡೆ ಮೇಲೆ ವ್ಯಕ್ತಿ ಸಿಲುಕಿದ್ದ. ಗೋಪಾಲ್ (35) ಎಂಬಾತ ತುಂಗಾ ನದಿ ಮಧ್ಯೆ ಬಂಡೆ ಮೇಲೆ ಕುಳಿತಿದ್ದ. ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಗೋಪಾಲ್ ಕಳೆದ ರಾತ್ರಿ ತುಂಗಾ ನದಿ ನಡುವೆ ಇರುವ ಬಂಡೆ ಮೇಲೆ ಹೋಗಿ ಮಲಗಿದ್ದ ಎಂದು ಹೇಳಲಾಗುತ್ತಿದೆ. ಬೆಳಗ್ಗೆ ಎಚ್ಚರವಾದಾಗ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಿ ದಡಕ್ಕೆ ಬರಲಾಗದೆ ಆತಂಕಕ್ಕೀಡಾಗಿದ್ದ. ಇದನ್ನು ಗಮನಿಸಿದ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು.